ನ್ಯೂಯಾರ್ಕ, ಸೆ.27:
ಭಾರತವು ಪಾಕಿಸ್ತಾಾನ ವಿರುದ್ಧ ನಡೆಸಿದ ’ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಬಗ್ಗೆೆ ಲಘುವಾಗಿ ಹೇಳಿಕೆ ನೀಡಿದ್ದ ಪಾಕಿಸ್ತಾಾನ ಪ್ರಧಾನಿ ಶಹಬಾಜ್ ಷರ್ೀ ಅವರಿಗೆ ಅದೇ ವೇದಿಕೆಯಲ್ಲಿ ಪ್ರತ್ಯುತ್ತರ ನೀಡಿದ ಭಾರತದ ರಾಜತಾಂತ್ರಿಿಕ ಅಧಿಕಾರಿ ಪೆಟಲ್ ಗೆಹ್ಲೋೋಟ್ ತಕ್ಕ ತಿರುಗೇಟು ನೀಡಿದ್ದಾರೆ.
ವಿಶ್ವಸಂಸ್ಥೆೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾಾನದ ಪ್ರಧಾನಿ ಶಹಬಾಜ್ ಷರ್ೀ ಅವರ ಭಾಷಣಕ್ಕೆೆ ಪ್ರತ್ಯುತ್ತರ ನೀಡುವ ಹಕ್ಕಿಿನ ಅಡಿಯಲ್ಲಿ ಭಾರತದ ಪರವಾಗಿ ಪ್ರತಿಕ್ರಿಿಯಿಸಿದ ಗೆಹ್ಲೋೋಟ್, ಪಾಕಿಸ್ತಾಾನ ಭಯೋತ್ಪಾಾದನೆ ವೈಭವೀಕರಿಸುತ್ತಿಿದೆ. ವಿಶ್ವವೇದಿಕೆಯಲ್ಲಿ ಸುಳ್ಳುಗಳನ್ನೇ ಹರಡುತ್ತಿಿದೆ ಎಂದು ಬಲವಾದ ತಿರುಗೇಟು ನೀಡಿದೆ.
ನಾನು ಪ್ರಧಾನಿ ಷರ್ೀ ಅವರ ಭಾಷಣ ಕೇಳಿದೆ. ಅವರು ಮತ್ತೊೊಮ್ಮೆೆ ತಮ್ಮ ವಿದೇಶಾಂಗ ನೀತಿಯ ಭಾಗವಾದ ಭಯೋತ್ಪಾಾದನೆಯನ್ನು ವೈಭವೀಕರಿಸಿದರು. ಆದರೆ ಯಾವುದೇ ಸುಳ್ಳು, ನಾಟಕಗಳು ಸತ್ಯ ಮರೆಮಾಚಲು ಸಾಧ್ಯವಿಲ್ಲ. ಏಪ್ರಿಿಲ್ 22ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಹತ್ಯಾಾಕಾಂಡಕ್ಕೆೆ ಕಾರಣವಾದ ಪಾಕಿಸ್ತಾಾನ ಪ್ರಾಾಯೋಜಿತ ಭಯೋತ್ಪಾಾದಕ ಸಂಘಟನೆ ರೆಸಿಸ್ಟೆೆನ್ಸ್ ್ರಂಟ್ ಅನ್ನು ಪಾಕಿಸ್ತಾಾನ ಸಮರ್ಥಿಸಿಕೊಂಡಿದೆ ಎಂದರು.
ಒಸಾಮಾ ಬಿಲ್ ಲಾಡೆನ್ಗೆೆ ವರ್ಷಗಳಿಂದ ಆಶ್ರಯ ನೀಡಿದ್ದ ಹಾಗೂ ಭಯೋತ್ಪಾಾದನೆ ವಿರುದ್ಧ ಹೋರಾಡುವಂತೆ ನಟಿಸಿದ ಅದೇ ಪಾಕಿಸ್ತಾಾನ ಇದಾಗಿದೆ. ಪಾಕ್ ದಶಕಗಳಿಂದ ಭಯೋತ್ಪಾಾದನಾ ಶಿಬಿರ ನಡೆಸುತ್ತಿಿದೆ ಎಂಬುದನ್ನು ಖುದ್ದು ಅಲ್ಲಿನ ಸಚಿವರೇ ಒಪ್ಪಿಿಕೊಂಡಿದ್ದಾರೆ ಎಂದು ಪಾಕ್ ಪ್ರಧಾನಿಗೆ ಮುಖಭಂಗ ಮಾಡಿದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಪರಾಕ್ರಮ ನೆನಪಿಸಿದ ಪೆಟಲ್ ಗೆಹ್ಲೋೋಟ್, ಸಂಘರ್ಷದಲ್ಲಿ ಪಾಕಿಸ್ತಾಾನ ಗೆಲುವು ಎಂದು ಹೇಳಿಕೊಳ್ಳುತ್ತಿಿದೆ. ವಾಸ್ತವವಾಗಿ ಅದೆಲ್ಲವೂ ಭಾರತದ ದಾಳಿಯಿಂದ ಧ್ವಂಸವಾದ ಅವರ ವಾಯುನೆಲೆಗಳು ಹಾಗೂ ಸುಟ್ಟುಹೋದ ಹ್ಯಾಾಂಗರ್, ಹಾನಿಗೊಳಗಾದ ರನ್ವೇಗಳ ಚಿತ್ರಗಳಾಗಿವೆ. ಇದು ಸಾರ್ವಜನಿಕವಾಗಿಯೂ ಲಭ್ಯವಿದೆ. ಇದನ್ನು ಗೆಲುವು ಅಂತ ಹೇಳಿಕೊಳ್ಳೋೋದಕ್ಕೆೆ ನಾಚಿಕೆ ಆಗೋದಿಲ್ಲವೇ ಎಂದು ಜಾಡಿಸಿದರು.
ಭಾರತದಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಭಯೋತ್ಪಾಾದಕ ದಾಳಿಗಳಿಗೆ ಪಾಕಿಸ್ತಾಾನ ಕಾರಣವಾಗಿದೆ. ಜೊತೆಗೆ ಭಾರತ ತನ್ನ ಜನರನ್ನು ರಕ್ಷಿಸಿಕೊಳ್ಳುವುದಕ್ಕೆೆ ಪ್ರತೀಕಾರದ ಕ್ರಮ ತೆಗೆದುಕೊಳ್ಳುತ್ತದೆ ಎಂಬುದೂ ಸತ್ಯ. ಇದರ ಹೊರತಾಗಿ ಭಾರತ ಮತ್ತು ಪಾಕಿಸ್ತಾಾನ ನಡುವಿನ ಎಲ್ಲ ಸಮಸ್ಯೆೆಗಳನ್ನ ದ್ವಿಿಪಕ್ಷೀಯ ಮಟ್ಟದಲ್ಲೇ ಪರಿಹರಿಸಲಾಗುವುದು. ಇದರಲ್ಲಿ 3ನೇ ವ್ಯಕ್ತಿಿಗೆ ಯಾವುದೇ ಅವಕಾಶವಿರುವುದಿಲ್ಲ ಎಂದು ಟ್ರಂಪ್ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಇದಕ್ಕೂ ಮೊದಲು ಮಾತನಾಡಿದ್ದ ಷರ್ೀ, ಭಾರತದಲ್ಲಿ ಬೆಳೆಯುತ್ತಿಿರುವ ಹಿಂದೂ ಮೂಲಭೂತವಾದವು ಇಡೀ ಜಗತ್ತಿಿಗೆ ದೊಡ್ಡ ಬೆದರಿಕೆ.ಜಗತ್ತಿಿನಲ್ಲಿ ಎಲ್ಲಿಯೂ ದ್ವೇಷಕ್ಕೆೆ ಸ್ಥಾಾನವಿರಬಾರದು. ಯಾರ ವಿರುದ್ಧವೂ ತಾರತಮ್ಯ ಮಾಡಬಾರದು, ಆದರೆ ಇದು ಭಾರತದಲ್ಲಿ ನಡೆಯುತ್ತಿಿದೆ. ಭಾರತದಲ್ಲಿ ಆಮೂಲಾಗ್ರ ಹಿಂದುತ್ವದ ಸಿದ್ಧಾಾಂತವು ವೇಗವಾಗಿ ಬೆಳೆಯುತ್ತಿಿದೆ, ಇದು ಜಗತ್ತಿಿಗೆ ದೊಡ್ಡ ಬೆದರಿಕೆಯನ್ನು ಒಡ್ಡುತ್ತಿಿದೆ ಎಂದು ಹೇಳಿದ್ದರು.
ಮೇ 7-10ರಿಂದ ನಡೆದ ಭಾರತ-ಪಾಕಿಸ್ತಾಾನ ಮಿಲಿಟರಿ ಸಂಘರ್ಷ ಉಲ್ಲೇಖಿಸಿ, ಶೆಹಬಾಜ್ ಷರ್ೀ ತಮ್ಮ ಬೆನ್ನು ತಾವೇ ತಟ್ಟಿಿಕೊಂಡು ಅಮೆರಿಕ ಪ್ರಧಾನಿ ಟ್ರಂಪ್ಗೆ ಧನ್ಯವಾದ ತಿಳಿಸಿ, ಪಾಕಿಸ್ತಾಾನ ಮತ್ತು ಭಾರತ ನಡುವೆ ಡೊನಾಲ್ಡ್ ಟ್ರಂಪ್ ಮಧ್ಯ ಪ್ರವೇಶಿಸದಿದ್ದರೆ ಯುದ್ಧದ ಪರಿಣಾಮಗಳು ಹಾನಿಕಾರಕವಾಗುತ್ತಿಿದ್ದವು ಎಂದು ಹೇಳಿಕೆ ನೀಡಿದ್ದರು.