ಸುದ್ದಿಮೂಲ ವಾರ್ತೆ
ಸೂಲಿಬೆಲೆ, ಜೂ 13 : ವಿದ್ಯೆ ಎಂಬುದು ಯಾರು ಕದಿಯಲಾಗದ ಆಸ್ತಿ ಅಂತಹ ಆಸ್ತಿಯನ್ನು ಮಕ್ಕಳಿಗೆ ನೀಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಸೂಲಿಬೆಲೆ ಸರ್ಕಾರಿ ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮ, ಉರ್ದು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿ ಮಾತನಾಡಿದರು. ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಹೊಸಕೋಟೆ ತಾಲ್ಲೂಕು ಮೊದಲ ಸ್ಥಾನದಲ್ಲಿದೆ. ಇದಕ್ಕೆ ಶಿಕ್ಷಕರ ಕೊಡುಗೆ ಅಪಾರ ಎಂದರು.
ಯುವ ಮುಖಂಡ ಜಿ.ನಾರಾಯಣಗೌಡ ಮಾತನಾಡಿ, ಮಕ್ಕಳಲ್ಲಿ ಹಾಗೂ ಪೋಷಕರಲ್ಲಿರುವ ಖಾಸಗಿ ಶಾಲೆಗಳು ಹಾಗೂ ಆಂಗ್ಲ ಮಾಧ್ಯಮ ವ್ಯಾಮೋಹ ಬಿಡಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಸರ್ಕಾರಿ ಶಾಲೆಗಳ ಉಳಿವಿಗಾಗಿ ಪೋಷಕರು ಸಹಕಾರ ನೀಡಬೇಕು ನಮ್ಮೂರ ಶಾಲೆಗಳು ಉಳಿಯಬೇಕು ಎಂದರು.
ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ವಿ. ಸತೀಶ್ ಗೌಡ ಮಾತನಾಡಿ, ಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ಶಿಕ್ಷಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಸಂಸದ ಬಿ.ಎನ್.ಬಚ್ಚೇಗೌಡರ ಸೇವೆ ಅನನ್ಯ. ಸೂಲಿಬೆಲೆ ಗ್ರಾಮಕ್ಕೆ ಸರ್ಕಾರಿ ಉರ್ದುಪ್ರೌಢಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು ಸ್ಥಾಪನೆ, ಸರ್ಕಾರಿ ಪದವಿ ಕಾಲೇಜಿಗೆ 5 ಎಕರೆ ಜಾಗ ಹಾಗೂ 2 ಕೋಟಿ ಅನುದಾನ ಕೊಡಿಸುವ ಮೂಲಕ ಅನೇಕ ಹೆಣ್ಣು ಮಕ್ಕಳಿಗೆ ಪದವಿ ಶಿಕ್ಷಣ ದೊರಕುವಂತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಬಮೂಲ್ ನಿರ್ದೇಶಕ ಮಂಜುನಾಥ್, ಗ್ರಾ.ಪಂ ಉಪಾಧ್ಯಕ್ಷ ಶಿವರುದ್ರಪ್ಪ, ಮುಖಂಡ ಅಲ್ತಾಪ್ಪಾಷ, ಮಾಜಿ ಅಧ್ಯಕ್ಷ ಜನಾರ್ಧನರೆಡ್ಡಿ, ಹಾಪ್ಕಾಮ್ಸ್ ನಿರ್ದೇಶಕ ಎಂ.ಬಿ.ವೆಂಕಟೇಶ್, ತಾ.ಪಂ. ಮಾಜಿ ವಿರೋಧಪಕ್ಷ ನಾಯಕ ಡಾ.ಡಿ.ಟಿ. ವೆಂಕಟೇಶ್, ಮಾಜಿ ಸದಸ್ಯ ಭುವನಹಳ್ಳಿ ಗೋಪಾಲಪ್ಪ, ಗಿಡ್ಡಪ್ಪನಹಳ್ಳಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಅಕ್ಬರ್ಅಲಿಖಾನ್, ಶಾಲಾ ಅಧ್ಯಕ್ಷ ಇಮ್ರಾನ್, ಉಪಾಧ್ಯಕ್ಷ ಸೈಯದ್ ಮಹಬೂಬ್, ಇನಾಯತ್, ನವಾಜ್, ದೌಲತ್, ರಿಜ್ವಾನ್, ಗ್ರಾ.ಪಂ.ಸದಸ್ಯರಾದ ನರಸಿಂಹಮೂರ್ತಿ, ಖಾಜಾ, ಸಾಬೀರ್, ಕೃಷ್ಣಪ್ಪ, ಜಿಯಾವುಲ್ಲಾ, ಲೊಕೇಶ್, ರಾಜೇಶ್ವರಿ, ಇತರರು ಇದ್ದರು.