ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ಕಲ್ಯಾಾಣ ಕರ್ನಾಟಕ ಭಾಗದ ಹಿರಿಯ ಮುತ್ಸದ್ದಿಘಿ, ಮಾಜಿ ಸಚಿವರಾಗಿದ್ದ ಡಾ.ಭೀಮಣ್ಣ ಖಂಡ್ರೆೆ ಅವರ ನಿಧನ ತುಂಬಲಾರದ ನಷ್ಟ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ನುಡಿನಮನ ಸಲ್ಲಿಸಿದ್ದಾಾರೆ.
ಡಾ.ಭೀಮಣ್ಣ ಖಂಡ್ರೆೆ ಅವರು ಶಾಸಕರಾಗಿ, ಸಾರಿಗೆ ಇಲಾಖೆ ಸಚಿವರಾಗಿದ್ದಾಾಗ ನಮ್ಮ ಭಾಗದ ಅನೇಕ ಕಡೆ ಸಂಚಾರಕ್ಕೆೆ ಹೊಸ ಬಸ್ಗಳ ಬೇಡಿಕೆ ಮಂಡಿಸಿದಾಗ ಸ್ಪಂದಿಸಿದ್ದರು. ಸಹಕಾರಿ ಕ್ಷೇತ್ರದಲ್ಲೂ ಅವರು ಅಪಾರ ಅನುಭವ ಹೊಂದಿದ್ದರು. ಕಬ್ಬು ಬೆಳೆಗಾರರ ಹಿತಕ್ಕಾಾಗಿ ಬೀದರ್ನಲ್ಲಿ ಸಹಕಾರ ಸಕ್ಕರೆ ಕಾರ್ಖಾನೆ, ಮಹಾತ್ಮಗಾಂಧಿ ಸಕ್ಕರೆ ಕಾರ್ಖಾನೆ ಸ್ಥಾಾಪಿಸಿದ್ದರು. ಅವರಲ್ಲಿನ ಸೇವಾ ಗುಣ, ವೀರಶೈವ ಲಿಂಗಾಯತ ಸಮುದಾಯದ ಸಂಘಟನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಅಲ್ಲದೆ, ಗಡಿಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆೆ ಸ್ಥಾಾಪಿಸಿ ಗಡಿ ಜಿಲ್ಲೆೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಿದ್ದಾಾರೆ. ರಂಗದಲ್ಲಿ ಗಡಿ ಭಾಗದ ಎಂದು ಸ್ಮರಿಸಿದರು.
ಶರಣರ ಚಿಂತನೆಗಳನ್ನು ತಮ್ಮ ಬಾಳಿನುದ್ದಕ್ಕೂ ಅನುಸರಿಸಿಕೊಂಡು ಬಾಳಿದ ಅವರ ಸರಳ ಜೀವನ ಮಾದರಿಯಾಗಿದೆ ಅವರ ಅಗಲಿಕೆಯಿಂದ ನಮ್ಮ ಭಾಗಕ್ಕೆೆ ಒಬ್ಬ ನಿಷ್ಠಾಾವಂತ ಪಕ್ಷದ ಮುಖಂಡ, ಸರ್ವ ಸಮುದಾಯಗಳ ಸೇವಕರೊಬ್ಬರ ಕಳೆದುಕೊಂಡ ಭಾವ ಕಾಡುತ್ತಿಿದೆ ಎಂದು ನುಡಿನಮನ ಸಲ್ಲಿಸಿದ್ದಾಾರೆ.
ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಿ ಪುತ್ರರಾಗಿರುವ ಸಚಿವರೂ ಆದ ಈಶ್ವರ ಬಿ ಖಂಡ್ರೆೆಘಿ, ಸಂಸದ ಸಾಗರ ಬಿ.ಖಂಡ್ರೆೆ ಮತ್ತವರ ಕುಟುಂಬಕ್ಕೆೆ ಭಗವಂತ ಕರುಣಿಸಲಿ ಎಂದು ಪ್ರಾಾರ್ಥಿಸುವುದಾಗಿ ಸಚಿವ ಬೋಸರಾಜ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾಾರೆ.
ಹಿರಿಯ ಮುತ್ಸದ್ದಿ ಡಾ.ಭೀಮಣ್ಣ ಖಂಡ್ರೆ ನಿಧನ, ಬೋಸರಾಜ್ ನುಡಿ ನಮನ

