ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.30:
ಕುವೆಂಪು ವಿಶ್ವಮಾನವ ಸಂದೇಶದ ಮನುಜಮತ ವಿಶ್ವಪಥ ಸರ್ವೋದಯ ಸಮನ್ವಯ ಪೂರ್ಣದೃಷ್ಟಿಿ ಪಂಚಮಂತ್ರಗಳನ್ನು ಹೇಳುತ್ತದೆ. ಆದರೆ ಸರ್ವರ ಸರ್ವೋದಯವೇ ಕುವೆಂಪು ಸಾಹಿತ್ಯದ ಒಟ್ಟು ಸಾರವಾಗಿದೆ ಎಂದು ಲಿಂಗಸುಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಾಧ್ಯಾಾಪಕಿ ಸರಿತಾ ಇಂಚೂರ ಹೇಳಿದರು.
ಪಟ್ಟಣದ ಶ್ರೀ ಉಮಾಮಹೇಶ್ವರಿ ಪದವಿ ಪೂರ್ವ ಕಾಲೇಜು ಹಾಗೂ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿಿನ ಸಹಯೋಗದಲ್ಲಿ ನಡೆದ ಕುವೆಂಪು ವಿಚಾರಧಾರೆಗಳ ಕುರಿತ ಸೋಮವಾರ ಉಪನ್ಯಾಾಸ ನೀಡಿದ ಅವರು ಕುವೆಂಪು ಸಾಹಿತ್ಯ ವೈಚಾರಿಕ ಪ್ರಜ್ಞೆಯನ್ನು ಮಾನವೀಯ ಮೌಲ್ಯಗಳನ್ನು ಒಟ್ಟೊೊಟ್ಟಿಿಗೆ ಬೆಳೆಸುತ್ತದೆ. ಮೌಢ್ಯವನ್ನು ತಿರಸ್ಕರಿಸುವ ಕುವೆಂಪು ವೈಚಾರಿಕ ಚಿಂತನೆಗಳು ಮಾನವ ಧರ್ಮ ಎತ್ತಿಿಹಿಡಿಯುತ್ತವೆ. ಹುಟ್ಟುವ ಹಸುಗೂಸು ವಿಶ್ವಮಾನವನಾಗಿ ಹುಟ್ಟಿಿ ಜಾತಿ, ಮತ, ಪಂತಗಳಲ್ಲಿ ಬಂಧಿಯಾಗುತ್ತದೆ. ಈ ಬಂಧನವನ್ನು ಕಳಚಿ ವಿಶ್ವಮಾನವನನ್ನಾಾಗಿಸುವ ಪ್ರಜ್ಞೆಯೇ ಇಂದಿನ ಶಿಕ್ಷಣದ ಆದ್ಯತೆಯಾಗಬೇಕು ಎನ್ನುವುದು ಕುವೆಂಪು ಅವರ ಒತ್ತಾಾಸೆಯಾಗಿತ್ತು. ಕುವೆಂಪು ಸಾಹಿತ್ಯದ ಓದಿನಿಂದ ನಮ್ಮಲ್ಲಿರುವ ದಾಸ್ಯಭಾವನೆಯಿಂದ ಬಿಡುಗಡೆಗೊಂಡು ಧರ್ಮಾತೀತವಾಗಿ ಬದುಕುವ ರೀತಿಯನ್ನು ಕಲಿತುಕೊಳ್ಳ ಬೇಕೆಂದರು.
ಉಪನ್ಯಾಾಸ ಕಾರ್ಯಕ್ರಮ ಉದ್ಘಾಾಟಿಸಿದ ಕಥೆಗಾರ ಶರಣಬಸವ ಗುಡದಿನ್ನಿಿ ಮಾತಾನಾಡಿ ಕುವೆಂಪು ಬಾಲ್ಯ ಅನೇಕ ಸವಾಲುಗಳಿಂದ ಕಳೆದರೂ. ಪ್ರಕೃತಿಯ ಆರಾಧನೆಯು ಅವರ ಸಾಹಿತ್ಯದ ಆಯಾಮವಾಗಿದ್ದು, ಪ್ರಕೃತಿಯ ಅನುಭೂತಿಯಲ್ಲಿ ಆಧ್ಯಾಾತ್ಮದ ತುದಿತಲುಪಿದರು. ವಿವೇಕಾನಂದ ರಾಮಕೃಷ್ಣರು ಕುವೆಂಪು ಅವರನ್ನು ಪ್ರಭಾವಿಸಿದರು ಎಂದರು. ಉಮಾಮಹೇಶ್ವರಿ ಸಮೂಹ ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಶರಣಬಸವ ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು ಕಸಾಪ ಅಧ್ಯಕ್ಷ ಮಹಾದೇವಪ್ಪ ನಾಗರಾಳ ಪ್ರಾಾಚಾರ್ಯ ವೀರೇಶ ಆದೋನಿ ಮಾತನಾಡಿದರು. ಕು.ಪಾರ್ವತಿ ಕಸಾಪದ ಮಹಿಳಾ ಪ್ರತಿನಿಧಿಗಳಾದ ಸವಿತಾ ಗೌಡರ, ಈರಮ್ಮ ಕುಂಬಾರ, ಗೌರವ ಕಾರ್ಯದರ್ಶಿ ಗಂಗಾಧರ ಪತ್ತಾಾರ, ಸದಸ್ಯ ಹೈಮದ್ಖಾದರಬಾಷಾ ಉಪನ್ಯಾಾಸಕರಿದ್ದರು.
ಸರ್ವರ ಸರ್ವೋದಯ ಕುವೆಂಪು ಸಾಹಿತ್ಯದ ಸಾರ : ಸರಿತಾ ಇಂಚೂರ

