ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.18:
ಸಮಾಜದ ಮುಖ್ಯ ವಾಹಿನಿಯಿಂದ ದೂರವಿದ್ದು ನಾಲ್ಕು ಗೋಡೆಗಳ ಮಧ್ಯೆೆ ಜೀವಿಸುತ್ತಿಿದ್ದ ಮಹಿಳೆಯನ್ನು ಮುಖ್ಯವಾಹಿನಿಗೆ ತರುವಲ್ಲಿ ಸಾವಿತ್ರಿಿ ಬಾಯಿ ುಲೆಯವರ ಪಾತ್ರ ಬಹುಮುಖ್ಯವಾದದ್ದು ಎಂದು ತೆಗ್ಗಿಿನ ಮಠ ಸಂಸ್ಥಾಾನದ ವರಸದ್ಯೋೋಜಾತ ಸ್ವಾಾಮೀಜಿ ತಿಳಿಸಿದರು.
ಹರಪನಹಳ್ಳಿಿ ನಗರದ ತೆಗ್ಗಿಿನ ಮಠ ಸಂಸ್ಥಾಾನದ ಟಿ ಎಂ ಚಂದ್ರಶೇಖರಯ್ಯನವರ ಸಭಾಂಗಣದಲ್ಲಿ ಕರ್ನಾಟಕ ಸಾವಿತ್ರಿಿಬಾಯಿ ಪುಲೆ ಶಿಕ್ಷಕಿಯರ ಸಂಘ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಶನಿವಾರ ನಡೆದ ಜಿಲ್ಲಾ ಮಟ್ಟದ ಸಾವಿತ್ರಿಿಬಾಯಿ ುಲೆರವರ 195 ನೇ ಜಯಂತಿ ಹಾಗೂ ಶೈಕ್ಷಣಿಕ ಕಾರ್ಯಗಾರದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರು ದೇವರ ಮುಂದಿರುವ ದೀಪಗಳಂತೆ ಜೀವಿಸಬೇಕು, ತಮ್ಮ ಕಾರ್ಯಗಳನ್ನು ನಿಷ್ಠೆೆ ಪ್ರಾಾಮಾಣಿಕತೆಯಿಂದ ಮಾಡಿದರೆ ಸಮಾಜದ ಸುಧಾರಣೆ ಸಾದ್ಯ, ಆಧುನಿಕ ಯುಗದಲ್ಲಿ ಹೆಣ್ಣು ಮಕ್ಕಳು ಇಂದು ಸರ್ವ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಲು ಸಾವಿತ್ರಿಿಬಾಯಿ ುಲೆಯವರ ಶಿಕ್ಷಣ ಕ್ರಾಾಂತಿಯೇ ಕಾರಣವೆಂದು ತಿಳಿಸಿದರು.
ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ಮಾತನಾಡಿ, ಜನ್ಮ ತಾಳಿದಾಗ ನಮ್ಮನ್ನು ಪೋಷಿಸಿ ಬೆಳೆಸುವವರು ತಂದೆ ತಾಯಿಗಳಾದರೆ, ದೊಡ್ಡವರಾದಾಗ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿ ನಮ್ಮೆೆಲ್ಲರ ಬದುಕಿಗೆ ದಾರಿ ದೀಪವಾಗಿರುದು ಶಿಕ್ಷಕರು ಸಾವಿತ್ರಿಿಬಾಯಿ ುಲೆಯವರ ಹೆಸರಿನಲ್ಲಿ ಸಂಘವನ್ನು ಕಟ್ಟುವುದು ಮಾತ್ರ ಸಂಘದ ಪದಾದಿಕಾರಿಗಳ ಕೆಲಸವಲ್ಲ, ಅವರ ಹೆಸರಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ನಿಮ್ಮೆೆಲ್ಲರ ಜವಾಬ್ದಾಾರಿಯಾಗಿದೆ.
ಕೆಲ ದೇಶಗಳಲ್ಲಿ ಮಹಿಳೆಯು ಇಂದಿಗೂ ಅತ್ಯಂತ ಬಾಲಿಷ ಜೀವನವನ್ನು ನಡೆಸುತ್ತಿಿದ್ದಾಳೆ ಆದರೆ ನಮ್ಮ ದೇಶದಲ್ಲಿ ಹಾಗಿಲ್ಲ, ಸಾವಿತ್ರಿಿಬಾಯಿ ುಲೆಯವರು ಶಾಲೆಗಳಲ್ಲಿ ಮನಸ್ಮೃತಿ ಅಧ್ಯಾಾಯನದ ವೇಳೆ ಅನೇಕ ಸಮಸ್ಯೆೆಗಳನ್ನು ಎದುರಿಸಿ, ಇಂದು ಎಲ್ಲರ ಬದುಕಿಗೆ ಮಾದರಿಯಗಿದ್ದಾರೆ ನಾವೆಲ್ಲರೂ ಅವರ ಆದರ್ಶ ತತ್ವ ಸಿದ್ದಾಂತಗಳನ್ನು ಅಳವಡಿಕೊಂಡು ಸಾಗೋಣ ಎಂದರು.
