ಸುದ್ದಿಮೂಲ ವಾರ್ತೆ
ಯಾದಗಿರಿ, ಜು. 3 – ಇಂದು ಜುಲೈ 4 ಮಂಗಳವಾರ ನಗರಕ್ಕೆ ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಆಗಮಿಸಲಿದ್ದಾರೆ.
ಜುಲೈ 5 ಬುಧವಾರ, ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ದಿವ್ಯ ಸಾನಿಧ್ಯದಲ್ಲಿ ಯಾದಗಿರಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಗ್ಗೆ ಮುದ್ರದಾರಣೆ, ಬಳಿಕ 10.30ಕ್ಕೆ ಭಕ್ತರಾದ ಅಪ್ಪಾರವ್ ಎಂ. ಸೌದಿ ಅವರ ಮನೆಯಲ್ಲಿ ಮೂಲ ರಾಮ ದೇವರ ಪೂಜೆ ಜರುಗಲಿದೆ, ಮಧ್ಯಾಹ್ನ ತೀರ್ಥ, ಪ್ರಸಾದ ಮಂತ್ರಾಕ್ಷತೆ ನಡೆಯಲಿದೆ, ಸಂಜೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಜುಲೈ 6ಗುರುವಾರ, ಯರಗೋಳದಲ್ಲಿ ಜಯತೀರ್ಥರ ಪೂರ್ವಾರಾಧನೆ, ಜುಲೈ 7 ಶುಕ್ರವಾರ, ಮತ್ತು 8 ಶನಿವಾರ ಮಳಖೇಡದಲ್ಲಿ ಜಯತೀರ್ಥರ ಮೂಲ ಬೃಂದಾವನದಲ್ಲಿ ಮಧ್ಯಾರಾದನೆ, ಉತ್ತರರಾಧನೆ ಜರುಗಲಿದೆ.
ನಿತ್ಯವೂ ಮೂಲ ರಾಮದೇವರ ಪೂಜೆ, ಗುರುವಾರ ಯರಗೋಳ ದಲ್ಲಿ ರಾಮಚಂದ್ರ ತೀರ್ಥರು, ವಿದ್ಯಾನಿಧಿ ತೀರ್ಥರ ಮೂಲ ಬೃಂದಾವನದಲ್ಲಿ , ಶುಕ್ರವಾರ ಮತ್ತು ಶನಿವಾರ ಮಳಖೇಡದಲ್ಲಿ ಜಯತೀರ್ಥರ, ಅಕ್ಷೋಭ್ಯ ತೀರ್ಥರ
ಹಾಗೂ ರಘುನಾಥ ತೀರ್ಥರ ಮೂಲ ಬೃಂದಾವನದ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಜರಗಲಿವೆ.
ಕಲಾವಿದರಿಂದ ದಾಸವಾಣಿ, ಪಂಡಿತರ ಉಪನ್ಯಾಸ, ಶ್ರೀಪಾದಂಗಳವರ ಅನುಗ್ರಹ ಸಂದೇಶ ನೀಡಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಜಯತೀರ್ಥರ ಅನುಗ್ರಹಕ್ಕೆ ಪಾತ್ರರಾಗಲು ಮಠದ ವ್ಯವಸ್ಥಾಪಕರಾದ ಪಂಡಿತ ಸತ್ಯ ಬೋದಾಚಾರ್ಯ ಘಟಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.