ಸುದ್ದಿಮೂಲ ವಾರ್ತೆ ರಾಯಚೂರು, ಡಿ.16:
ಇದೆ ಡಿಸೆಂಬರ್ 21ರ ಭಾನುವಾರ ದಂದು ಹುಟ್ಟಿಿನಿಂದ ಐದು ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೊ ಲಸಿಕೆ ಹಾಕುವ ಪಲ್ಸ್ ಪೋಲಿಯೊ ಕಾರ್ಯಕ್ರಮ ರಾಯಚೂರು ಜಿಲ್ಲೆಯಾದ್ಯಂತ ಹಮ್ಮಿಿಕೊಳ್ಳಲಾಗಿದೆ.
ನಗರ, ಪಟ್ಟಣಗಳಲ್ಲಿಯ ಜನತೆಯು ತಮ್ಮ ಮನೆಗಳಿಗೆ ಹತ್ತಿಿರದ ಪೋಲಿಯೊ ಬೂತ್ಗಳ ಮಾಹಿತಿ ಕ್ಯೂಆರ್ ಕೋಡ್ ಸ್ಕ್ಯಾಾನ್ ಮಾಡಿ ತಮಗೆ ಹತ್ತಿಿರದ ಬೂತ್ಗಳಲ್ಲಿ ಲಸಿಕೆ ಹಾಕಿ ಅಭಿಯಾನದಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಪಾಲಕರು ನೋಡಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಅಧಿಕಾರಿ ಡಾ.ಸುರೇಂದ್ರ ಬಾಬು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇವರ ಸಲಹೆಯಂತೆ ಈ ಬಾರಿ ರಾಯಚೂರು, ಮಾನವಿ, ದೇವದುರ್ಗ, ಲಿಂಗಸೂಗುರು, ಸಿಂಧನೂರು ನಗರ ಪ್ರದೇಶಗಳ ನಾಗರಿಕರಿಗೆ ಬೂರ್ಗಳ ಮಾಹಿತಿ ಕೊರತೆಯಾಗಬಾರದು ಎಂದು ಕ್ಯೂಆರ್ ಕೋಡ್ ಸ್ಕ್ಯಾಾನರ್ ಸಿದ್ದಪಡಿಸಲಾಗಿದ್ದು, ತಮ್ಮ ಮೊಬೈಲ್ಗಳ ಮೂಲಕ ಸ್ಕ್ಯಾಾನ್ ಮಾಡಿ ಬೂತ್ಗಳ ಮಾಹಿತಿ ಪಡೆದು ತಮಗೆ ಹತ್ತಿಿರದಲ್ಲಿರುವ ಬೂತ್ಗಳಲ್ಲಿ ಎರಡು ಹನಿ ಲಸಿಕೆ ಮಗುವಿಗೆ ಹಾಕಿಸಿ ಪೋಲಿಯೋ ಮೇಲಿನ ನಮ್ಮ ಗೆಲು ಮುಂದುವರೆಸಲು ಕೈಜೊಡಿಸುವಂತೆ ಕೋರಿದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ ಎಮ್.ಎನ್. ಅವರು ಮಾತನಾಡಿ, ನಮ್ಮ ಭಾರತ ದೇಶದಲ್ಲಿ ಕೊನೆಯ ಪೋಲಿಯೋ ಪ್ರಕರಣ 2011 ಜನವರಿಯಲ್ಲಿ ಪಶ್ಚಿಿಮ ಬಂಗಾಳ ರಾಜ್ಯದಲ್ಲಿ ವರದಿಯಾದ ನಂತರ ಕಳೆದ 14 ವರ್ಷಗಳಿಂದ ನಮ್ಮ ದೇಶದಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೂ ಸಹ ನೆರೆಯ ರಾಷ್ಟ್ರಗಳಲ್ಲಿ ಪ್ರಕರಣಗಳು ಇರುವುದರಿಂದ ಡಿಸೆಂಬರ್ 21 ರಂದು ದೇಶಾದ್ಯಾಾಂತ ಲಸಿಕೆ ಹಾಕಲಾಗುತ್ತಿಿದ್ದು, ನಮ್ಮ ಜಿಲ್ಲೆಯಲ್ಲಿ ಲಸಿಕೆ ಹಾಕಲು ತಂಡಗಳ ರಚನೆ ಮಾಡಲಾಗಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆೆಗಳಲ್ಲಿ, ಬಸ್ ನಿಲ್ದಾಾಣ, ರೈಲು ನಿಲ್ದಾಾಣ, ಅಂಗನವಾಡಿಗಳಲ್ಲಿ ಮತ್ತು ಶಾಲೆಗಳಲ್ಲಿ ಹಾಗೂ ಕೊಳಚೆ ಪ್ರದೇಶ ಮುಂತಾದೆಡೆ ಬೂತ್ ತೆರೆಯಲಾಗುವುದು. ಇದಕ್ಕಾಾಗಿ ಈಗಿನಿಂದಲೆ ಗ್ರಾಾಮಗಳಲ್ಲಿ ಸಿಬ್ಬಂದಿಯವರು ಖುದ್ದು, ಮನೆ ಭೇಟಿ ನೀಡುತ್ತಿಿದ್ದಾರೆ. ಇದರೊಂದಿಗೆ ಸ್ಥಳೀಯ ಸಂಸ್ಥೆೆಗಳ ಕಸ ವಿಲೇವಾರಿ ವಾಹನ, ಆಟೊ ಮೂಲಕ ಮೈಕಿಂಗ್, ಜಾಗೃತಿ ಜಾಥಾ, ಸಾಮಾಜಿಕ ಜಾಲ ತಾಣಗಳ ಮೂಲಕ ನಿರಂತರ ಪ್ರಚಾರ ಕೈಗೊಳ್ಳಲಾಗುತ್ತಿಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯ ಅಧಿಕಾರಿಗಳು ಹಾಗೂ ಆರ್.ಸಿ.ಹೆಚ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

