ಸುದ್ದಿಮೂಲ ವಾರ್ತೆ ಯಾದಗಿರಿ, ಜ.14:
ಎಲ್ಲಿ ನೋಡಿದರೂ ಅಲ್ಲಿ ಹಳದಿಯ ಅಬ್ಬರ.., ಹಳದಿಯ ಹೊಸ ಬಟ್ಟೆೆಗಳೊಂದಿಗೆ ತಮ್ಮ ಭಕ್ತಿಿಯನ್ನು ಸಮರ್ಪಿಸಲು ಆಗಮಿಸಿದ ಭಕ್ತರ ದಂಡು.., ಜನಸಾಗರದ ಮಧ್ಯೆೆ ಏಳು ಕೋಟಿ, ಕೋಟಿ, ಕೋಟಿಘೇ ಎಂಬ ಘೋಷಣೆಗಳ ತಾರಕ.., ಹೀಗೆ, ಮಕರ ಸಂಕ್ರಮಣ ದಿನದಂದು ನಡೆಯುವ ಐತಿಹಾಸಿಕ ಹಾಗೂ ಪ್ರಸಿದ್ಧ ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆೆಯ ಸಂಭ್ರಮ ನೋಡುಗರಲ್ಲಿ ಭಕ್ತಿಿಯ ಪರಾಕಾಷ್ಟೆೆ ಮೆರೆಯಿತು.
ನಾಡಿನ ಆರಾಧ್ಯ ದೇವರಲ್ಲಿ ಒಂದಾದ ಇಲ್ಲಿಗೆ ಸಮೀಪದ ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆೆಯ ಅಂಗವಾಗಿ ಇಂದು ಜ.14 ರಂದು ಮಧ್ಯಾಾಹ್ನ 12 ಗಂಟೆಗೆ ದೇವಸ್ಥಾಾನದ ಸಂಪ್ರದಾಯದಂತೆ ಬೆಟ್ಟದ ಮೇಲಿನ ಗುಹಾಂತರದಲ್ಲಿ ನೆಲೆಸಿರುವ ಮಲ್ಲಯ್ಯನ ಕುದುರೆಯೊಂದಿಗೆ ಆರಂಭವಾದ ಪಲ್ಲಕ್ಕಿಿ ಉತ್ಸವ ನೋಡಲು ಲಕ್ಷಾಾಂತರ ಜನ ಸಾಗರವೇ ಹರಿದು ಬಂದಿತ್ತು.
ಬೆಟ್ಟದ ಮೇಲಿನಿಂದ ಅಸಂಖ್ಯಾಾತ ಭಕ್ತರ ಮಧ್ಯೆೆ ನಡೆದ ಭವ್ಯ ಮೆರವಣಿಗೆ ಹೊನ್ನಕೆರೆಯವರೆಗೆ ನಡೆಯಿತು. ಅಲ್ಲಿ, ಗಂಗಾಸ್ನಾಾನದ ವಿಶೇಷ ಪೂಜೆಯೊಂದಿಗೆ ಮರಳಿ ದೇವಸ್ಥಾಾನದವರೆಗೆ ಆಗಮಿಸಿದ ಪಲ್ಲಕ್ಕಿಿ ಮೆರವಣಿಗೆ ವೀಕ್ಷಿಿಸುವುದೇ ಈ ಜಾತ್ರೆೆಯ ವಿಶೇಷವಾಗಿರುವುದರಿಂದ ಅಸಂಖ್ಯಾಾತ ಜನರು ಬೆಟ್ಟದ ಮೇಲೆ ಹಾಗೂ ರಸ್ತೆೆ ಬದಿಯಲ್ಲಿ ನಿಂತುಕೊಂಡು ಮಲ್ಲಯ್ಯನ ಪಲ್ಲಕ್ಕಿಿ ಉತ್ಸವದ ದರ್ಶನ ಪಡೆದು ಪುನೀತರಾದರು.
ಮೆರವಣಿಗೆ ಮೂಲಕ ದೇವಸ್ಥಾಾನ ಕೆಳಗೆ ಇರುವ ಪಾದಗಟ್ಟೆೆಗೆ ಆಗಮಿಸಿದಾಗ ಮೊದಲಿನ ಸಂಪ್ರದಾಯದಂತೆ ಅನುಭವಿ ಪೂಜಾರಿಯಿಂದ ಸರಪಳಿ ಹರಿಯುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಇಡೀ ಪ್ರದೇಶ ಭಂಡಾರ ಎರಚುವ ಪದ್ದತಿಯಿಂದ ಇಡೀ ದೇವಸ್ಥಾಾನದ ಪ್ರಾಾಂಗಣ ಹಳದಿಮಯವಾಗಿತ್ತು. ಈ ಸಂದರ್ಭದಲ್ಲಿ ಗ್ರಾಾಮೀಣ ಭಾಗದಿಂದ ಆಗಮಿಸಿದ ಭಕ್ತರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಭತ್ತ, ಜೋಳ, ಶೇಂಗಾ, ಸಜ್ಜೆೆ ಇನ್ನಿಿತರ ಬೆಳೆಗಳನ್ನು ಮೇಲೆ ಎಸೆದು ತಮ್ಮ ಭಕ್ತಿಿ ಅರ್ಪಿಸಿದರು. ಹೊನ್ನಕೆರೆಗೆ ತೆರಳಿದ ಪಲ್ಲಕ್ಕಿಿ ಪೂಜಾರಿಗಳು ಪೊಲೀಸರ ಬಿಗಿ ಭದ್ರತೆಯಲ್ಲಿ ಮಲ್ಲಯ್ಯನ ಪಲ್ಲಕ್ಕಿಿ ಉತ್ಸವ ನಡೆಯಿತು.
