ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ಭಾರತ್ ಸೇವಾದಳದ ಮುಖಾಂತರ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಶಿಸ್ತು ಸೇವಾ ಮನೋಭಾವನೆ ಮೂಡಿಸಬೇಕೆಂದು ನಗರದ ಬಾಲಕಿಯರ ಸರ್ಕಾರಿ ಪ್ರೌೌಢಶಾಲೆಯ ಮುಖ್ಯ ಗುರು ಶ್ರೀನಿವಾಸ್ ಮರೆಡ್ಡಿಿ ಹೇಳಿದರು.
ಭಾರತ ಸೇವಾದಳ ಜಿಲ್ಲಾ ಸಮಿತಿ ರಾಯಚೂರು ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತಾಾಶ್ರಯದಲ್ಲಿ ಹಮ್ಮಿಿಕೊಂಡಿದ್ದ ಭಾರತ್ ಸೇವಾದಳ ಅಮೃತ ಮಹೋತ್ಸವ ಹಾಗೂ ಸಪ್ತಾಾಹ ಆಚರಣೆ ಅಂಗವಾಗಿ ದೇಶಭಕ್ತಿಿ ಗೀತೆ ಮತ್ತು ರಾಷ್ಟ್ರ ನಾಯಕರ ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿಿ ಪತ್ರಗಳ ವಿತರಿಸಿ ಮಾತನಾಡಿದರು. ಭಾರತ ಸೇವಾದಳ, ಎನ್ಎಸ್ಎಸ್, ಎನ್ಸಿಸಿ ಘಟಕಗಳು ದೇಶಸೇವೆಗೆ ಪ್ರೇರಣೆ ನೀಡುವ ಘಟಕಗಳಲ್ಲಿ ವಿದ್ಯಾಾರ್ಥಿಗಳು ಸೇರಿಕೊಂಡು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಭಾರತ್ ಸೇವಾದಳದ ವಿಭಾಗ ಸಂಘಟಕ ವಿದ್ಯಾಾಸಾಗರ ಚಿಣಮಗೇರಿ ಮಾತನಾಡಿ, ಸೇವೆಗಾಗಿ ಬಾಳು ಎಂಬ ಧ್ಯೇಯ ವಾಕ್ಯದೊಂದಿಗೆ ಸೇವಾದಳದ ಇತಿಹಾಸ ವಿವರಿಸಿದರು.
ಇದೇ ಸಂದರ್ಭದಲ್ಲಿ ದೇಶಭಕ್ತಿಿ ಗೀತೆ ಸ್ಪರ್ಧೆಯಲ್ಲಿ ನಾಜ್ಮಿಿನ ಪ್ರಥಮ, ಸಹನಾ ದ್ವಿಿತೀಯ, ಭೂಮಿಕಾ ತೃತೀಯ ಬಹುಮಾನ ಪಡೆದರೆ, ಪ್ರಬಂಧ ಸ್ಪರ್ಧೆಯಲ್ಲಿ ಬಿಂದುಶ್ರೀ ಪ್ರಥಮ , ಭೂಮಿಕಾ ದ್ವಿಿತೀಯ , ಪೂಜಾ ತೃತೀಯ ಬಹುಮಾನ ಪಡೆದುಕೊಂಡರು
ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರಾಧಿಕಾ, ಮೀರಾಬಾಯಿ, ಕಸ್ತೂರಿ ಸೇರಿದಂತೆ ಸೇವಾ ದಳ ವಿದ್ಯಾಾರ್ಥಿನಿಯರು ಉಪಸ್ಥಿಿತರಿದ್ದರು.
ಸೇವಾ ದಳ ಅಮೃತ ಮಹೋತ್ಸವ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ಶಿಸ್ತು, ಸೇವಾ ಮನೋಭಾವ ಹೆಚ್ಚಾಗಬೇಕು – ಶ್ರೀನಿವಾಸ ಮರೆಡ್ಡಿ

