ಸುದ್ದಿಮೂಲ ವಾರ್ತೆ ಔರಾದ್, ನ.05:
ತಾಲೂಕಿನ ಬಲ್ಲೂರ್ ಜೆ ಗ್ರಾಾಮದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ 1ರಿಂದ 6ನೇ ತರಗತಿ ಮಕ್ಕಳಿಗೆ ಒಂದೇ ಕೋಣೆಯಲ್ಲಿ ಪಾಠ ಮಾಡುವ ಬಗ್ಗೆೆ ಹಾಗೂ 7ನೇ ತರಗತಿಯಲ್ಲಿ ಮಕ್ಕಳೇ ಇಲ್ಲದಿರುವ ಬಗ್ಗೆೆ ಸುದ್ದಿಮೂಲ ಪತ್ರಿಿಕೆ ಆರಂಭಿಸಿರುವ ಸರ್ಕಾರಿ ಶಾಲೆಯಲ್ಲಿ ಕಲಿಕಾ ದುರ್ಗತಿ ಅಭಿಯಾನದ ಅಂಗವಾಗಿ ಪ್ರಕಟಗೊಂಡ ವಿಶೇಷ ವರದಿಗೆ ತಕ್ಷಣ ಸ್ಪಂದಿಸಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ತೀವ್ರ ಕಳವಳ ವ್ಯಕ್ತಪಡಿಸಿದೆ.
ದಿನಾಂಕ 5-12-2025ರಂದು ಈ ಕುರಿತು ಸವಿಸ್ತಾಾರವಾಗಿ ವರದಿ ಪ್ರಕಟಗೊಂಡಿದ್ದು, ಇದನ್ನು ಗಮನಿಸಿದ ಮಕ್ಕಳ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಸ್ವಯಂ ಪ್ರೇೇರಿತ ದೂರು ದಾಖಲಿಸಿಕೊಳ್ಳಲು ಆದೇಶಿಸಿದ್ದಾರೆ. ಹಾಗೇ ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆದಿದ್ದು, 7 ದಿನಗಳೊಳಗೆ ಸೂಕ್ತ ಮಾಹಿತಿವುಳ್ಳ ವರದಿ ಸಲ್ಲಿಸಲು ಖಡಕ್ ಸೂಚನೆ ನೀಡಿದ್ದಾರೆ.
ಒಂದೇ ಕೋಣೆಯಲ್ಲಿ 6 ತರಗತಿಯ ಮಕ್ಕಳಿಗೆ ಕೂರಿಸಿ ಬೋಧನೆ ಮಾಡುತ್ತಿಿರುವುದು ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಿಯಿಂದ ತೀವ್ರ ಕಳವಳಕಾರಿ ಸಂಗತಿಯಾಗಿದೆ ಎಂದು ದೂರಿನಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ.
ಶಾಲೆಯಲ್ಲಿ ದಾಖಲಾತಿ ಆಗದೇ ಇರುವುದಕ್ಕೆೆ, ಶಿಕ್ಷಕರ ನೇಮಕ ಮಾಡದೇ ಇರುವ ಬಗ್ಗೆೆ ಸೂಕ್ತ ಕಾರಣಗಳೊಂದಿಗೆ ಆಯೋಗಕ್ಕೆೆ ಮಾಹಿತಿ ನೀಡುವಂತೆ ಪತ್ರದಲ್ಲಿ ಸೂಚಿಸಲಾಗಿದೆ.
ಈಗಾಗಲೇ ತಾಲೂಕಿನ ಕೌಠಾ ಬಿ ಗ್ರಾಾಮದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಕನ್ನರಾ ಯಿಗಲಿಷ್ ಎಂದು ಬರೆದ ವರದಿಗೂ ಸ್ಪಂದಿಸಿದ ಮಕ್ಕಳ ಹಕ್ಕುಗಳ ಆಯೋಗವು ಸ್ವಯಂ ಪ್ರೇೇರಿತ ದೂರು ದಾಖಲಿಸಿಕೊಂಡು ಜಿಲ್ಲಾಧಿಕಾರಿಗೆ ಪತ್ರ ಬರೆದು ವರದಿ ನೀಡಲು ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

