ಸುದ್ದಿಮೂಲ ವಾರ್ತೆ ರಾಯಚೂರು, ಡಿ.30:
ವಿಶ್ವದ ಪ್ರತಿಯೊಬ್ಬರಿಗೂ ಪ್ರತಿನಿತ್ಯ, ವಿಜ್ಞಾನದ ಅವಶ್ಯಕತೆ ಇದೆ ಎಂದು ಡಾ. ನರಸಿಂಹಲು ನಂದಿನಿ ಸ್ಮಾಾರಕ ಶಿಕ್ಷಣ ಸಂಸ್ಥೆೆಯ ಮುಖ್ಯಸ್ಥ ಡಾ.ಬಿ.ಮಹಾಲಿಂಗ ಹೇಳಿದರು.
ನಗರದ ರಾಂಪೂರು ಬಳಿಯ ಡಾ. ನರಸಿಂಹಲು ನಂದಿನಿ ಸ್ಮಾಾರಕ ಶಿಕ್ಷಣ ಸಂಸ್ಥೆೆಯ ಪೂರ್ವ ಪ್ರಾಾಥಮಿಕ , ಪ್ರಾಾಥಮಿಕ ಹಾಗೂ ಪ್ರೌೌಢಶಾಲೆಗಳಲ್ಲಿ ಹಮ್ಮಿಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಾಟಿಸಿ ಮಾತನಾಡಿದರು.
ವಿಜ್ಞಾನದಿಂದ ಮೂಢನಂಬಿಕೆಗಳನ್ನು ಹೋಗಲಾಡಿಸಬಹುದು. ವಿಜ್ಞಾನದಿಂದ ಮಾತ್ರ ಜಗತ್ತು ಅಭಿವೃದ್ಧಿಿ ಯಾಗುತ್ತದೆ. ವಿಜ್ಞಾನದ ಬೆಳವಣಿಗೆಯಿಂದ ದೇಶವನ್ನು ಸದೃಢವಾಗಿ ಕಟ್ಟಬಹುದು ಎಂದರು.
ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳಲು ಗುಣಮಟ್ಟದ ಜೀವನಕ್ಕೆೆ ವಿದ್ಯಾಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಅಳವಡಿಸಿಕೊಳ್ಳಲು ಶಿಕ್ಷಕರು ಪ್ರೋೋತ್ಸಾಾಹ ನೀಡಬೇಕು. ಜ್ಞಾನ ,ಬುದ್ಧಿಿ, ಮೆದುಳಿನ ಬಳಕೆಯಿಂದ ತಮ್ಮನ್ನು ತಾವು, ಹಾಗೂ ಸಮಾಜ, ದೇಶವನ್ನು ಉದ್ದಾರ ಮಾಡಲು ಸಾಧ್ಯವಾಗುತ್ತದೆ ಎಂದರು.
ಆಡಳಿತ ಅಧಿಕಾರಿ ನರಸಣ್ಣ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ಕ್ರಿಿಯಾತ್ಮಕತೆ ಗುರುತಿಸಲು ಇಂತಹ ವಿಜ್ಞಾನ ಪ್ರದರ್ಶನಗಳು ಪೂರಕವಾಗುತ್ತವೆ ಎಂದರು. ಎಲ್ಲಿ ವಿಜ್ಞಾನ ಕೊನೆಗೊಳ್ಳುತ್ತದೆಯೋ ಅಲ್ಲಿ ಧರ್ಮವು ಆರಂಭವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ ಮಾತನ್ನು ನೆನಪಿಸಿದರು.
ಧಾರ್ಮಿಕ ಭಾವನೆ ,ನಂಬಿಕೆ, ವಿಶ್ವಾಾಸಗಳನ್ನು ಹೆಚ್ಚು ಮಾಡಲಿಕ್ಕೆೆ ಮಾತ್ರ ವಿಜ್ಞಾನವನ್ನು ಬಳಸಬೇಕು ಎಂದರು. ಆಕಾಶಕ್ಕಿಿಂತ ಎತ್ತರದಲ್ಲೂ ವಿಜ್ಞಾನಿಗಳ ಮೆದುಳು ಕೆಲಸ ಮಾಡುತ್ತದೆ ಎಂದರು.
ಪೂರ್ವ ಪ್ರಾಾಥಮಿಕ ಹಾಗೂ ಪ್ರೌೌಢಶಾಲೆಯ ಮಕ್ಕಳು ತಮ್ಮ ಕ್ರಿಿಯಾತ್ಮಕ ಬುದ್ಧಿಿಶಕ್ತಿಿಯಿಂದ ಹಲವಾರು ವೈಜ್ಞಾನಿಕ ವಸ್ತು ಪ್ರದರ್ಶನ ಮಾಡಿದರು.
ಈ ಜ್ಞಾನ ವೈಭವ ವಿಜ್ಞಾನ ಪ್ರದರ್ಶನದಲ್ಲಿ ಡಾ. ಬಿ. ವಿಜಯ ರಾಜೇಂದ್ರ, ಡಾ. ಅಲೀಸ್ ಜೋಸ್ೆ ಸಂಸ್ಥೆೆಯ ಕುಟುಂಬ ಸದಸ್ಯರಾದ ಶಾಂತರೆಡ್ಡಿಿ , ಲೆಕ್ಕಪರಿಶೋಧಕ ಹನುಮಂತಪ್ಪ ಹಾಗೂ ಪೂರ್ವ ಪ್ರಾಾಥಮಿಕ ,ಪ್ರಾಾಥಮಿಕ ,ಹಾಗೂ ಪ್ರೌೌಢಶಾಲೆಯ ಮುಖ್ಯ ಗುರುಗಳು ,ಬೋಧಕ ಸಿಬ್ಬಂದಿ ಬೋಧಕೇತರ ಸಿಬ್ಬಂದಿ ಪಾಲಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊೊಂಡಿದ್ದರು.
ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ಪ್ರತಿಯೊಬ್ಬರಿಗೂ ನಿತ್ಯ ವಿಜ್ಞಾನದ ಅಗತ್ಯವಿದೆ – ಡಾ.ಮಹಾಲಿಂಗ

