ಸುದ್ದಿಮೂಲ ವಾರ್ತೆ ರಾಯಚೂರು, ಡಿ.11:
ಮಾದಾರ ಚನ್ನಯ್ಯ ಶ್ರೀಗಳ ಆಶಯದಂತೆ ಸಾಮರಸ್ಯ ಸಮಾಜ ನಿರ್ಮಿಸಲು ಸೇವಾ ಸಮಿತಿ ಬದ್ದವಾಗಿರಲಿದೆ ಎಂದು ಶ್ರೀ ಮಾದಾರ ಚೆನ್ನಯ್ಯ ಸೇವಾ ಸಮಿತಿ ರಾಜ್ಯ ಗೌರವಾಧ್ಯಕ್ಷ ರವೀಂದ್ರ ಜಲ್ದಾಾರ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿ ಜಿಲ್ಲೆಯ ಪದಾಧಿಕಾರಿಗಳ ಪ್ರಥಮ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಮಾದಾರ ಶ್ರೀಗಳು ಕಳೆದ 23 ವರ್ಷಗಳಿಂದ ನಮ್ಮ ಮಾದಿಗ ಸಮಾಜದ ಸರ್ವತೋಮುಖ ಅಭಿವೃದ್ಧಿಿಗಾಗಿ ನಿಸ್ವಾಾರ್ಥತೆಯಿಂದ ಮಠದ ಮುಖಾಂತರ ಕೆಲಸ ಮಾಡುತ್ತಲೆ ಇಡೀ ಮಾದಿಗ ಸಮಾಜಕ್ಕೆೆ ಆದರ್ಶ ಪ್ರಿಿಯರಾಗಿ ಸಮಾಜದಲ್ಲಿ ಸಾಮರಸ್ಯ ತರುವ ನಿಟ್ಟಿಿನಲ್ಲಿ ಮುಂಚೂಣಿ ಸಂತರಾಗಿದ್ದಾರೆ ಎಂದರು.
ಅವರ ಕೆಲಸಗಳೇ ನಮ್ಮ ಸೇವಾ ಸಮಿತಿಗೆ ಶ್ರೀರಕ್ಷೆಯಾಗಿದ್ದು ಮುಂದಿನ ದಿನಗಳಲ್ಲಿ ಸೇವಾ ಸಮಿತಿಯನ್ನು ಜಿಲ್ಲೆಯಲ್ಲಿ ಕಟ್ಟಿಿ ಸಮಾಜದ ಉಪಜಾತಿಗಳ ಸಂಘಟಿತಗೊಳಿಸಿ ಶ್ರೀಗಳ ಆಶಯಗಳನ್ನು ಸಾಕಾರ ಗೊಳಿಸುವ ನಿಟ್ಟಿಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಸಮಾಜದ ಸ್ವಾಾಮಿಗಳಾದ ಅತ್ತನೂರ ಭೀಮರಾಯ, ಸೇವಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಜೆ.ಎಂ. ವೀರೇಶ, ನಗರಸಭೆ ಮಾಜಿ ಸದಸ್ಯ ಮಂಚಾಲ ಭೀಮಣ್ಣ, ಮೋಚಿಗಾರ ಸಮಾಜದ ಜಿಲ್ಲಾಧ್ಯಕ್ಷ ಭೀಮರಾಜ, ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಜೆ.ಎಂ. ಮೌನೇಶ, ಪರಿಶಪ್ಪ ಜಲ್ದಾಾರ, ಆರ್. ರಮೇಶ್ರಮೇಶ್ ಜಗ್ಲಿಿ ಮತ್ತಿಿತರರಿದ್ದರು.
ಸಾಮರಸ್ಯ ಸಮಾಜ ನಿರ್ಮಿಸಲು ಸೇವಾ ಸಮಿತಿ ಬದ್ದ – ಜಲ್ದಾರ್

