ಸುದ್ದಿಮೂಲ ವಾರ್ತೆ ಮುದ್ದೇಬಿಹಾಳ, ೆ.20:
ಮನುಕುಲಕ್ಕೆೆ ಮಾರ್ಗದರ್ಶಿಯಾದ ಸರ್ವಜ್ಞರ ತ್ರಿಿಪದಿಗಳು ಇಂದಿಗೂ ಸಾರ್ವಕಾಲಿಕ ಸತ್ಯಗಳಾಗಿವೆ. ತಮ್ಮ ಸರಳ ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ತಹಶೀಲ್ದಾಾರ್ ಕೀರ್ತಿ ಚಾಲಕ್ ಹೇಳಿದರು.
ಪಟ್ಟಣದ ತಹಶೀಲ್ದಾಾರ್ ಕಚೇರಿಯಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ತ್ರಿಿಪದಿ ಕವಿ, ಸರ್ವಜ್ಞರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಲೋಕಕ್ಕೆೆ ಸರ್ವಜ್ಞರ ಕೊಡುಗೆ ಅಪಾರ ಎಂದು ಸ್ಮರಿಸಿದ ಅವರು, ಸರ್ವಜ್ಞರು ಕೇವಲ ಕವಿಯಷ್ಟೇ ಅಲ್ಲ, ಒಬ್ಬ ಮಹಾನ್ ದಾರ್ಶನಿಕರೂ ಆಗಿದ್ದರು. ಅವರ ಜೀವನದ ಮೌಲ್ಯಗಳು ಮತ್ತು ಸಂದೇಶಗಳು ಇಂದಿನ ಆಧುನಿಕ ಸಮಾಜಕ್ಕೆೆ ಅತ್ಯಂತ ಅವಶ್ಯಕವಾಗಿವೆ ಎಂದರು.
ತಹಶಿಲ್ದಾಾರರ ಕಚೇರಿಯಲ್ಲಿ ತ್ರಿಿಪದಿ ಕವಿ ಸರ್ವಜ್ಞರ ಭಾವಚಿತ್ರಕ್ಕೆೆ ಪುಷ್ಪಾಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಉಪತಹಶೀಲ್ದಾಾರ ಎನ್.ಬಿ. ಮಾವಿನಮಟ್ಟಿಿ, ಎಂ.ಎಸ್. ಗೋನಾಳ, ಹಾಗೂ ಶಿರಸ್ತೇದಾರರಾದ ಎಸ್.ಎಂ. ಸಜ್ಜನ, ಜಿ.ಎನ್. ಕಟ್ಟಿಿ,ಬಿ.ಎಸ್. ಮುದ್ದೇಬಿಹಾಳ, ಕುಂಬಾರ ಸಮಾಜದ ಮುಖಂಡರಾದ ಸಂಗಣ್ಣ ಕುಂಬಾರ, ಸಿದ್ರಾಾಮಪ್ಪ ಕುಂಬಾರ,ಅಂಬಣ್ಣ ಕುಂಬಾರ, ಬಸವರಾಜ ಕುಂಬಾರ (ಚವನಬಾವಿ), ಮಹಾಂತೇಶ ಕುಂಬಾರ, ಶ್ರೀಶೈಲ ಕುಂಬಾರ, ಶಂಕ್ರಪ್ಪ ಕುಂಬಾರ, ಸುಭಾಸ ಕುಂಬಾರ, ಹಣಮಂತ ಕುಂಬಾರ,ಮಲ್ಲಣ್ಣ ಕುಂಬಾರ ನಂದವಾಡಗಿ ಪತ್ರಕರ್ತರಾದ ಕೆ.ಎಂ. ರಿಸಲದ್ದಾಾರ, ಮುತ್ತು ಟಕ್ಕಳಕಿ ಇದ್ದರು.
ಸಮಾಜದ ಅಂಕುಡೊಂಕು ತಿದ್ದಿದ ದಾರ್ಶನಿಕ ಕವಿ ಸರ್ವಜ್ಞ : ಚಾಲಕ್

