ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.11: ರಾಜ್ಯ ಸರಕಾರ ಘೋಷಣೆ ಮಾಡಿದಂತೆ ಈಗ ಅನುಷ್ಠಾನಗೊಳಿಸುತ್ತಿದ್ದೇವೆ. ನಮ್ಮ ಮುಖ್ಯಮಂತ್ರಿಗಳು ಸಮರ್ಥ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಇಂದು ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ಮಾತನಾಡಿದರು. ಈ ಯೋಜನೆ ಪ್ರತಿಯೊಬ್ಬ ಮಹಿಳೆಯರು ತಲುಪಬೇಕು ಎಂದು ಉದ್ದೇಶದಿಂದ ನಮ್ಮ ಸರಕಾರ ಜಾರಿ ಮಾಡಿದೆ.ಸರಕಾರ ಬರುವ ಮುಂಚೆ ಐದು ಗ್ಯಾರಂಟಿಗಳನ್ನು ನೀಡಿದ್ದೆವು. ನಮ್ಮ ಸಮರ್ಥ ಮುಖ್ಯಮಂತ್ರಿಗಳಿಂದ ಈ ಯೋಜನೆ ಜಾರಿ ಮಾಡಿದ್ದಾರೆ ಎಂದರು.
11 ಕ್ಕೆ ಶಕ್ತಿ ಯೋಜನೆ, ಜುಲೈ 1 ಕ್ಕೆ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಗೃಹಲಕ್ಷ್ಮೀ ಯೋಜನೆಗೆ ಜೂನ್ 15 ರಿಂದ ಅರ್ಜಿ ಕರೆಯಲಾಗುತ್ತದೆ. ನಮ್ಮ ಸಿಎಂ ಅವರು 13 ಬಜೆಟ್ ಮಂಡಿಸಿದ್ದಾರೆ.ಪ್ರತಿಯೊಬ್ಬ ಬಡವರ ಜವಾಬ್ದಾರಿ ನಮ್ಮ ಸರಕಾರದ ಮೇಲೆ ಇದೆ. ನುಡಿದಂತೆ ನಡೆಯುತ್ತೇವೆ ಎಂದರು.
ಶಕ್ತಿ ಯೋಜನೆಯಿಂದ ಎಲ್ಲ ಕಡೆಯೂ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತದೆ.ಒಂದು ಒಳ್ಳೆಯ ಯೋಜನೆ ಜಾರಿ ಮಾಡುವಾಗ ಸಣ್ಣ ಪುಟ್ಟ ರೂಲ್ಸ್ ಮಾಡುವುದು ಸಹಜ.ನಾವು ನೀಡಿರುವ ಭರವಸೆಯನ್ನು ನೂರಕ್ಕೆ ನೂರರಷ್ಟು ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹಿಂದಿನ ಸರಕಾರದಲ್ಲಿ ರಸ್ತೆಗಳಿಗೆ ಅನುದಾನ ನೀಡಿಲ್ಲ. ಈಗ ನಮ್ಮ ಸರಕಾರದಲ್ಲಿ ರಸ್ತೆ ಅನುದಾನಕ್ಕೆ ಹೆಚ್ಚು ಒತ್ತು ಕೊಡಲಾಗುವುದು. ಜಿಲ್ಲೆಯಲ್ಲಿ ಎಲ್ಲಾ ಗ್ರಾಮಗಳಿಗೂ ಬಸ್ ಸೇವೆ ನೀಡಬೇಕೆಂದು ಅಧಿಕಾರಿಗಳಿಗೆ ಹೇಳಿದರು.
ಇದೇ ವೇಳೆ ಸಚಿವರು ಸಾಂಕೇತಿಕವಾಗಿ ಎರಡು ಬಸ್ ಗಳಿಗೆ ಚಾಲನೆ ನೀಡಿದ್ದು ತಾವೇ ಟಿಕೆಟ್ ನೀಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಿವಲೀಲಾ ಭೂಮಕ್ಕನವರ. ಉಪಾಧ್ಯಕ್ಷೆ ಆಯಿಷಾ ಬಾನು. ಜಿಲ್ಲಾಧಿಕಾರಿ ಸುಂದರೇಶ ಬಾಬು. ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತ್ನಂ ಪಾಂಡೆಯಾ. ಕೆಕೆಆರ್ಟಿಸಿ ವಿಭಾಗೀಯ ನಿಯಂತ್ರಕ ಜಿ ವೆಂಕಟೇಶ ಸೇರಿ ಹಲವರು ಇದ್ದರು.