ಸುದ್ದಿಮೂಲ ವಾರ್ತೆ ರಾಯಚೂರು, ಜ.08:
ಇತ್ತೀಚಿನ ದಿನಗಳಲ್ಲಿ ಮಕ್ಕಳು ಬುದ್ಧಿಿವಂತರಾಗಿ ಅತಿ ಚಟುವಟಿಕೆ ಉಳ್ಳವರಾಗಿದ್ದರೂ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲ ಗೊಳ್ಳುತ್ತಿಿರುವ ಮಕ್ಕಳ ಸಂಖ್ಯೆೆ ಹೆಚ್ಚಾಾಗುತ್ತಿಿದ್ದು ವಿಶೇಷ ಮಕ್ಕಳಿಗೆ ವಿಶೇಷ ಶಾಲೆಗಳ ಅವಶ್ಯಕತೆ ಇದೆ ಎಂದು ರತ್ನ ಮಾಡ್ರನ್ ಸ್ಕೂಲ್ ಸಂಸ್ಥಾಾಪಕಿ ನಾಗರತ್ನ ಹೇಳಿದರು.
ಅವರಿಂದು ಲಿಂಗಸಗೂರು ರಸ್ತೆೆಯಲ್ಲಿರುವ ದಿಮಹಿ ಲರ್ನಿಂಗ್ ಮತ್ತು ಸ್ಕೂಲಿಂಗ್ ಅಕಾಡೆಮಿ ಶಾಲೆಯಲ್ಲಿ ವಿಶೇಷ ಮಕ್ಕಳಿಂದ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಾಟಿಸಿ ಮಾತನಾಡಿದರು. ನಿಧಾನವಾಗಿ ಕಲಿಯುವ ಮಕ್ಕಳು, ಗಮನಹರಿಸಲು ಕಷ್ಟವಾಗುತ್ತಿಿರುವ ಮಕ್ಕಳು, ಕಲಿಕಾ ಅಸಮರ್ಥತೆ, ಶ್ರವಣ ಸಮಸ್ಯೆೆ, ಅಭಿವೃದ್ಧಿಿ ಕುಂಠಿತ ಮಕ್ಕಳು ಇವರಿಗಾಗಿ ಶಾಲೆ ಸಹಕಾರಿಯಾಗಿದೆ ಎಂದು ಹೇಳಿದರು.
ಈ ಮಕ್ಕಳಿಗೆ ವೈಯಕ್ತಿಿಕ ಗಮನಹರಿಸುವುದರ ಮೂಲಕ ಒತ್ತಡ ಮುಕ್ತ ಬೆಂಬಲಿತ ವಾತಾವರಣ, ಆತ್ಮವಿಶ್ವಾಾಸವನ್ನು ನಿರ್ಮಿಸಲು ಶಿಕ್ಷಕರ ಪಾತ್ರ ಬಹು ಮುಖ್ಯವಾದರೆ, ಪಾಲಕರ ಸಹಕಾರವೂ ಮಹತ್ವದ್ದಾಾಗಿದೆ ಎಂದರು.
ತೆರಿಗೆ ಸಲಹೆಗಾರ ಸುಬ್ರಹ್ಮಣ್ಯಂ ಮಾತನಾಡಿ, ವಿಶೇಷವಾದ ಚೈತನ್ಯ ಶಕ್ತಿಿ ಹೊಂದಿದ್ದು ಅದಕ್ಕಾಾಗಿ ಅವರಿಗೆ ವಿಶೇಷ ಮಕ್ಕಳೆಂದು ಗುರುತಿಸಲ್ಪಡುತ್ತದೆ ಇಂತಹ ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಉತ್ತಮ ವಾತಾವರಣವನ್ನು ಕಲ್ಪಿಿಸುವ ಕಾರ್ಯ ದಿಮಹಿ ಲರ್ನಿಂಗ್ ಆ್ಯಂಡ್ ಸ್ಕೂಲಿಂಗ್ ಮಾಡುತ್ತಿಿರುವುದಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ದಿಮಹಿ ಲರ್ನಿಂಗ್ ಸ್ಕೂಲ್, ಸಂಸ್ಥಾಾಪಕರಾದ ಹಿಮಬಿಂದು ಬಿ ಚಿಕ್ಕಮಠ್ ಮಕ್ಕಳು ಇಂದು ವಿಜ್ಞಾನ ವಸ್ತು ಪ್ರದರ್ಶನವನ್ನು ಸ್ವತಹ ತಾವೇ ತಯಾರಿಸಿ ಹೆಚ್ಚಿಿನ ವಿವರ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರಲ್ಲಿ ಒಂದು ವಿಶೇಷವಾದ ಶಕ್ತಿಿ ಅಡಗಿರುತ್ತದೆ ಅದನ್ನು ಹೊರ ತೆಗೆಯುವ ಕಾರ್ಯ ನಮ್ಮ ಸಂಸ್ಥೆೆ ಮಾಡುತ್ತಿಿದೆ ಎಂದು ಹೇಳಿದರು.
ಸುಮಾರು 25 ವಿವಿಧ ವಿಜ್ಞಾನ ಮತ್ತು ಸಮಾಜ ವಿಷಯಕ್ಕೆೆ ಸಂಬಂಧಿಸಿದಂತೆ ವಸ್ತು ಪ್ರದರ್ಶನವನ್ನು ಮಕ್ಕಳು ಏರ್ಪಡಿಸಿ ಶಿಕ್ಷಕರ ಮತ್ತು ಪಾಲಕರ ಮೆಚ್ಚುಗೆಗೆ ಪಾತ್ರರಾದರು
ಈ ಸಂದರ್ಭದಲ್ಲಿ ಅಕಾಡೆಮಿಯ ಪದಾಧಿಕಾರಿಗಳಾದ ಬಂಡಯ್ಯ ಸ್ವಾಾಮಿ ಚಿಕ್ಕಮಠ್, ರಾಘವೇಂದ್ರ ಡಿ.ವಕೀಲರು, ಉದ್ಯಮಿಗಳಾದ ರಾಘವೇಂದ್ರ, ದೇವೇಂದ್ರಪ್ಪ ಬೆಂಗಳೂರು ಪಾಲಕರು, ಪೋಷಕರು ಮತ್ತು ಮಕ್ಕಳು ಉಪಸ್ಥಿಿತರಿದ್ದರು.
ವಿಶೇಷ ಚೇತನ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನ ಬುದ್ದಿವಂತರಿದ್ದರೂ ದುರ್ಬಲಗೊಳ್ಳುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ – ನಾಗರತ್ನ ಕಳವಳ

