ಸುದ್ದಿಮೂಲ ವಾರ್ತೆ ರಾಯಚೂರು, ೆ.16:
ಗ್ರಾಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಇಂಡಿಯಾ ಪೋಸ್ಟ್ ಇದೀಗ ಉಳಿತಾಯ ಸಂಕಲ್ಪ ಅಭಿಯಾನವನ್ನು ಜಾರಿಗೊಳಿಸಿದೆ. ಎಲ್ಲಾ ನಾಗರಿಕರು ತಮ್ಮ ಹತ್ತಿಿರದ ಅಂಚೆ ಕಚೇರಿಗೆ ಭೇಟಿ ನೀಡಿ ಹೊಸ ಉಳಿತಾಯ ಖಾತೆ ತೆರೆಯುವಂತೆ ಹಾಗೂ ಅಂಚೆ ಕಚೇರಿಗಳ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿ ನಿಯಮಿತ ಮತ್ತು ನಿರಂತರ ಆದಾಯ ಪಡೆಯುವಂತೆ ವಿನಂತಿಸಲಾಗಿದೆ. ಈ ಅಭಿಯಾನವನ್ನು ಯಶಸ್ವಿಿಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ರಾಯಚೂರು ವಿಭಾಗೀಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

