ದಯಾಶಂಕರ ಮೈಲಿ ಮೈಸೂರು, ಡಿ.26:
ಕಾಂಗ್ರೆೆಸ್ ಇತಿಹಾಸವನ್ನು ಹಾಗೇ ತಿರುವಿ ಹಾಕಿದರೆ ಆ ಪಕ್ಷದ ಹೈಕಮಾಂಡ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಿಯನ್ನು ಚುನಾಯಿಸಿದ ನಿದರ್ಶನ ಕಾಣುವುದಿಲ್ಲ. ಲಕೋಟೆ (ಕವರ್) ಮೂಲಕ ಸಿಎಂ ಸ್ಥಾಾನದಲ್ಲಿ ಕುಳ್ಳಿಿರಿಸಿದ್ದು ಮತ್ತು ಏರ್ಪೋರ್ಟ್ನಿಂದಲೇ ತೆಗೆದಿದ್ದೇ ಹೆಚ್ಚು.
ಅದರೆ ಇವತ್ತು ಆ ಮಟ್ಟಿಿನ ಶಕ್ತಿಿ ಮತ್ತು ನಿರ್ಣಯ ಮಾಡುವ ತಾಕತ್ತನ್ನು ಹೈಕಮಾಂಡ್ ಹೊಂದಿದೆಯೇ? ಎಂಬ ಪ್ರಶ್ನೆೆಗೆ ರಾಜ್ಯದ ಮುಖ್ಯಮಂತ್ರಿಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಅನುಸರಿಸುತ್ತಿಿರುವ ವಿಳಂಬ ನೀತಿಯನ್ನು ಗಮನಿಸಿದರೆ ಇಲ್ಲವೆಂದೇ ರಾಜಕೀಯ ಪಡಸಾಲೆಯಲ್ಲಿ ಹೇಳಲಾಗುತ್ತಿಿದೆ.
ಇದನ್ನು ತಳ್ಳಿಿ ಹಾಕುವಂತಿಲ್ಲ. ಹಿಂದೆ ಎಂ. ವೀರಪ್ಪ ಮೊಯ್ಲಿಿ, ಸಾರೆಕೊಪ್ಪ ಬಂಗಾರಪ್ಪ ಅವರಂತಹ ನಾಯಕರನ್ನು ಲಕೋಟೆ (ಕವರ್) ಮೂಲಕ ಮುಖ್ಯಮಂತ್ರಿಿಯನ್ನಾಾಗಿ ಮಾಡಲಾಗಿತ್ತು. ವೀರೇಂದ್ರ ಪಾಟೀಲರನ್ನು ಸಿಎಂ ಸ್ಥಾಾನದಿಂದ ರಾಜೀವ್ಗಾಂಧಿ ಅವರು ಏರ್ಪೋರ್ಟ್ನಿಂದಲೇ ಇಳಿಸಿದ್ದರು.
ಈಗ ರಾಜ್ಯದಲ್ಲಿ ಮುಖ್ಯಮಂತ್ರಿಿ ಬದಲಾವಣೆ ಬಗ್ಗೆೆ ಒಪ್ಪಂದ ಆಗಿರುವ ಬಗ್ಗೆೆಯಾಗಲಿ, ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ತಳೆದಿರುವ ದಿವ್ಯ ಮೌನ ಪಕ್ಷದ ವರ್ಚಸ್ಸಿಿಗೆ ದಿನೇ ದಿನೆ ಧಕ್ಕೆೆ ಆಗುತ್ತಿಿದೆ ಎಂಬ ಅಸಮಾಧಾನ ಕಾಂಗ್ರೆೆಸ್ ಪಕ್ಷ ಕಾರ್ಯಕರ್ತರಿಗೇ ಅನಿಸಿ, ಅಸಮಾಧಾನವನ್ನು ವ್ಯಕ್ತಪಡಿಸುತ್ತಿಿದ್ದಾರೆ. ಇದು ಹೈಕಮಾಂಡ್ಗೆ ಗೊತ್ತಿಿರಲಾರದ ಸಂಗತಿಯೇನು ಅಲ್ಲ. ಇದೊಂದು ರೀತಿ ಹೈಕಮಾಂಡ್ ಪಕ್ಷದ ಅಭಿಮಾನಕ್ಕೆೆ ಭಂಗ ಎಂಬಂತಾಗಿದೆ.
