ಸುದ್ದಿಮೂಲ ವಾರ್ತೆ
ಹೊಸಕೋಟೆ, ನ.22 : ರಾಜ್ಯಮಟ್ಟದ ಜೂಡೋ ಸ್ಪರ್ಧೆಯಲ್ಲಿ ವಿಜೇತಳಾಗಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ವಿದ್ಯಾರ್ಥಿನಿ ಮಾನ್ಯ ಶ್ರೀಸಾಧನೆಯಿಂದ ಹೊಸಕೋಟೆ ತಾಲೂಕಿಗಷ್ಟೇ ಅಲ್ಲ, ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಜೂಡೋ ತರಬೇತಿದಾರ ಕಾರ್ತಿಕ್ ತಿಳಿಸಿದರು.
ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಜೂಡೋ ಸ್ಪರ್ಧೆಗೆ ತೆರಳಿದ ವಾಗಟ ಗ್ರಾಮದ ವಿದ್ಯಾರ್ಥಿನಿ ಮಾನ್ಯಶ್ರೀಗೆ ಕಸಾಪ ವತಿಯಿಂದ ಅಭಿನಂದಿಸಿ ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜೂಡೋ ಸ್ಪರ್ಧೆಯಲ್ಲಿ ಇದೇ ಪ್ರಥಮ ಭಾರಿಗೆ ಹೊಸಕೋಟೆ ತಾಲೂಕಿನ ವಿದ್ಯಾರ್ಥಿನಿ ಮಾನ್ಯಶ್ರೀ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ, ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಅಲ್ಲಿಯೂ ವಿಜೇತಳಾಗಿ ತಾಲೂಕಿಗೆ ಮತ್ತಷ್ಟು ಕೀರ್ತಿ ತರಲಿ ಎಂದು ಆಶಿಸಿದರು.
ಕಸಾಪ ಜಿಲ್ಲಾ ಪ್ರತಿನಿಧಿ ನಟರಾಜ್ ಎಂಎನ್ಆರ್ ಮಾತನಾಡಿ, ಮಹಾರಾಷ್ಟ್ರದ ಅಹಮದ್ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ ನಾಲ್ಕು ರಾಜ್ಯಗಳ ಕ್ರೀಡಾಪಟುಗಳ ನಡುವೆ ಸ್ಪರ್ಧಿಸಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕದ ಜೊತೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಈಗ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸಹ ಗೆಲುವನ್ನು ಸಾಧಿಸಲಿ ಎಂದು ಕನ್ನಡ ಧ್ವಜವನ್ನು ನೀಡಿ ಬೀಳ್ಕೊಡುಗೆ ನೀಡಲಾಗುತ್ತಿದೆ. ಎಂದರು.
ಮುಖ್ಯ ತರಬೇತಿದಾರ ಕಾರ್ತಿಕ್, ಪೋಷಕರಾದ ಕೆಸಿಎಂ ನಾಗೇಶ್, ವಿಜಯಕುಮಾರ್, ಶೆಟ್ಟಿ, ಮಂಜುನಾಥ್ ಹಾಜರಿದ್ದರು.