ಸುದ್ದಿಮೂಲ ವಾರ್ತೆ ಮಾನ್ವಿ, ಜ.05:
ಮಾನ್ವಿಿ ತಾಲೂಕಿನ ನೀರಮಾನ್ವಿಿ ಕ್ರಾಾಸ್ ಸರಕಾರಿ ಮಾದರಿ ಹಿರಿಯ ಪ್ರಾಾಥಮಿಕ ಶಾಲೆಯ ಹಿರಿಯ ಮುಖ್ಯೋೋಪಾಧ್ಯಾಾಯಿನಿ ಶಿವಲಿಂಗಮ್ಮ ಮೂಕಪ್ಪ ಕಟ್ಟಿಿಮನಿ ಇವರಿಗೆ ಸಾವಿತ್ರಿಿಬಾಯಿ ುಲೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಿ ಲಭಿಸಿದೆ.
ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಾಮದ ಸಮತಾ ಗ್ರಾಾಮೀಣಾಭಿವೃದ್ಧಿಿ ಮತ್ತು ಶಿಕ್ಷಣ (ರಿ) ಸಂಸ್ಥೆೆ ವತಿಯಿಂದ ಇತ್ತೀಚೆಗೆ ಗಬ್ಬೂರು ಗ್ರಾಾಮದ ಸರಕಾರಿ ಪ್ರೌೌಢ ಶಾಲೆ ಆವರಣದಲ್ಲಿ ನಡೆದ ಅಕ್ಷರ ಮಾತೆ ಸಾವಿತ್ರಾಾಬಾಯಿ ುಲೆ ಜಯಂತ್ಯೋೋತ್ಸವ, ಸಮತಾ ಗ್ರಾಾಮೀಣಾಭಿವೃದ್ಧಿಿ ಸಂಸ್ಥೆೆಯ 12 ನೇ ವಾರ್ಷಿಕೋತ್ಸವ, ವಿದ್ಯಾಾರ್ಥಿಗಳ ನಡೆ ಸಂವಿಧಾನದ ಕಡೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಿಗೆ ಭಾಜನರಾಗಿದ್ದ ಶಿವಲಿಂಗಮ್ಮ ಕಟ್ಟಿಿಮನಿ ಇವರಿಗೆ 2025-26 ನೇ ಸಾಲಿನ ಅಕ್ಷರ ಮಾತೆ ಸಾವಿತ್ರಿಿಬಾಯಿ ುಲೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಿ ಪ್ರದಾನ ಮಾಡಿ ಶಿವಲಿಂಗಮ್ಮ ಮತ್ತು ಮೂಕಪ್ಪ ಕಟ್ಟಿಿಮನಿ ದಂಪತಿಗಳನ್ನು ಸನ್ಮಾಾನಿಸಲಾಯಿತು.
ಈ ಸಂದರ್ಭದಲ್ಲಿ ದೇವದುರ್ಗ ಶಾಸಕಿ ಕರೆಮ್ಮ ನಾಯಕ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾಾರಕನಾಥ, ಜಿ.ಪಂ ಮಾಜಿ ಸದಸ್ಯ ಸಿದ್ದಯ್ಯ ತಾತ ಗುರುವಿನ, ದೇವದುರ್ಗ ಪಿಕಾರ್ಡ್ ಬ್ಯಾಾಂಕಿನ ಮಾಜಿ ಅಧ್ಯಕ್ಷ ಶರಣಪ್ಪಗೌಡ ಕೊರವಿ, ಹೋರಾಟಗಾರ ಹಾಗೂ ಸಂಪಾದಕ ಅಂಬಣ್ಣ ಅರೋಲಿ, ಸಮತಾ ಗ್ರಾಾಮೀಣಾಭಿವೃದ್ಧಿಿ ಮತ್ತು ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಬಸವರಾಜ ಸಿಂಗ್ರಿಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಾಗವಾಟ, ಆಡಳಿತಾಧಿಕಾರಿ ನರಸಿಂಗರಾವ್ ಸರ್ಕಿಲ್ ಮುಂತಾದವರು ಉಪಸ್ಥಿಿತರಿದ್ದರು.
ಶಿವಲಿಂಗಮ್ಮ ಕಟ್ಟಿಿಮನಿ ಇವರು ಅನೇಕ ವರ್ಷಗಳ ಕಾಲ ಗ್ರಾಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಶಿಕ್ಷಕರಾಗಿ, ಮುಖ್ಯೋೋಪಾಧ್ಯಾಾಯರಾಗಿ ಉತ್ತಮ ಸೇವೆ ಸಲ್ಲಿಸಿ ವಿವಿಧ ಸಂಘ ಸಂಸ್ಥೆೆಗಳಿಂದ ಅನೇಕ ಪ್ರಶಸ್ತಿಿಗಳನ್ನು ಪಡೆದಿದ್ದಾರೆ. 2003 ರಲ್ಲಿ ಜಿಲ್ಲಾ ಟಿಪ್ಪುು ಸುಲ್ತಾಾನ್ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಿ, ಶಿಕ್ಷಕರ ಕಲ್ಯಾಾಣ ನಿಧಿಯಿಂದ ತಾಲೂಕು ಉತ್ತಮ ಶಿಕ್ಷಕಿ ಪ್ರಶಸ್ತಿಿ ಹಾಗೂ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಾನ್ವಿಿ ತಾಲೂಕಿನಿಂದ ಶಾಸಕರು ನೀಡುವ ಬಂಗಾರದ ಪದಕ ಮತ್ತು ಉತ್ತಮ ಶಿಕ್ಷಕಿ ಪ್ರಶಸ್ತಿಿಗೆ ಭಾಜನರಾಗಿ ವಿಶೇಷ ಸನ್ಮಾಾನ ಪಡೆದಿದ್ದಾರೆ.
ಸಾವಿತ್ರಿಿಬಾಯಿ ುಲೆ ಪ್ರಶಸ್ತಿಿ ಪಡೆದ ಶಿವಲಿಂಗಮ್ಮ ಕಟ್ಟಿಿಮನಿ ಇವರನ್ನು ಮಾನ್ವಿಿ ಮತ್ತು ದೇವದುರ್ಗ ತಾಲೂಕಿನ ಶಿಕ್ಷಕರ ಬಳಗ ಹಾಗೂ ವಿದ್ಯಾಾರ್ಥಿಗಳು, ಹಿತೈಷಿಗಳು, ಬಂಧುಗಳು ಅಭಿನಂದಿಸಿದ್ದಾರೆ.
ಮಾನ್ವಿ : ಮುಖ್ಯೋಪಾಧ್ಯಾಯಿನಿ ಶಿವಲಿಂಗಮ್ಮ ಕಟ್ಟಿಮನಿ ಇವರಿಗೆ ಸಾವಿತ್ರಿಬಾಯಿ ುಲೆ ಪ್ರಶಸ್ತಿ ಪ್ರದಾನ