ಹೈಕಮಾಂಡ್ಗೆ ಸಿಎಂ ಬದಲಾವಣೆ ವಿಚಾರದಲ್ಲಿ ಸೂಕ್ತ ನಿರ್ಣಯಕ್ಕೆೆ ಬರಲು ಸಾಧ್ಯವಾಗುತ್ತಿಿಲ್ಲ. ಇದೇ ವೇಳೆ ಪಕ್ಷದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸಣ್ಣ ಪುಟ್ಟ ವಿಚಾರಗಳಿಗೆ ಹೈಕಮಾಂಡ್ ಬಳಿ ಬರಬೇಡಿ ಎಂದು ಹೇಳಿರುವುದು ಕೂಡ ಅಸಮರ್ಥತೆಯ ಸಂಕೇತವೇ. ಇವರನ್ನು ಕೆಳಗಿಳಿಸಿದರೆ ಅಥವಾ ಅವರನ್ನು ಮೇಲೆರಿಸಿದರೆ ಪಕ್ಷಕ್ಕೆೆ ಯಾವ ಬಗೆಯ ತೊಂದರೆ ಮತ್ತು ಲಾಭ ಆಗುತ್ತದೆ ಎಂದು ಬೆಳಗಾನ ಲೆಕ್ಕಾಾಚಾರ ಹಾಕಿ ಕುಳಿತರೆ ಇನ್ನಷ್ಟು ಗೊಂದಲ ಹೆಚ್ಚಾಾಗಿ ಪಕ್ಷಕ್ಕೆೆ ಧಕ್ಕೆೆ ಆಗುತ್ತದೆ ಎಂಬುದರಲ್ಲಿ ದುಸರಾ ಮಾತೇ ಇಲ್ಲ ಎಂದು ಕೂಡ ಹೇಳಲಾಗುತ್ತಿಿದೆ.
ಹೋಗಲಿ, ಮೇಲ್ಮಟ್ಟದಲ್ಲಿ ಮುಖ್ಯಮಂತ್ರಿಿ ಸ್ಥಾಾನ ಹಂಚಿಕೆ ಬಗ್ಗೆೆ ಗೌಪ್ಯವಾಗಿ ಒಪ್ಪಂದ ಆಗಿದೆಯೇ, ಇಲ್ಲವೇ ಎಂಬ ಬಗ್ಗೆೆಯೂ ಹೈಕಮಾಂಡ್ ತುಟಿ ಪಿಟಿಕ್ ಎನ್ನುತ್ತಿಿಲ್ಲ.
ರಾಜ್ಯ ಸಿಎಂ ಬದಲಾವಣೆ ವಿಚಾರದ ಕೇಂದ್ರ ಬಿಂದುವಾಗಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ನಮ್ಮದೇನು ಇಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆೆ ಬದ್ಧ ಎಂದು ಹೇಳುತ್ತಿಿದ್ದಾರೆ. ಪಕ್ಷದ ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ ಅವರು, ಸಿಎಂ, ಡಿಸಿಎಂ ಇಬ್ಬರೇ ಕುಳಿತು ಉಂಟಾಗಿರುವ ಗೊಂದಲವನ್ನು ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.
’ರಾಜ್ಯದ ಸಿಎಂ, ಡಿಸಿಎಂ ಇರಲಿ, ರಾಜ್ಯ ಕಾಂಗ್ರೆೆಸ್ನ ಪ್ರಭಾವಿ ನಾಯಕರೆಲ್ಲರೂ ಈ ವಿಚಾರದಲ್ಲಿ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಮತ್ತು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆೆ ಎಲ್ಲರೂ ಬದ್ಧ ಎಂದು ಹೇಳುವ ಮೂಲಕ ಹೈಕಮಾಂಡ್ ಅನ್ನು ಅಖಂಡವಾಗಿ ಬೆಂಬಲಿಸಿದ್ದಾರೆ. ಅದರೂ ಈ ಮೌನವೇಕೆ?’ ಎಂಬುದು ಹೆಸರನ್ನು ಹೇಳಲೊಪ್ಪದ ಪ್ರಭಾವಿ ನಾಯಕರೊಬ್ಬರು ಪ್ರಶ್ನಿಿಸುತ್ತಾಾರೆ.
