ಸುದ್ದಿಮೂಲ ವಾರ್ತೆ ರಾಯಚೂರು, ಜ.11:
ಲಯನ್ಸ ಶಾಲೆಯಲ್ಲಿ ರಾವಿವಾರ ಆನಂದ ಲಹರಿ ಶಾಲಾ ವಾರ್ಷಿಕೋತ್ಸವ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ, ವಿಜ್ಞಾಾನ ಮತ್ತು ತಂತ್ರಜ್ಞಾಾನ ಸಚಿವ ಎನ್.ಎಸ್.ಬೋಸರಾಜು, ಶಾಲಾ ವಾರ್ಷಿಕೋತ್ಸವಕ್ಕೆೆ ಚಾಲನೆ ನೀಡಿದರು.
1980ರಲ್ಲಿ ಆರಂಭವಾದ ಈ ಶಾಲೆ ಉತ್ತಮ ಶಿಕ್ಷಣ ನೀಡುತ್ತ ಬಂದಿದೆ ಎಂದು ಈ ಸಂದರ್ಭದಲ್ಲಿ ಹೇಳಿದ ಅವರು ನಾನು 1970ರಿಂದ ರಾಜಕೀಯದಲ್ಲಿದ್ದೇನೆ. ಇಂದಿನ ರಾಯಚೂರು ಹಿಂದಿನ ರಾಯಚೂರಿಗು ಬಹಳಷ್ಟು ವ್ಯತ್ಯಾಾಸಗಳಿವೆ. ಈ ಹಿಂದೆ ನಮ್ಮ ರಾಯಚೂರಿಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿಿದ್ದರು, ಅದೇ ಸಮಯದಲ್ಲಿ ಸೇಂಟ್ ಮೇರೀಸ್ ಶಾಲೆ ನಂತರ ಸುಮಾರು 7-8 ಶಾಲೆಗಳು ಆರಂಭವಾದವು. ಇತ್ತೀಚೆಗೆ ಹಲವಾರು ಸಂಘ ಸಂಸ್ಥೆೆಗಳು, ಮಠಗಳು ಶಾಲೆಗಳನ್ನು ಆರಂಭಿಸಿದವು. ನಾನು ಸುಮಾರು ವರ್ಷಗಳಿಂದ ರಾಜಕೀಯದಲ್ಲಿದ್ದುದರಿಂದ ಇಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಮನಗಂಡು, ಅಂದಿನ ಮಂತ್ರಿಿ ವಿಶ್ವನಾಥರನ್ನು ಮತ್ತು ಪ್ರಿಿನ್ಸಿಿಪಲ್ ಸೆಕ್ರೆೆಟರಿ ವಿಜಯ ಭಾಸ್ಕರ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ಮೂರು ದಿನಗಳ ಕಾಲ ಜಿಲ್ಲೆೆಯಾದ್ಯಂತ ತಿರುಗಾಡಿಸಿದ್ದೆೆ. ಆಗ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಇತ್ತು. ಇದ್ದರು ಶಾಲೆಗೆ ಬರುತ್ತಿಿರಲಿಲ್ಲ. ಪ್ರತಿ ವರ್ಷವು ಮಕ್ಕಳು 30% ರಿಂದ 40%ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿಿದ್ದರು. ಇದರಿಂದ ಹೊರ ಬರಲು ಏನಾದರು ಮಾಡಬೇಕೆಂದು ಯೋಚಿಸಿ ಎಸ್ ಎಂ ಕೃಷ್ಣರವರು ಮುಖ್ಯಮಂತ್ರಿಿ ಇದ್ದಾಾಗ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟವನ್ನು ಆರಂಬಿಸಿದೆವು. ಅಂದಿನಿಂದ ಇಂದಿನವರೆಗು ಅದು ಮುಂದುವರಿದುಕೊಂಡು ಬಂದಿದೆಯೆಂದರು. ಇದಾದ ನಂತರ ಮಕ್ಕಳಿಗೆ ಶಾಲಾ ಕೊಠಡಿಗಳು ಕೊರತೆಯಿದೆಯೆಂದು ಪಾಲಕ-ಪೋಷಕರಿಂದ ದೂರುಗಳು ಬರತೊಡಗಿದವು. ಆ ಸಮಯದಲ್ಲಿ ನಾನು ಹೈದರಾಬಾದ ಕರ್ನಾಟಕ ಅಭಿವೃದ್ಧಿಿ ಮಂಡಳಿ ಅಧ್ಯಕ್ಷನಿದ್ದೆೆ. ಆಗ ಹೆಚ್ ಕೆ ಡಿ ಬಿ ಮತ್ತು ಸರಕಾರದ ನೆರವಿನಿಂದ 500 ಶಾಲಾ ಕೊಠಡಿಗಳನ್ನು ನಿರ್ಮಿಸಬೇಕೆಂದು ತೀರ್ಮಾನಿಸಲಾಯಿತು. ಅದರಂತೆ 490ಕ್ಕು ಅಧಿಕ ಶಾಲಾ ಕೊಠಡಿಗಳು ಸಿದ್ದಗೊಂಡವು ಎಂದು ಮೆಲುಕು ಹಾಕಿದರು.