ಬುಧವಾರ ಬೆಳಿಗ್ಗೆೆ ಬ್ರಾಾಹ್ಮಿಿ ಮೂಹೂರ್ತದಲ್ಲಿ ಮಲ್ಲಯ್ಯನಿಗೆ ಮಹಾರುದ್ರಾಾಭಿಷೇಕ ಹಾಗೂ ಭಂಡಾರ ಪೂಜೆ ನೆರವೇರಿಸಲಾಯಿತು. ರಾತ್ರಿಿ 11 ಗಂಟೆಗೆ ಮೈಲಾರಲಿಂಗೇಶ್ವರ ಹಾಗೂ ಗಂಗಿ ಮಾಳಮ್ಮರ ವಿವಾಹ ಕಾರ್ಯಕ್ರಮ ನಡೆಯಿತು. ರಾತ್ರಿಿಯಿಡಿ ಮಲ್ಲಯ್ಯನ ಪವಾಡಗಳ ಭಜನೆ ನಡೆಯಿತು. ಮಕರ ಸಂಕ್ರಾಾತಿ ದಿನದಂದು ಜರುಗುವ ಜಾತ್ರೆೆಗೆ ಕರ್ನಾಟಕ, ತೆಲಂಗಾಣ, ಮಹಾರಾಷ್ಟ, ಆಂಧ್ರಪ್ರದೇಶ ಸೇರಿದಂತೆ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ರವಿವಾರದಿಂದಲೇ ಮೈಲಾಪೂರಕ್ಕೆೆ ಆಗಮಿಸಿ, ಚಳಿಯನ್ನು ಲೆಕ್ಕಿಿಸದೇ ಜಾತ್ರೆೆಯಲ್ಲಿ ಪಾಲ್ಗೊೊಂಡರು.
ಬುಧವಾರ ಬೆಳಿಗ್ಗೆೆ 6 ಗಂಟೆಯಿದಲೇ ಅಸಂಖ್ಯಾಾತ ಭಕ್ತರು ಪವಿತ್ರ ಹೊನ್ನಕೆರೆಯಲ್ಲಿ ಪುಣ್ಯ ಸ್ನಾಾನ ಮಾಡಿ, ದೇವರ ದರ್ಶನ ಪಡೆಯಲು ಗಂಟೆಗಳ ಕಾಲ ಸರಧಿಯಲ್ಲಿ ನಿಂತು ಮಲ್ಲಯ್ಯನಿಗೆ ಏಳು ಕೋಟಿಗೆ, ಏಳು ಕೋಟಿಗೆ ಜೈಕಾರ ಹಾಕುತ್ತ ಭಕ್ತಿಿ ಭಾವದಿಂದ ಜನಸಗಾರದ ಮಧ್ಯೆೆ ಗುಹಾಂತರ ದೇವಾಲಯ ತಲುಪಿ ಮಲ್ಲಯ್ಯನ ದರ್ಶನ ಪಡೆದರು. ಜಾತ್ರೆೆಗೆ ಬರುವ ಸಕಲ ಭಕ್ತರಿಗೆ ಮಲ್ಲಯ್ಯನ ದರ್ಶನವಾಗಲಿ ಎಂದು ಜಿಲ್ಲಾಡಳಿತ ತಲಾ 300 ರೂ. ಟಿಕೆಟ್ ದರ ನಿಗದಿಪಡಿಸಿರುವುದರಿಂದ ಅಲ್ಲಿಯೂ ಕೂಡ ಭಕ್ತರು ಹೆಚ್ಚಿಿನ ಸಂಖ್ಯೆೆಯಲ್ಲಿ ದರ್ಶನ ಪಡೆದರು. ಜಾತ್ರೆೆ ಜ. 12 ರಿಂದ ಆರಂಭವಾಗಿದ್ದು, ಜ. 18 ರವರೆಗೆ ನಡೆಯಲಿದೆ.
ಏಳು ಕೋಟಿ… ಕೋಟಿ… ಕೋಟಿಘೇ… ಮೈಲಾಪೂರ ಮೈಲಾರಲಿಂಗೇಶ್ವರ ಜಾತ್ರೆಗೆ ಹರಿದು ಬಂದ ಜನ ಸಾಗರ ಭಂಡಾರದ ಒಡೆಯನ ಸಂಭ್ರಮದ ಪಲ್ಲಕ್ಕಿ ಉತ್ಸವ

