ಸುದ್ದಿಮೂಲ ವಾರ್ತೆ
ಹೊಸಕೋಟೆ,ಸೆ.29:ನಗರದಲ್ಲಿ ಸುನತುಲ್ಲ ಜಮಾಯತ್ ಕಮಿಟಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಭೆ ಏರ್ಪಡಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ನಾವು ಯಾವುದೇ ಮುಸ್ಲೀಂ ಭಾಂದವರ ಮನೆಗಳಿಗೆ ಹೋದರೆ ಪ್ರೀತಿಯಿಂದ ಸ್ವಾಗತಿಸಿ ಹಣ್ಣು ಹಂಪಲು ನೀಡುತ್ತಾರೆ. 1400 ವರ್ಷಗಳಿಂದ ನೆನಪಿನಲ್ಲಿರುವ ಮಹಮದ್ ಪೈಗಂಬರರು ಸಮಾಜಕ್ಕೆ ಕೊಟ್ಟಿರುವ ಕೊಡುಗೆ ಮತ್ತು ಸಂದೇಶ ಬದಲಾಗಿಲ್ಲ. ಕಳೆದ 20 ವರ್ಷಗಳಿಂದ ಹೊಸಕೋಟೆಯಲ್ಲಿ ಈ ದಿನವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದೇವೆ. ಎಲ್ಲಾ ಧರ್ಮದವರಾದ ನಾವು ಭಾರತೀಯರು ಎಂದು ಹೇಳಿದರು.
ಇಸ್ಲಾಂ ಧರ್ಮದ ಪ್ರಚಾರಕ ಮಂಗಳೂರಿನ ಅಲ್ತಾಪ್ ಸಕೌಫಿ ಅಲ್ ಮೂಯಿನ್ ಮಾತನಾಡಿ, ಈ ನಾಡಿನ ಭಾವೈಕ್ಯತೆಯನ್ನು ಸಾಮರಸ್ಯ ಕದಡುವ ಕೆಲಸ ಇಸ್ಲಾಂ ಧರ್ಮದವರು ಮಾಡಬಾರದು. ನಮ್ಮ ರ್ಯಾಲಿಗಳು ಅಶಾಂತಿ ಕದಡುವುದು ಬೇಡ. ಯಾರನ್ನು ಬೊಟ್ಟು ಮಾಡಿ ಫೈಗಂಬರ್ ದೂಷಿಸಿಲ್ಲ, ಬೈದಿಲ್ಲ, ಅವ್ಯಾಚ್ಚ ಶಬ್ದಗಳಿಂದ ನಿಂದಿಸಿಲ್ಲ. ಕೋಮುವಾದ ನಡೆಸುವವನು ನನ್ನವನಲ್ಲ, ಭಯೋತ್ಪಾದನೆ ನಡೆಸುವವನು ನನ್ನವನಲ್ಲ. ಧರ್ಮಕ್ಕೆ ಕಳಂಕವನ್ನುಂಟು ಮಾಡುವವನು ನನ್ನವನಲ್ಲ ಎಂದು ಫೈಗಂಬರ್ ಹೇಳಿದ್ದಾರೆ. ಎಲ್ಲಾ ಧರ್ಮದವರಾದ ನಾವೆಲ್ಲರೂ ಐಕ್ಯತೆಯಿಂದ ಸ್ವತಂತ್ರವಾಗಿರಬೇಕು ಎಂಬುದು ನಮ್ಮ ಮಂತ್ರ ಎಂದು ಹೇಳಿದರು.
ವೇದಿಕೆ ಮೇಲೆ ಧರ್ಮಗುರುಗಳಾದ ಶಹದ್ ಎ.ಗೌಸುಲ್ ಅಜಂ. ಅಜು, ಸಿರಾಜ್, ಇಪ್ತಿಯಾಜ್, ನವಾಜ್, ಜಾವೀದ್, ಇಮ್ರಾನ್, ಅಂಜು, ಕಾಂಗ್ರೆಸ್ ನಗರ ಘಟಕದ ಬಿ.ವಿ ಬೈರೇಗೌಡ, ಫಾರೂಖ್, ಮೌಲಾ, ನಿಸ್ಸಾರ್ ಇತರರು ಹಾಜರಿದ್ದರು.