ಸುದ್ದಿಮೂಲ ವಾರ್ತೆ ರಾಯಚೂರು, ಡಿ.29:
ವೃತ್ತಿಿಯಿಂದ ಮಾತ್ರ ನಿವೃತ್ತರಾಗಿದ್ದಾಾರೆ ಆದರೆ ಅವರಲ್ಲಿರುವ ಚೈತನ್ಯ ಚಟುವಟಿಕೆಗಳು ಇನ್ನು ಕುಂದಿಲ್ಲ, ಹಿರಿಯ ನಾಗರಿಕರೆಂದರೆ ದೈವ ಸ್ವರೂಪ ಎಂದು ನೀಲಗಲ್ ಬೃಹನ್ಮಠದ ಶ್ರೀ ಬ್ರಹ್ಮ ಅಭಿನವ ರೇಣುಕಾ ಶಾಂತಮಲ್ಲ ಶಿವಾಚಾರ್ಯರು ಹೇಳಿದರು.
ನಗರದ ವೀರಶೈವ ಮಹಾಂತೇಶ ಕಲ್ಯಾಾಣ ಮಂಟಪದಲ್ಲಿ ಜಿಲ್ಲಾ ಸರಕಾರಿ ನಿವೃತ್ತ ನೌಕರರ ಸಂಘದ ಹಿರಿಯ ನಾಗರಿಕ ದಿನಾಚರಣೆ ಹಾಗೂ ಸನ್ಮಾಾನ ಸಮಾರಂಭದ ಸಾನ್ನಿಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತಿಿ ಹೊಂದಿದರೆ ಮನೆಯಲ್ಲಿ ವಿಶ್ರಾಾಂತಿ ತೆಗೆದುಕೊಳ್ಳುವ ಮನಸ್ಸು ಮಾಡದೆ ಸಾರ್ವಜನಿಕರ ಹಿತಕ್ಕಾಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ನಿವೃತ್ತಿಿ ಹೊಂದಿದರೊ ಸಹ ಚಿಕ್ಕ ಹುಡುಗರಂತೆ ಚಟುವಟಿಕೆಯಿಂದ ಸಾರ್ವಜನಿಕರ ಸೇವೆ ಹಾಗೂ ವಿವಿಧ ಕ್ಷೇತ್ರಗಳಿಗೆ ತಮ್ಮ ಮಾರ್ಗದರ್ಶನ ಮಾಡುತ್ತಿಿದ್ದಾಾರೆ ಎಂದು ಶ್ಲಾಾಘಿಸಿದರು.
ಕಾರ್ಯಕ್ರಮ ಉದ್ಘಾಾಟಿಸಿದ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣ ಭೂಪಾಲ್ ನಾಡಗೌಡ ಮಾತನಾಡಿ, ಹಿರಿಯರು ಒಗ್ಗೂಡಿ ಸಂಘಟಿತರಾಗಿ ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ನಿವೃತ್ತರ ಸಂಘವನ್ನು ಹುಟ್ಟು ಹಾಕಿ, ಶ್ರೇಯೋಭಿವೃದ್ಧಿಿಗಾಗಿ ಸಂಘದ ಮೂಲಕ ರಚನಾತ್ಮಕ ಕಾರ್ಯಗಳನ್ನು ಮಾಡುತ್ತ ಸಮಸ್ಯೆೆಗಳಿಗೆ ಸ್ಪಂದಿಸುತ್ತಿಿರುವುದು ಶ್ಲಾಾಘನೀಯ ಕಾರ್ಯವಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಶಾವಂತಗೇರೆ ಮಾತನಾಡಿ, ಸಂಘದ ಕಾರ್ಯ ಕಲಾಪಗಳ ಬಗ್ಗೆೆ ಮತ್ತು ಹಿರಿಯರ ಮಾರ್ಗದರ್ಶನ ಸಮಾಜಕ್ಕೆೆ ಯಾವಾಗಲೂ ಇರಬೇಕು ಎಂದು ಮನವಿ ಮಾಡಿದರು.
ಎಸ್ಬಿಐ ಮುಖ್ಯ ಶಾಖೆಯ ವ್ಯವಸ್ಥಾಾಪಕ ಆನಂದ್ ಬಸವರಾಜ್ ವಾಲಿ ಮಾತನಾಡಿ, ಬ್ಯಾಾಂಕಿನ ಸೌಲಭ್ಯಗಳ ಬಗ್ಗೆೆ ಮತ್ತು ನಿವೃತ್ತರ ಪಿಂಚಣಿ ವಿತರಣೆಯ ಸೌಲಭ್ಯಗಳು ಯಾವುದಾದರೂ ಲೋಪ ದೋಷಗಳಾಗದಂತೆ ಹಿರಿಯ ನಾಗರಿಕರಿಗೆ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾದೇವಪ್ಪ ಏಗನೂರ ಮಾತನಾಡಿ, ಸದಸ್ಯರ ಸಹಕಾರದಿಂದ ಸಂಘ ಸಾಮಾಜಿಕವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಿದೆ. ನಮ್ಮಲ್ಲಿ ನಿವೃತ್ತಿಿ ಹೊಂದಿದವರನ್ನು ಸದಸ್ಯರನ್ನಾಾಗಿ ತೆಗೆದುಕೊಂಡು ಅವರಿಗೆ ನಿವೃತ್ತಿಿ ಜೀವನದಲ್ಲಿ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವ ಕಾರ್ಯ ನಮ್ಮ ಸಂಘ ಮಾಡುತ್ತಿಿದೆ ಎಂದು ಹೇಳಿದರು.ಸಮಾರಂಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಿ ಪಡೆದ ಇಬ್ಬರು ಸಾಧಕರಿಗೆ ಸನ್ಮಾಾನಿಸಿ ಗೌರವಿಸಲಾಯಿತು. 75 ವರ್ಷದ 40 ಜನ ಸಂಘದ ಹಿರಿಯ ಸದಸ್ಯರಿಗೆ ವಿಶೇಷವಾಗಿ ಸನ್ಮಾಾನಿಸಲಾಯಿತು.
ಸಂಘದ ಖಜಾಂಚಿ ಎಸ್ ಶಂಕರಗೌಡ, ಹಿರಿಯ ಸದಸ್ಯರಾದ ಅಜಿಝಾ ಸುಲ್ತಾಾನ್, ಉಪಾಧ್ಯಕ್ಷರಾದ ದಾನಮ್ಮ, ಬಾಬುಭಂಡಾರಿಗಲ್ ಸೇರಿದಂತೆ ಹಲವು ನೌಕರರು, ಸಂಘದ ಪದಾಧಿಕಾರಿಗಳಿದ್ದರು.
ಹಿರಿಯ ನಾಗರಿಕರ ದಿನಾಚರಣೆ, ಸನ್ಮಾನ ದೈವಸ್ವರೂಪಿ ಹಿರಿಯರ ಚೈತನ್ಯ ಅನುಕರಣೀಯ-ನೀಲಗಲ್ಶ್ರೀ

