ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.27: ತಮಿಳುನಾಡಿಗೆ ಕಾವೇರಿ ನೀಡುವ ಬಿಡುವುದು ವಿರೋಧಿಸಿ ಸೆ. 29 ರ ಕರ್ನಾಟಕ ಬಂದ್ ನಿಮಿತ್ಯ ಕೊಪ್ಪಳ ಜಿಲ್ಲೆ ಬಂದ್ ನಡೆಯಲಿದೆ. ತಮಿಳುನಾಡಿಗೆ ನೀರು ಬಿಡಿ ಎಂಬ ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶ ಸರಿಯಲ್ಲ ಎಂದು ಸ್ವಾಭಿಮಾನಿ ಕರವೇ ರಾಜ್ಯಾಧ್ಯಕ್ಷ ರಾಜೇಶ ರಡ್ಡಿ ಹೇಳಿದರು.
ಬುಧವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ಕಾವೇರಿ ಹೋರಾಟದ ಜೊತೆಗೆ ತುಂಗಭದ್ರಾದಿಂದ ಆಂಧ್ರ ಕ್ಕೆ ನೀರು ಬಿಡುತ್ತಿದ್ದು ಅದನ್ನೂ ಖಂಡಿಸಿ ಹೋರಾಡುತ್ತೇವೆ. ತುಂಗಭದ್ರಾ ಸುತ್ತಲಿನ ಭೂಮಿಗೆ ಎರಡು ಬೆಳೆಗೆ ನೀರು ಸಿಗುತ್ತಿಲ್ಲ. ಕುಡಿಯಲು ನೀರು ಸಿಗುತ್ತಿಲ್ಲ . ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆಯೂ ಹೋರಾಟ ನಡೆಯಲಿದೆ ಎಂದರು.
ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ ಬಂದ್ ದಿನ ಬೆಳಗ್ಗೆ ಹಿಟ್ನಾಳ ಟೋಲ್ ಹತ್ತಿರ ರಸ್ತೆ ತಡೆ ನಡೆಸಿ ನಂತರ ಕೊಪ್ಪಳದಲ್ಲಿ ಬೆಳಗ್ಗೆ 11 ಕ್ಕೆ ಬಸ್ ಸ್ಟಾಂಡ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸುತ್ತೇವೆ.
ರಾಜ್ಯದಲ್ಲಿ ಬರಗಾಲವಿದೆ ದನಕರುಗಳಿಗೆ ನೀರು ಸಿಗುವುದು ಕಷ್ಟವಾಗಲಿದೆ. ತಮಿಳುನಾಡಿಗೆ ನೀರು ಬಿಡುವುದು ಸರಿಯಲ್ಲ ಎಂದರು.
ಹೈ.ಕರವೇ ಅಧ್ಯಕ್ಷ ಸಂಗಮೇಶ ಬಾದವಾಡಗಿ, ಕಸ್ತೂರಿ ಕರ್ನಾಟಕ ಜನಪರ ಸೇನೆ ರಾಜ್ಯಾಧ್ಯಕ್ಷ ಪ್ರಶಾಂತ ನಾಯಕ ಇತರರು ಉಪಸ್ಥಿತರಿದ್ದರು.