ಬೀರಪ್ಪ ಹೀರಾ ಕವಿತಾಳ, ಜ.27:
ಸಮೀಪದ ವಟಗಲ್ ಗ್ರಾಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಶೌಚಾಲಯ ಇಲ್ಲದೆ ವಿದ್ಯಾಾರ್ಥಿನಿಯರು ಪರದಾಡುವಂತಾಗಿದೆ.
ಸುಸಜ್ಜಿಿತ ಶಾಲೆ ಕಟ್ಟಡ ನಿರ್ಮಾಣ ಮಾಡಿದ್ದರೂ ಶೌಚಾಲಯ ನಿರ್ಮಾಣ ಮಾಡದಿರುವುದು ಅಚ್ಚರಿ ಮೂಡಿಸುತ್ತದೆ. ಬಾಲಕರು 105 ಮತ್ತು ಬಾಲಕಿಯರು 95 ಸೇರಿ ಒಟ್ಟು 202 ವಿದ್ಯಾಾರ್ಥಿಗಳು ಅಭ್ಯಾಾಸ ಮಾಡುತ್ತಿಿದ್ದು ಶೌಚಾಲಯ ಇಲ್ಲದ ಕಾರಣ ಪರದೆ ಕಟ್ಟಿಿ ವಿದ್ಯಾಾರ್ಥಿನಿಯರಿಗೆ ಮೂತ್ರ ವಿಸರ್ಜನೆಗೆ ಕಳುಹಿಸಲಾಗುತ್ತದೆ ದಿನ ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಪಾಲಕರಾದ ಮೌನೇಶ ಹುಲ್ಲೂರು, ಬಸವರಾಜ ಹಟ್ಟಿಿ, ಸುಭಾಷ, ಬಸವರಾಜ ರಾಮದುರ್ಗ, ಅನಿಲ ವೀರನಗೌಡ ಆರೋಪಿಸಿದರು.
ಈ ಬಗ್ಗೆೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಪಂಚಾಯಿತಿ ಅಧಿಕಾರಿಗಳಿಗೆ ಶೌಚಾಲಯ ಮತ್ತು ಬಿಸಿ ಊಟದ ಅಡುಗೆ ಕೋಣೆ ಹಾಗೂ ಗೇಟ್ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಲಾಗಿದೆ ಈಚೆಗೆ ಸಿ ಇ ಓ ಶಾಲೆಗೆ ಭೆೇಟಿ ನೀಡಿದ್ದ ಸಂದರ್ಭದಲ್ಲಿ ಶೌಚಾಲಯ ಸಮಸ್ಯೆೆ ಕುರಿತು ಮಾಹಿತಿ ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಮುಖ್ಯ ಶಿಕ್ಷಕಿ ಪುಷ್ಪ ಪತ್ತಾಾರ ಹೇಳಿದರು.
ಈ ಬಗ್ಗೆೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಅಮರೇಶ ಸಾನಬಾಳ ಎಚ್ಚರಿಸಿದರು.
ಉದ್ಯೋೋಗ ಖಾತರಿ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆೆ ಗ್ರಾಾಮ ಪಂಚಾಯಿತಿ ಆಡಳಿತ ಮಂಡಳಿ ನಿರ್ಧರಿಸಿದೆ ಅದರಂತೆ 2024-25ನೇ ಸಾಲಿನಲ್ಲಿ ಮಂಜೂರಾತಿ ನೀಡಲಾಗಿದೆ ಕಾಮಗಾರಿ ಕೈಗೊಳ್ಳಲು ಯಾರೊಬ್ಬರೂ ಮುಂದೆ ಬಾರದ ಕಾರಣ ಸಮಸ್ಯೆೆಯಾಗಿದೆ ಈ ಬಗ್ಗೆೆ ಕ್ರಮ ವಹಿಸಲಾಗುವುದು ಎಂದು ಗ್ರಾಾಮ ಪಂಚಾಯಿತಿ ಕಾರ್ಯದರ್ಶಿ ವಿನೋದ ಕುಮಾರ ತಿಳಿಸಿದರು.
ಶೌಚಾಲಯ ಇಲ್ಲದೆ ಶಾಲಾ ಬಾಲಕಿಯರ ಪರದಾಟ

