ಸುದ್ದಿಮೂಲ ವಾರ್ತೆ ಅರಕೇರಾ, ಜ.19:
ಹಳೆಯ ವಿದ್ಯಾಾರ್ಥಿಗಳನ್ನು ಒಂದುಗೂಡಿಸಿ, ಅವರ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಶಾಲೆಯ ಅಭಿವೃದ್ಧಿಿಗೆ ಕೊಡುಗೆ ನೀಡಲು ಒಂದು ಒಳ್ಳೆೆಯ ವೇದಿಕೆ ಸೃಷ್ಟಿಿಸಿದಂತಾಗಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ ಅಭಿಪ್ರಾಾಯ ಪಟ್ಟರು.
ತಾಲ್ಲೂಕಿನ ಆಲ್ಕೋೋಡ ಗ್ರಾಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ನಡೆದ ಹಳೆಯ ವಿದ್ಯಾಾರ್ಥಿಗಳ ಸಂಘ ಉದ್ಘಾಾಟನೆ ಹಾಗೂ ಗುರು ವಂದನೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಿಯ ಪಾಲಿಗೆ ಶಾಲೆ ದಿನಗಳು ಸುವರ್ಣ ದಿನಗಳು. ನಾನೂ ಸಹ ಇದರಿಂದ ಹೊರತಲ್ಲ.ಶಿಕ್ಷಣಕ್ಕೆೆ ಸಂಬಂಧಿಸಿದ ಅಂದಿನ ಸಮಸ್ಯೆೆಗಳೇ ಬೇರೆ, ಇಂದಿನ ಸಮಸ್ಯೆೆಗಳೇ ಬೇರೆ. ಹಿಂದೆ ಕಲಿಕೆಗೆ ಹೆಚ್ಚಿಿನ ಅವಕಾಶ ಇರಲಿಲ್ಲ. ಆದರೆ ಇಂದು ಹಾಗಿಲ್ಲ. ಎಲ್ಲ ಸ್ಥಳಗಳಲ್ಲೂ ಶಾಲೆ, ಕಾಲೇಜುಗಳು ಹೆಚ್ಚಿಿ ನ ಸಂಖ್ಯೆೆಯಲ್ಲಿ ಸ್ಥಾಾಪನೆಯಾಗಿವೆ ಎಂದು ಹೇಳಿದರು. ನಾವು ಓದಿದ ಶಾಲಾ – ಕಾಲೇಜಿನ ಜತೆಗೆ ಒಳ್ಳೆೆಯ ಸಂಬಂಧ ಇಟ್ಟುಕೊಳ್ಳಬೇಕು.ಒಳ್ಳೆೆಯ ಭಾವನೆಯಿಂದ ಅಭಿವೃದ್ಧಿಿಗೆ ಸಹಕರಿಸಬೇಕು ಎಂದು ತಿಳಿಸಿದರು.
ನಂತರ ಸಮಾಜ ಕಲ್ಯಾಾಣ ಇಲಾಖೆಯ ತಾಲ್ಲೂಕು ಅಧಿಕಾರಿ ರಾಜಕುಮಾರ ಡೋಣಿ ಮಾತನಾಡಿ,ದೇಶಕ್ಕೆೆ ಉತ್ತಮ ನಾಗರಿಕರನ್ನುರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವವಾಗಿದೆ. ವಿದ್ಯಾಾರ್ಥಿಗಳಲ್ಲಿ ಅಡಗಿರುವ ಜ್ಞಾನ ಹೊರ ತರಲು ಶಿಕ್ಷಕರು ಮಾರ್ಗದರ್ಶಿಯಾಗುತ್ತಾಾರೆ. ಪ್ರತಿಯೊಬ್ಬರ ಜೀವನದ ಏಳು-ಬೀಳಿಗೆ ಗುರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣನಾಗುತ್ತಾಾನೆ. ಮಾನವ ಜೀವನ ಸಾರ್ಥಕವಾಗಬೇಕಾದರೆ ಗುರುವಿನ ಸಾಕ್ಷಾತ್ಕಾಾರವಾಗಬೇಕಾಗುತ್ತದೆ. ಇಂತಹ ಗುರುಗಳನ್ನು ನೆನೆಯುವಂತಹ ಕಾರ್ಯ ನಡೆಯುತ್ತಿಿರುವುದು ಖುಷಿಯ ಸಂಗತಿ ಎಂದರು.
ಈ ವೇಳೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಾಚಾರ್ಯ ಭೀಮರಾವ ಪಾಟೀಲ್, ಶಿಕ್ಷಕರಾದ ಶಶಿಧರ್, ಕನಕಪ್ಪ, ವೀಣಾ, ಸೈನಾ ಬೇಗಂ ಸೇರಿದಂತೆ ಹಳೆಯ ವಿದ್ಯಾಾರ್ಥಿಗಳ ಸಂಘದ ಗೌರವ ಅಧ್ಯಕ್ಷ ಸಾಬಣ್ಣ ಆಲ್ಕೋೋಡ, ಅಧ್ಯಕ್ಷ ನಾಗರಾಜ ಚಿಂಚರಕಿ, ಉಪಾಧ್ಯಕ್ಷ ಶಾಂತಮ್ಮ ಹಾಗೂ ಪದಾಧಿಕಾರಿಗಳು, ವಿದ್ಯಾಾರ್ಥಿಗಳು ಭಾಗವಹಿಸಿದ್ದರು.
ಪ್ರತಿ ವಿದ್ಯಾರ್ಥಿಗೆ ಶಾಲೆಯ ದಿನಗಳೇ ಸುವರ್ಣ ದಿನಗಳು ಎಂಡಿಆರ್ಎಸ್ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ಉದ್ಘಾಟನೆ

