ಸುದ್ದಿಮೂಲ ವಾರ್ತೆ,
ಸಿರುಗುಪ್ಪ. ನ-06:ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕರ ದಾಳಿ, ಅಕ್ರಮ ಸಾಗಾಣಿಕೆಯ ಪಡಿತರ ಅಕ್ಕಿ ವಶಕ್ಕೆ.
ತಾಲೂಕಿನ ಮಾಟಸೂಗೂರು, ಉತ್ತನೂರು, ಊಳೂರು ಮುಂತಾದ ಗ್ರಾಮಗಳಲ್ಲಿ ಸರ್ಕಾರ ಸಾರ್ವಜನಿಕರಿಗೆ ಉಚಿತವಾಗಿ ನೀಡುವ ಪಡಿತರ ಅಕ್ಕಿಯನ್ನು ಸಂಗ್ರಹಿಸಿ, ಮಾಟಸೂಗೂರು ಗ್ರಾಮದ ಮಾರ್ಗವಾಗಿ ಕರೂರು ಗ್ರಾಮದ ಕಡೆಗೆ ಅಕ್ರಮವಾಗಿ ಆಟೋದಲ್ಲಿ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು, ದಾಳಿ ಮಾಡುವಂತೆ ತೆಕ್ಕಲಕೋಟೆ ವೃತ್ತ ಪೊಲೀಸ್ ಠಾಣೆಯ ಸಿಪಿಐ ಸುಂದ್ರೇಶ ಕೆ. ಹೊಳೆಣ್ಣನವರ್ ದೂರವಾಣಿ ಕರೆ ಮಾಡಿ ತಿಳಿಸಿದ್ದರಿಂದ ದಾಳಿ ನಡೆಸಿ ಅಕ್ರಮವಾಗಿ
ಸಾಗಾಣಿಕೆ ಮಾಡುತ್ತಿದ್ದ ವಾಹನ ಮತ್ತು ಕೃತ್ಯದಲ್ಲಿ ಭಾಗಿಯಾಗಿರುವ ಏಸಪ್ಪ, ನಾಗಿರೆಡ್ಡಿ, ತಿಮ್ಮಪ್ಪ ಇವರುಗಳಿಂದ 23 ಚೀಲಗಳಲ್ಲಿದ್ದ 690 ಕೆ.ಜಿ.ಯ ಒಟ್ಟು 15,870 ರೂ.ಗಳ ಪಡಿತರ ಅಕ್ಕಿ ಜಪ್ತು ಮಾಡಿ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಗತ್ಯ ವಸ್ತು ಕಾಯಿದೆ ಅಡಿಯಲ್ಲಿ ಗಣಕೀಕೃತ ದೂರು ದಾಖಲಿಸಿದ್ದಾರೆ.