ತಾಲೂಕಿನಲ್ಲಿ ಶಿಕ್ಷಕರು ಸಂಘಟನೆಯ ನೆಪದಲ್ಲಿ ಪಾಠ ಭೋದನೆಗಿಂತ ಹೆಚ್ಚು ರಾಜಕಾರಣದಲ್ಲಿ ತಲ್ಲೀನರಾಗಿದ್ದಾರೆ, ಇದು ಬೇಸರದ ಸಂಗತಿಯಾಗಿದೆ ಎಂದು ತಿಳಿಸಿದರು.
ಕರ್ನಾಟಕ ಸಾವಿತ್ರಿಿಬಾಯಿ ುಲೆ ಶಿಕ್ಷಕಿಯರ ಸಂಘದ ಸಂಸ್ಥಾಾಪಕಿ ಹಾಗೂ ರಾಷ್ಟೀಯ ಅಧ್ಯಕ್ಷೆ ಲತಾ ಮಳ್ಳೂರು, ತಾ.ಪಂ ಇಓ ಚಂದ್ರಶೇಖರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್ ಜಿ ಮನೋರ್ಹ, ಕರ್ನಾಟಕ ಸಾವಿತ್ರಿಿಬಾಯಿ ುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಲತಾ ಟಿಎಎಚ್ಎಂ, ದಿವಾಕರ ನಾರಾಯಣ ಪ್ರಾಾಸ್ತಾಾವಿಕವಾಗಿ ಮಾತನಾಡಿದರು.ಈ ವೇಳೆ ಸಾವಿತ್ರಿಿಬಾಯಿ ುಲೆ ಉತ್ತಮ ಶಿಕ್ಷಕಿ ಪ್ರಶಸ್ತಿಿ ಪ್ರದಾನ ಹಾಗೂ ಹೊಸಪೇಟೆ ತಾಲೂಕು ುಲೆ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಈ ವೇಳೆ ಸಂಘದ ಸಂಸ್ಥಾಾಪಕಿ ಹಾಗೂ ರಾಷ್ಟೀಯ ಅಧ್ಯಕ್ಷೆ ಲತಾ ಮಳ್ಳೂರು, ತಾ.ಪಂ ಇಓ ಚಂದ್ರಶೇಖರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್ ಜಿ ಮನೋಹರ, ಕರ್ನಾಟಕ ಸಾವಿತ್ರಿಿಬಾಯಿ ುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಲತಾ ಟಿಎಎಚ್ಎಂ, ದಿವಾಕರ ನಾರಾಯಣ, ಪ್ರೌೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಗುರುಮೂರ್ತಿ, ಸಂಗಯ್ಯ ಸೇರಿದಂತೆ ಸರ್ಕಾರಿ ನೌಕರರ ಸಂಘ, ಸಾವಿತ್ರಿಿಬಾಯಿ ಸಂಘದ ಪಿ ಮಂಜಪ್ಪ ಬಿ ಸೂರ್ಯ ನಾಯಕ, ಮಂಜುನಾಥ್ ಪೂರ್ಜಾ ಎಂ ಟಿ ಸೋಮಪ್ಪ , ಪಿ ಬಸವರಾಜ ,ಕೆ ಅಂಜನಪ್ಪ ಕೆ ಮರಿಯಪ್ಪ, ಗಿರಿ ರಾಜ ಎಲ್ ಎಚ್,ಜಿ ಕರಿಬಸಪ್ಪ ಗುರಪ್ಪ ಪವಾರ್ ಜೆ ಬಸವ ಕುಮಾರ್ ಎಸ್ ಎಂ ಕೊಟ್ರೇಶಯ್ಯ, ಮಂಜಪ್ಪ ಬಣರ್ಕಾ, ಪಿ ಸುಬ್ಬಣ್ಣ , ಎನ್ ಹುಸೇನ್ ಭಾಷಾ, ಜಮಾಲುದ್ದೀನ್ ಮಕ್ಬುಲ್ ಭಾಷಾ ಕೆ ವೀರಪ್ಪ ಎಂ ಚನ್ನವೀರಪ್ಪ ರೂಪ ಶ್ರೀಮತಿ ದೀಪಕ ವಿಜಯಕುಮಾರ್ ಲತಾಶ್ರೀ ಎಂಎಲ್ ವಸಂತಮ್ಮ , ಶೈಲಜಾ ಸೇರಿದಂತೆ ಇತರರಿದ್ದರು.
ಸೀ ಕುಲದ ಆದರ್ಶ ಮಹಿಳೆ ಸಾವಿತ್ರಿ ಬಾಯಿ ಪುಲೆ: ವರಸದ್ಯೋಜಾತ ಶ್ರೀ

