ಸುದ್ದಿಮೂಲ ವಾರ್ತೆ ರಾಯಚೂರು, ಜ.01:
ರಾಯಚೂರು ನಗರದ ಮುನ್ನೂರುವಾಡಿ ಸರ್ಕಾರಿ ಪ್ರೌೌಢಶಾಲೆಯ ಕನ್ನಡ ಮತ್ತು ವಿಜ್ಞಾನ ಶಿಕ್ಷಕರ ವಿರುದ್ಧ ವಿದ್ಯಾಾರ್ಥಿಗಳು ನೀಡಿದ ದೂರು ಸತ್ಯಕ್ಕೆೆ ದೂರವಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಎ.ರಘು ಹೇಳಿದ್ದಾಾರೆ.
ವಿದ್ಯಾಾರ್ಥಿಗಳು ಯಾರದೊ ಮಾತು ಕೇಳಿ ಪತ್ರಿಿಕೆಗೆ ದೂರು ಸಲ್ಲಿಸಿದ ಅನುಮಾನ ವ್ಯಕ್ತಪಡಿಸಿರುವ ಅವರು, ಕನ್ನಡ ಶಿಕ್ಷಕಿ ಸೋನಮ್ ಮತ್ತು ವಿಜ್ಞಾನ ಶಿಕ್ಷಕ ಶಿವಕುಮಾರ ಅವರ ಅನೇಕ ವರ್ಷಗಳಿಂದ ಉತ್ತಮವಾಗಿ ಕಲಿಸಿದ್ದಾಾರೆ. ಇದರಿಂದಾಗಿ ಉತ್ತಮ ಲಿತಾಂಶ ಬಂದಿದೆ, ಅನೇಕ ವಿದ್ಯಾಾರ್ಥಿಗಳು ಉತ್ತಮ ಸ್ಥಾಾನದಲ್ಲಿ ಸಮಾಜದ ವಿವಿಧೆಡೆ ಸೇವೆ ಸಲ್ಲಿಸುತ್ತಿಿದ್ದಾಾರೆ ಎಂದು ವಿವರಿಸಿದ್ದಾಾರೆ.
ಮುಖ್ಯ ಶಿಕ್ಷಕರು ಇಲಾಖೆಯ ಸೂಚನೆ, ಆದೇಶಗಳ ಪಾಲಿಸುವ ಮೂಲಕ ಉಸ್ತುವಾರಿ ಮಾಡುತ್ತಿಿದ್ದುಘಿ, ಈ ಬಗ್ಗೆೆ ಎಸ್ಡಿಎಂಸಿ ಸದಾ ನಿಗಾ ವಹಿಸಿದೆ, ಉತ್ತಮ ಶಿಕ್ಷಣ ನೀಡಲು ಸಹಕರಿಸುತ್ತ ಬರುತ್ತಿಿದೆ. ವಿದ್ಯಾಾರ್ಥಿಗಳು ಕನ್ನಡ ಶಿಕ್ಷಕಿ ಸೋನಮ್, ಶಿವಕುಮಾರ ಅವರ ವಿರುದ್ಧ ನೀಡಿದ ದೂರು ಸತ್ಯಕ್ಕೆೆ ದೂರವಾಗಿದೆ ಆರೋಪವೂ ನಿರಾಧಾರ ಎಂದು ಎಸ್ಡಿಎಂಸಿ ಅಧ್ಯಕ್ಷರು ತಿಳಿಸಿದ್ದಾಾರೆ.

