ಸುದ್ದಿಮೂಲ ವಾರ್ತೆ
ತಿಪಟೂರು, ಜು.15: ಮನುಷ್ಯನಿಗೆ ಆರೋಗ್ಯ ಮತ್ತು ಶಿಕ್ಷಣ ಅತಿ ಮುಖ್ಯವಾಗಿದ್ದು ಮನುಷ್ಯನ ಬುದ್ಧಿಶಕ್ತಿ ವಿಕಾಸನಕ್ಕೆ ಶಿಕ್ಷಣವು ಮಹತ್ವದಾಗಿದ್ದು ಅದಕ್ಕೆ ಪೂರಕವಾಗಿ ಮನುಷ್ಯನ ದೇಹವು ಉತ್ತಮ ಆರೋಗ್ಯದಿಂದ
ಕೂಡಿರುವುದು ಸಹ ಮುಖ್ಯ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಕರೀಕೆರೆ ಮಜುರೆ ಬೈರಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಹಾಗೂ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಉದ್ಘಾಟನೆಗೊಂಡ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನು ಇಂದು ನಾನು ಕಾಯಿಲೆಗಳಿಗೆ ತುತ್ತಾಗುತ್ತಿದ್ದು ಅವನ ಆರೋಗ್ಯವು ಉತ್ತಮವಾಗಿಡಲು ಕುಡಿಯುವ ನೀರು ಸಹ ಅತಿ ಮುಖ್ಯವಾಗಿದೆ. ಅದರಂತೆ ಮೊದಲು ಬಾರಿ ಶಾಸಕನಾಗಿದ್ದಾಗ ಹಲವಾರು ಕಡೆ ಶುದ್ದ ನೀರಿನ ಘಟಕಗಳಿಗೆ ಚಾಲನೆ ಮಾಡಲಾಗಿತ್ತು ಅದರಂತೆ ತಾಲೂಕಿನಲ್ಲಿ ಸುಸಜ್ಜಿತವಾದಂತಹ ಸಾರ್ವಜನಿಕ ಆಸ್ಪತ್ರೆಯನ್ನು ಎಲ್ಲಾ ವ್ಯವಸ್ಥೆಗಳೊಂದಿಗೆ ಒದಗಿಸಲಾಗುತ್ತಿದೆ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು, ಅಷ್ಟೇ ಮುಖ್ಯವಾಗಿ ಮನುಷ್ಯನ ಪ್ರಗತಿಗೆ ಶಿಕ್ಷಣವು ಅತಿ ಮುಖ್ಯವಾಗಿದೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳ ಸದುಪಯೋಗವನ್ನು ರಾಜ್ಯದ ಎಲ್ಲಾ ಮಹಿಳೆಯರು ಉಪಯೋಗಿಸಿಕೊಂಡು ತಮ್ಮ ಸುಂದರವಾದ ಕುಟುಂಬಗಳನ್ನು ಸುಭದ್ರವಾಗಿಟ್ಟಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಕವಿಮಾತು ತಿಳಿಸಿದರು.
ಶ್ರೀ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ದಯಾಶೀಲಾವರು ಮಾತನಾಡಿ ಪೂಜ್ಯರ ಆಶೀರ್ವಾದದಿಂದ ತಾಲೂಕಿನಲ್ಲಿ ಉತ್ತಮವಾದ ಹಲವಾರು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಜನರು ಸ್ವಾವಲಂಬಿಯಾಗಿ ಹಾಗೂ ಸ್ತ್ರೀ ಶಕ್ತಿ ಸದಸ್ಯರ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಿ ಇರಬೇಕೆಂಬುದು ಆಶಯವಾಗಿದ್ದು ಅದರಂತೆ ತಾಲೂಕು ಘಟಕವು ಕೆಲಸ ನಿರ್ವಹಿಸುತ್ತಿದೆ, ಮಕ್ಕಳಿಗೆ ವಿದ್ಯಾರ್ಥಿವೇತನ, ಕೆರೆಗಳಲ್ಲಿ ಮಣ್ಣು ತೆಗೆಯುವುದು, ದೇವಾಸ್ಥಾನಗಳ ಜೀರ್ಣೋದ್ದಾರಕ್ಕೆ ಸಹಾಯ
ಹಸ್ತ, ನೊಂದವರಿಗೆ ಆಸರೆ, ವಯಸ್ಕರಿಗೆ ಸುರಕ್ಷಾಯೋಜನೆಗಳು ಸೇರಿದಂತೆ ಹಲವಾರು ಯೋಜನೆಗಳನ್ನು ಪೂಜ್ಯರ ಆರ್ಶಿವಾದದಿಂದ ನೇರವೇರುತ್ತಾ ಬರುತ್ತಿದೆ ಎಂದರು
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಉದಯಕುಮಾರ್, ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಚನ್ನಬಸವಯ್ಯ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಸದಸ್ಯರಾದ ರಮೇಶ್, ಮಾಜಿ ಗ್ರಾ ಪಂ ಸದಸ್ಯ ಅರುಣ್ ಕುಮಾರ್, ಉಮೇಶ್, ಓಂಕಾರ್ ಮೂರ್ತಿ, ಕರಿಕೆರೆ ಹಾಲು
ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ದಿನೇಶ್, ಲಿಂಗೇಗೌಡ, ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಹಾಜರಿದ್ದರು.