ಕಳೆದ ವರ್ಷದಲ್ಲಿ 7 ಜಿಲ್ಲೆೆಗಳಿಗೆ ಶಾಲಾ ಕೊಠಡಿ, ಕಾಂಪೌಂಡ, ಕುಡಿಯುವ ನೀರು, ಮಕ್ಕಳಿಗೆ ಶೌಚಾಲಯ ಮುಂತಾದವುಗಳಿಗೆ 1250 ಕೋಟಿ ರೂಪಾಯಿಗಳನ್ನು ಹೊಸದಾಗಿ ನಿರ್ಮಿಸಲು ಅನುದಾನ ಖರ್ಚು ಮಾಡಲಾಗಿದೆಯಂದು ತಿಳಿಸಿದರು.
ಲಯನ್ಸ ಶಿಕ್ಷಣ ಸಂಸ್ಥೆೆ ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತವಾಗದೆ ಆಟೋಟಗಳಲ್ಲಿ ಉತ್ತಮ ಸಾಧನೆಯನ್ನು ಮೆರೆದಿದೆಎಂದು ಸಂತಸ ವ್ಯಕ್ತಪಡಿಸಿದರು.
ವಿಶೇಷ ಉಪನ್ಯಾಾಸಕರಾಗಿ ಕೃಷಿ ವಿವಿ ಕೀಟ ಶಾಸ ವಿಭಾಗದ ಉಪನ್ಯಾಾಸಕಡಾ.ಎ.ಜಿ. ಶ್ರೀನಿವಾಸ ಮಾತನಾಡಿ, ಲಯನ್ಸ ಶಾಲೆಯ ಅಧ್ಯಕ್ಷ ಕೆ.ಎಂ ಪಾಟೀಲರು ಶಾಲೆ ನಡೆದು ಬಂದ ಹಾದಿಯ ಬಗ್ಗೆೆ ಹೇಳುತ್ತ ಗೌರವಾನ್ವಿಿತರನ್ನು ಸ್ವಾಾಗತಿಸಿದರು. ಕಾರ್ಯದರ್ಶಿ ಎಸ್. ಗೋವಿಂದ ರಾಜು ಶಾಲಾ ವಾರ್ಷಿಕ ವರದಿ ಸಲ್ಲಿಸಿದರು. 2025-26ರ ವಾರ್ಷಿಕ ವರದಿಯ ಪಿಪಿಟಿ ಪರದೆಯ ಮೇಲೆ ತೋರಿಸಲಾಯಿತು. ಖಜಾಂಚಿ ಶೆಟ್ಟಿಿ ನಾಗರಾಜ ವಂದನಾರ್ಪಣೆ ಮಾಡಿದರು, ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡವು.
ವೇದಿಕೆಯಲ್ಲಿ ಎ. ಗುಂಡಪ್ಪ, ವಿ. ಹನುಮಂತ ರಾವ್, ವೀರ ಭೂಷಣ ಶೆಟ್ಟಿಿ, ಎಸ್ ಕಮಲ ಕುಮಾರ, ಶಿವ ಕುಮಾರ ಪಾಟೀಲ, ಆರ್ ನಾರಾಯಣ ರಾವ್, ನಂದಾಪುರ ಶ್ರೀನಿವಾಸ ಲಯನ್ಸ ಕ್ಲಬ್ ಅಧ್ಯಕ್ಷ ಎಸ್ ಡಿ ಕೃಷ್ಣಮೂರ್ತಿ, ಕಾರ್ಯದರ್ಶಿ ಅಮರೇಶ ರಾಯಕೋಟಿ ಮತ್ತು ಶಾಲಾ ಮುಖ್ಯೋೋಪಾದ್ಯಾಾಯ ದತ್ತಾಾತ್ರೇಯ ಉಪಸ್ಥಿಿತರಿದ್ದರು. ಕಾರ್ಯಕ್ರಮ ಮಿಸ್ ರಜಿನಿ ರೆಡ್ಡಿಿ, ಕುಮಾರ ನಿಕೇತನ್, ಕುಮಾರ ಸಂಜೀವ ರೆಡ್ಡಿಿ ಮತ್ತು ಕುಮಾರಿ ಮಾನಸ ನಿರೂಪಿಸಿದರು.
ಲಯನ್ಸ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ

