ಸುದ್ದಿಮೂಲ ವಾರ್ತೆ ಜಾಲಹಳ್ಳಿ, ೆ.04:
ಮಕ್ಕಳಿಗೆ ಇಂದಿನ ಶಿಕ್ಷಣ ವ್ಯವಸ್ಥೆೆಯಲ್ಲಿ ಬೌದ್ಧಿಿಕ ಶಕ್ತಿಿ ಅವಶ್ಯಕ ಎಂದು ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ ಹೇಳಿದರು.
ಅವರು ಬುಧವಾರ ಗಲಗ ವಲಯ ಮಟ್ಟದ ಮಕ್ಕಳ ಕಲಿಕೆ ಹಬ್ಬ ಹುಲಿಗುಡ್ಡ ಶಾಲೆಯಲ್ಲಿ ಉದ್ಘಾಾಟನೆ ಮಾಡಿ ಮಾತನಾಡಿ ಶಾಲೆಯಲ್ಲಿ ಮಕ್ಕಳು ವರ್ಷವಿಡೀ ಕಲಿಯುವಾಗ ಮಕ್ಕಳ ಕಲಿಕೆಯ ಹಬ್ಬ ಬಹಳ ಮಹತ್ವದಾಗಿದೆ ,ವಲಯದ ಎಲ್ಲಾ ಶಾಲೆಗಳ ಮಕ್ಕಳ ಕೌಶಲಗಳನ್ನು ಒಂದೇೆ ಕಡೆ ಸೇರಿಸಿ ಅವರ ಬೌದ್ಧಿಿಕ ಹಾಗೂ ಶೈಕ್ಷಣಿಕ ಮಟ್ಟ ಗುರುತಿಸಲಿಕ್ಕೆೆ ಸಹಾಯವಾಗುತ್ತದೆ .
ಗ್ರಾಾಮೀಣ ಭಾಗದಲ್ಲಿ ಪ್ರತಿಯೊಂದು ಹಬ್ಬ ಹರಿದಿನಗಳು ಇರುವಾಗ ಶಾಲಾ ಮಕ್ಕಳಿಗೆ ಕಲಿಕಾ ಹಬ್ಬ ಮಾಡಿ ಹಬ್ಬದ ವಾತಾವರಣ ನಿರ್ಮಿಸಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸಹಕಾರಿ ಯಾಗುತ್ತದೆ ಎಂದು ಮಾತನಾಡಿದರು.
ಗಾಜಲದಿನ್ನಿಿ ಶಿಕ್ಷಕ ಸಿದ್ದನಗೌಡ, ಶಿಕ್ಷಣ ಸಂಯೋಜಕ ವೆಂಕಟೇಶ ಮಾತನಾಡಿದರು.
ಗ್ರಾಾಮ ಪಂಚಾಯತಿ ಮಾಜಿ ಅಧ್ಯಕ್ಷ ಕರಿಯಪ್ಪ, ಶಿಕ್ಷಕರಾದ ಗಂಗಾರೆಡ್ಡಿಿ, ಶ್ರೀನಿವಾಸ, ಕಲ್ಲಪ್ಪ, ಶರಣಪ್ಪ , ಸಿಆರ್ಪಿ ನಿಂಗಪ್ಪ ಸೇರಿದಂತೆ ಅನೇಕರು ಉಪಸ್ಥಿಿತರಿದ್ದರು, ಶಿಕ್ಷಕ ಮಹ್ಮದ್ ಸ್ವಾಾಗತ, ನಿರೂಪಣೆ ಮಾಡಿದರು.
ಹುಲಿಗುಡ್ಡದಲ್ಲಿ ಶಾಲಾ ಮಕ್ಕಳ ಕಲಿಕೆ ಹಬ್ಬ ! ಮಕ್ಕಳಿಗೆ ಬೌದ್ಧಿಕ ಶಕ್ತಿ ಅವಶ್ಯ: ಶಿವರಾಜ ಪೂಜಾರಿ

