ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಡಿ.28:
ಮರ್ಯಾದೆ ಹತ್ಯೆೆ ಪ್ರಕರಣದ ಆರೋಪಿಗಳಾದ ಪ್ರಕಾಶಗೌಡ ಪಾಟೀಲ್ ಸೇರಿ ಇತರರನ್ನು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ.ರಾ.ದ.ಸಂ.) ರಾಜ್ಯ ಸಮಿತಿ ನೇತೃತ್ವದಲ್ಲಿ ಆಗ್ರಹಿಸಲಾಯಿತು.
ರಾಜ್ಯ ಸಂಘಟನಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಅವರ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಲಿಂಗಸುಗೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿ ಮರ್ಯಾದೆ ಹೆಸರಿನಲ್ಲಿ ನಡೆವ ಹತ್ಯೆೆಗಳು ಸಮಾಜದ ಮಾನವೀಯತೆ ಪ್ರಶ್ನಿಿಸುವ ಅಮಾನವೀಯ ಕೃತ್ಯಗಳಾಗಿದ್ದು, ಇವುಗಳಿಗೆ ಸರ್ಕಾರ ಕಠಿಣ ಶಿಕ್ಷೆ ವಿಧಿಸುವ ಮೂಲಕ ಕಡಿವಾಣ ಹಾಕಬೇಕೆಂದು ಒತ್ತಾಾಯಿಸಿದರು.
ಈ ಕೊಲೆಗೆ ಕಾರಣರಾದ ಪ್ರಕಾಶಗೌಡ ಪಾಟೀಲ್, ಪ್ರೀತಮಗೌಡ ಪಾಟೀಲ್, ಅರುಣಗೌಡ ಪಾಟೀಲ್, ಈರಪ್ಪ ಹಾಗೂ ಮುದಕಪ್ಪ ಇವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಂತಹ ಹತ್ಯೆೆಗಳು ಮರುಕಳಿಸದಂತೆ ಸರ್ಕಾರ ಹೊಸ ಕಾನೂನು ಜಾರಿಗೆ ತರಬೇಕು ಮೃತ ವಿವೇಕಾನಂದನ ಕುಟುಂಬಕ್ಕೆೆ ಸರ್ಕಾರವು 50ಲಕ್ಷರೂ. ಪರಿಹಾರ ಚಿಕಿತ್ಸೆೆಯ ವೆಚ್ಚ ಸರ್ಕಾರವೇ ಭರಿಸಬೇಕು. ಈ ಪ್ರಕರಣದಲ್ಲಿ ಗಾಯಗೊಂಡವರಿಗೆ ತಲಾ 10 ಲಕ್ಷ ರೂ. ಪರಿಹಾರ ಹಾಗೂ ಚಿಕಿತ್ಸಾಾ ವೆಚ್ಚ ಸರ್ಕಾರವೇ ಭರಿಸಬೇಕು. ವಿವೇಕಾನಂದನ ಕುಟುಂಬಕ್ಕೆೆ ಸೂಕ್ತ ರಕ್ಷಣೆ ಮತ್ತು ಪೊಲೀಸ್ ಬಂದೋಬಸ್ತ್ ಒದಗಿಸಬೇಕೆಂದು ಆಗ್ರಹಿಸಲಾಯಿತು.
ಈ ವೇಳೆ ಅಕ್ರಮಪಾಷಾ, ಷಣ್ಮುಖರೆಡ್ಡಿಿ, ಮಾಳಪ್ಪ ಗೌಡ, ಹುಸೇನಪ್ಪ ನಾಯಕ, ಬಾಲರಾಜ ನಾಯಕ, ಪರಶುರಾಮ ಗುಡಿಜಾವೂರು, ಪರಮಾನಂದ ಹಾದಿಮನಿ, ದೇವೇಂದ್ರಪ್ಪ ಹುನಕುಂಟಿ, ಹನುಮಂತ ದೇವದುರ್ಗಾ ಸೇರಿ ಇತರರಿದ್ದರು.
‘ಮರ್ಯಾದೆ ಹತ್ಯೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ’

