ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ,ಜೂ.11: ನಗರದ ಕೆ.ಎಸ್.ಆರ್ ಟಿ.ಸಿ ಬಸ್ ನಿಲ್ದಾಣ ಆವರಣದಲ್ಲಿ ಕರ್ನಾಟಕ ರಾಜ್ಯದ್ಯಂತ ಮಹಿಳೆಯರಿಗೆ ನಗರ ಸಾರಿಗೆ,ಸಾಮಾನ್ಯ ಹಾಗೂ ವೇಗದೂತ, ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಎಂಬ ಶಕ್ತಿ ಯೋಜನೆಗೆ ಶಾಸಕ ಬಿ.ಎನ್ ರವಿಕುಮಾರ್ ರವರು ಚಾಲನೆ ನೀಡಲಾಯಿತು.
ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಬಿ. ಎನ್ ರವಿಕುಮಾರ್ ರವರು ದೀಪ ಬೆಳಗುವುದರ ಮೂಲಕ ಹಾಗೂ ಟೇಪ್ ಕತ್ತರಿಸುವ ಮೂಲಕ ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು.
ನಂತರ ಶಾಸಕ ಬಿ.ಎನ್ ರವಿಕುಮಾರ್ ಹಾಗೂ ನಗರಸಭೆ ಅಧ್ಯಕ್ಷರಾದ ಸುಮಿತ್ರ ರಮೇಶ್ ತಾಲ್ಲೂಕು ಮಟ್ಟದ ಅಧಿಕಾರಿಗಳು ಬಸ್ಸಿನಲ್ಲಿ ಕುಳಿತು ಪ್ರಯಾಣ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಎನ್ ರವಿಕುಮಾರ್ ರವರು ಇಡೀ ರಾಜ್ಯದಲ್ಲಿ ರಾಜ್ಯ ಸರ್ಕಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಏಕಕಾಲಕ್ಕೆ ಶಕ್ತಿ ಯೋಜನೆಯನ್ನು ಕಾರ್ಯಕ್ರಮವನ್ನು ಚಾಲನೆ ನೀಡುತ್ತಿದ್ದಾರೆ ಈ ಶಕ್ತಿ ಯೋಜನೆ ಕಾರ್ಯಕ್ರಮ ರಾಜ್ಯದಲ್ಲಿರುವಂತ ಎಲ್ಲಾ ಮಹಿಳೆಯರಿಗೂ ಮತ್ತು ನಮ್ಮ ವಿದ್ಯಾರ್ಥಿ ನಿಯರಿಗೂ ಎಲ್ಲರಿಗೂ ಅನುಕೂಲ ವಾಗುವಂತಹ ಈ ಒಂದು ಕಾರ್ಯಕ್ರಮ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಎಲ್ಲಾ ಮತದಾರ ಬಂಧುಗಳ ಪರವಾಗಿ ನಾನು ಧನ್ಯವಾದವನ್ನು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸುಮಿತ್ರ ರಮೇಶ್,ತಹಶೀಲ್ದಾರ್ ಸ್ವಾಮಿ,ಇಓ ಮುನಿರಾಜು, ನಗರ ಸಭೆ ಪೌರಾಯುಕ್ತ ಶ್ರೀಕಾಂತ್,ಕೆ ಎಸ್ ಆರ್ ಟಿ ಸಿ ಶಿಡ್ಲಘಟ್ಟ ಘಟಕ ವ್ಯವಸ್ಥಾಪಕ ಬಿ. ಶ್ರೀನಾಥ್,ನಗರಸಭೆ ಸದಸ್ಯ ಅನಿಲ್ ಕುಮಾರ್,ಎನ್. ಕೃಷ್ಣಮೂರ್ತಿ,ರಘು (ಮಿಲ್ಟ್ರಿ ) ಜೆಡಿಎಸ್ ಮುಖಂಡರಾದ ಬಂಕ್ ಮುನಿಯಪ್ಪ,ಹುಜಗೂರು ರಾಮಣ್ಣ,ತಾದೂರು ರಘು, ಮೇಲೂರು ಕೆ.ಎಸ್ ಮಂಜುನಾಥ್,ಭಕ್ತರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್, ಕೆ ಎಸ್ ಆರ್ ಟಿ ಸಿ ಸಿಬ್ಬಂದಿ ವರ್ಗದವರು ಹಾಜರಿದ್ದರು.