ಸುದ್ದಿಮೂಲ ವಾರ್ತೆ,
ಕಲಬುರಗಿ, ಏ.20: ಸೇಡಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ ತೆಲ್ಕೂರ್ ಸಾವಿರಾರು ಬೆಂಬಲಿಗರೊಂದಿಗೆ ಸೇಡಂನ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಮಾತನಾಡಿದ ಅವರು, ರಾಜ್ಯದಲ್ಲೆ ಸೇಡಂ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ ಮಾದರಿ ತಾಲೂಕು ಮಾಡುವ ಮಹಾದಾಸೆ ಇಟ್ಟು ಕೊಂಡಿದ್ದೇನೆ, ಕ್ಷೇತ್ರದ ಜನರು ಮತ್ತೊಮ್ಮೆ ಬಿಜೆಪಿಗೆ ಅತೀ ಹೆಚ್ಚು ಮತಗಳನ್ನು ನೀಡುವ ಮೂಲಕ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ನನ್ನಗೆ ಆಶೀರ್ವಾದ ಮಾಡಲೆಂದೆ ಕ್ಷೇತ್ರದ ಮೂಲೆ ಮೂಲೆಯಿಂದ ಸಹಸ್ರ ಸಂಖ್ಯೆಯಲ್ಲಿ ಬಂದು, ನಿಮ್ಮ ಪ್ರೀತಿ ವಿಶ್ವಾಸ ನೀಡುವುದು ನೋಡಿದರೆ ಈ ಬಾರಿ ಚುನಾವಣೆಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮತಗಳಿಂದ ಬಿಜೆಪಿ ಪಕ್ಷ ಜಯಬೇರಿ ಬಾರಿಸುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೇಡಂ ಉಸ್ತುವಾರಿ ಅಭಿಷೇಕ ಕೇಸರಿ, ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ತಾಲೂಕು ಅಧ್ಯಕ್ಷ ಪರ್ವತರೆಡ್ಡಿ ನಾಮವಾರ್, ನಗರಾಧ್ಯಕ್ಷ ಸತೀಶ ಪಾಟೀಲ್ ತರನಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ತಾಲೂಕು ಅಧ್ಯಕ್ಷ ನಾಗರೆಡ್ಡಿ ದೇಶಮುಖ ಮದನಾ, ಮುಖಂಡರಾದ ಶಿವುಕುಮಾರ್ ಪಾಟೀಲ್ ತೆಲ್ಕೂರ್, ಅನೀಲ್ ಪಾಟೀಲ್ ತೆಲ್ಕೂರ್, ಪ್ರಧಾನ ಕಾರ್ಯದರ್ಶಿ ಕಾಶಿನಾಥ ನಿಡುಗುಂದಾ, ಓಂ ಪ್ರಕಾಶ ಪಾಟೀಲ್, ನರೇಶ ಮಲಕೂಡ್, ವಿಜಯಕುಮಾರ ಆಡಕಿ, ವಿಜಯಕುಮಾರ ಶರ್ಮಾ, ಯುವಮೋರ್ಚಾ ಅಧ್ಯಕ್ಷ ಪುಟ್ಟುಶೆಟ್ಟಿ, ರಾಘವೇಂದ್ರ ಮೆಕಾನಿಕ್, ಶ್ರೀಮಂತ ಆವಂಟಿ, ಸಿದ್ದು ಬಾನರ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.