ಏತನ್ಮಧ್ಯೆೆ, ಎಐಸಿಸಿ ಅಧ್ಯಕ್ಷ ಖರ್ಗೆ ಅವರು, ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಸಿಎಂ ವಿಚಾರ ಜಿಲ್ಲಾ ಪಂಚಾಯ್ತಿಿ ಅಧ್ಯಕ್ಷರನ್ನು ಬದಲಾಯಿಸುವಷ್ಟು ಸಾಧಾರಣ ವಿಚಾರವಲ್ಲ. ಹೀಗೆ ಪಕ್ಷದ ರಾಷ್ಟ್ರಾಾಧ್ಯಕ್ಷರೇ ಹೇಳುವುದಾದರೆ ಹೈಕಮಾಂಡ್ ಅಂತ ಏಕೆ ಇರಬೇಕಿತ್ತು? ಎಂದು ಕೂಡ ಪ್ರಶ್ನಿಿಸಲಾಗುತ್ತಿಿದೆ.
ಈ ಗೊಂದಲದ ನಡುವೆ ಮೈಸೂರಿನಲ್ಲಿ ಅಹಿಂದ ಪರ ಸಂಘಟನೆಗಳು, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಿ ಸ್ಥಾಾನದಿಂದ ಇಳಿಸಲೇ ಬಾರದು ಎಂದು ಆಗ್ರಹಿಸಲು ಬರುವ ಜನವರಿಯಲ್ಲಿ ಬೃಹತ್ ಸಮಾವೇಶ ನಡೆಸಿ. ಆ ಮೂಲಕ ಹೈಕಮಾಂಡ್ಗೆ ಸಂದೇಶ ರವಾನಿಸಲು ಸಿದ್ಧತೆ ನಡೆಸಲಾಗುತ್ತಿಿದೆ.
ಹೀಗೆ ಹೈಕಮಾಂಡ್ ವಿಳಂಬ ಮಾಡಿದರೇ ನಾಯಕದ್ವಯರು ಸ್ಫೋೋಟಗೊಂಡು, ಪಕ್ಷ ಇಬ್ಬಾಾಗ ಆಗಬಹುದು ಎಂಬ ಮಾತುಗಳು ಕೇಳಿ ಬರುತ್ತಿಿವೆ. ಸಿಡುಕು, ದುಡಿಕಿನ ಡಿ.ಕೆ. ಶಿವಕುಮಾರ್ ಅವರು ವಿರೋಧ ಕಟ್ಟಿಿಕೊಂಡು ಅಧಿಕಾರ ನಡೆಸುವುದು ಕಷ್ಟ ಎಂದೇ ತಿಳಿದು ತಾಳ್ಮೆೆಗೆ ತಲೆಬಾಗಿದ್ದಾರೆ. ಹಾಗೆಯೇ ಹೈಕಮಾಂಡ್ ನಿರ್ಧಾರ ಶರಣು, ಶರಣು.. ಎಂದೇಳುತ್ತಿಿರುವ ಸಿದ್ದರಾಮಯ್ಯ ಅವರು ಒಂದು ವೇಳೆ ತಮ್ಮನ್ನು ಸಿಎಂ ಸ್ಥಾಾನದಿಂದ ಇಳಿಸಿದರೆ ಅವರ ಮುಂದಿನ ನಡೆ ಹೇಗಿರುತ್ತದೆ ? ಎಂಬುದು ನಿಗೂಢ, ನಿಗೂಢ.
ಏನೇ ಇರಲಿ. ಕರ್ನಾಟಕ ಕಾಂಗ್ರೆೆಸ್ನಲ್ಲಿ ನಾಯಕತ್ವ ಬದಲಾವಣೆ ಸಂಗತಿ ಸಾಧಾರಣ ಸಂಗತಿಯೂ ಅಲ್ಲ. ಹಾಗೆಯೇ ಕಾಂಗ್ರೆೆಸ್ಗಂತೂ ಸಂಭ್ರಮಿತ ಸಂಗತಿಯೂ ಅಲ್ಲ. ಈ ಗೊಂದಲವನ್ನು ತ್ವರಿತವಾಗಿ ನಿವಾರಿಸಲೇ ಬೇಕಾದ ತುರ್ತು ಕಾಂಗ್ರೆೆಸ್ ಹೈಕಮಾಂಡ್ಗೆ ಇದೆ. ಇಲ್ಲದಿದ್ದರೇ 2028 ರ ಚುನಾವಣೆ ಕಾಂಗ್ರೆೆಸ್ಗೆ ಕಬ್ಬಿಿಣ ಕಡಲೆ ಆಗಿ ಪರಿಣಮಿಸುತ್ತದೆ ಎಂಬುದನ್ನು ತಳ್ಳಿಿ ಹಾಕಲಾಗದು.

