ಸುದ್ದಿಮೂಲ ವಾರ್ತೆ ಭಾಲ್ಕಿ, ಡಿ.30:
ತಾಲೂಕಿನ ಕರಡ್ಯಾಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಹಿರೇಮಠ ಸಂಸ್ಥಾಾನ ವಿದ್ಯಾಾಪೀಠ ಟ್ರಸ್ಟ್ ವತಿಯಿಂದ ಗೋಲ್ಡನ್ ಸ್ಕಾಾಲರ್ಶಿಪ್ ಪ್ರವೇಶ ಪರೀಕ್ಷೆ ಯೋಜನೆ ಮುಂದುವರಿಸಿದ್ದು ಜನವರಿ ತಿಂಗಳಲ್ಲಿ ಐದು ದಿವಸ ಪ್ರವೇಶ ಪರೀಕ್ಷೆ ನಡೆಯಲಿವೆ ಎಂದು ಹಿರೇಮಠ ಸಂಸ್ಥಾಾನ ವಿದ್ಯಾಾಪೀಠ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾಾನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಿಯಲ್ಲಿ ಮಾಹಿತಿ ನೀಡಿದರು.
ಶಿಕ್ಷಣ ಸಂಸ್ಥೆೆಯ 25ನೆಯ ವರ್ಷ ಆಚರಣೆ ಹಿನ್ನಲೆಯಲ್ಲಿ ಕಳೆದ 10ವರ್ಷಗಳ ಹಿಂದೆ ಗುರುಕುಲ ಗೋಲ್ಡನ್ ಸ್ಕಾಾಲರ್ಶಿಪ್ ಯೋಜನೆ ಪರಿಚಯಿಸಲಾಗಿತ್ತು.
ಈ ಯೋಜನೆಗೆ ಮಕ್ಕಳು, ಪಾಲಕರು ಹೆಚ್ಚಿಿನ ಆಸಕ್ತಿಿ ತೋರುತ್ತಿಿರುವುದರಿಂದ ಗೊಲ್ಡನ್ ಸ್ಕಾಾಲರ್ಶಿಪ್ ಯೋಜನೆ ಹಾಗೇ ಮುಂದುವರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಜನವರಿಯಲ್ಲಿ ಪ್ರವೇಶ ಪರೀಕ್ಷೆ :
ಗಡಿಭಾಗದ ಬಡ ಪ್ರತಿಭಾವಂತ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಗುರುಕುಲ ಸ್ಕಾಾಲರ್ಶಿಪ್ ಯೋಜನೆ ಜಾರಿಗೆ ತಂದಿದ್ದೇವೆ. ಈ ಬಾರಿಯು ಚನ್ನಬಸವೇಶ್ವರ ಗುರುಕುಲದಲ್ಲಿ 2026-27ನೇ ಸಾಲಿನ ಪ್ರವೇಶಕ್ಕಾಾಗಿ ಜ.4, 10, 11, 18 ಮತ್ತು 25 ರಂದು ಪ್ರವೇಶ ಪರೀಕ್ಷೆ ಏರ್ಪಡಿಸಿದ್ದೇವೆ. ಪ್ರಸ್ತುತ ಎಸ್ಸೆೆಸ್ಸೆೆಲ್ಸಿಿಯಲ್ಲಿ ವ್ಯಾಾಸಂಗ ಮಾಡುತ್ತಿಿರುವ ಕನ್ನಡ, ಆಂಗ್ಲ ಮಾಧ್ಯಮದ ವಿದ್ಯಾಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ ಎಂದು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ತಿಳಿಸಿದರು.
8 ಸಾವಿರ ಮಕ್ಕಳು ನೊಂದಣಿ :
2026-27ನೇ ಸಾಲಿನ ಪಿಯುಸಿ ವಿಜ್ಞಾನ ಪ್ರವೇಶ ಪಡೆಯಲು ಸ್ಕಾಾಲರ್ಶಿಪ್ಗಾಗಿ ಈಗಾಗಲೇ ರಾಜ್ಯ ಮತ್ತು ಹೊರ ರಾಜ್ಯಗಳಿಂದ 8 ಸಾವಿರ ವಿದ್ಯಾಾರ್ಥಿಗಳು ನೊಂದಣಿ ಮಾಡಿಸಿದ್ದಾರೆ ಎಂದು ಪ್ರಾಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದರು.
2004ರಲ್ಲಿ ಪಿಯುಸಿ ವಿಭಾಗ ಆರಂಭಗೊಅಡಿದ್ದು ಕಳೆದ 10 ವರ್ಷಗಳಿಂದ ಸ್ಕಾಾಲರ್ಶಿಪ್ ಯೋಜನೆ ನಡೆಸಿಕೊಂಡು ಬರಲಾಗುತ್ತಿಿದ್ದು ಇದು ವರೆಗೂ 1 ಸಾವಿರ ಮಕ್ಕಳು ಉಚಿತ ಶಿಕ್ಷಣ, ವಸತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಿಯಲ್ಲಿ ಮಹಾಲಿಂಗ ಸ್ವಾಾಮೀಜಿ, ಆಡಳಿತಾಧಿಕಾರಿ ಮೋಹನ ರೆಡ್ಡಿಿ ಇದ್ದರು.
ಗುರುಕುಲದಲ್ಲಿ ಸ್ಕಾಲರ್ಶಿಪ್ ಪ್ರವೇಶ ಪರೀಕ್ಷೆ 100 ಮಕ್ಕಳಿಗೆ ಎರಡು ವರ್ಷ ಉಚಿತ ಶಿಕ್ಷಣ : ಭಾಲ್ಕಿಶ್ರೀ

