ಸುದ್ದಿಮೂಲವಾರ್ತೆ
ಕೊಪ್ಪಳ ನ 21: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಿಗಾಗಿ ಇರುವ ಕಾರ್ ನ್ನು ದಿನಾಂಕ 20 ರಂದು ನನ್ನ ಮನೆಯ ಮುಂದೆ ಇರುವ ಇನ್ನೊವ್ ಕಾರ್ ಕಳ್ಳತನವಾಗಿದೆ ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಬುಲಿಂಗನಗೌಡ ಪಾಟೀಲ ಹೇಳಿದರು.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಐದು ವರ್ಷಕ್ಕೆ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಆದರೆ ಚಂದ್ರಶೇಖರ ನುಗ್ಗಲಿ ಎಂಬುವವರು ಬೆಂಗಳೂರು ಸಂಘದ ಕಚೇರಿಯಲ್ಲಿ ಬೌನ್ಸರ್ ಕರೆದುಕೊಂಡು ಬಂದು ನನ್ನ ಒಳಗೆ ಬರದಂತೆ ತಡೆದಿದ್ದಾರೆ. ನಾನು ಶಿಕ್ಷಕರಿಗೆ ಗೊಂದಲವಾಗಬಾರದು ಎಂಬ ಕಾರಣಕ್ಕೆ ಸುಮ್ಮನೆ ಇದ್ದು. ನ್ಯಾಯಲಯದ ಹೋರಾಟ ಮಾಡುತ್ತಿದ್ದೇನೆ ಎಂದರು.
ನನ್ನ ಮನೆಯ ಮುಂದೆ ಇರುವ ಕಾರನ್ನು ಕಳ್ಳತನ ಮಾಡಲಾಗಿದೆ. ಈ ಕಾರಿಗೆ ಲಾಗ್ ಬುಕ್ ಹಸ್ತಾಂತರದ ದಾಖಲೆಗಳಿಲ್ಲ. ನನ್ನ ಚಾವಿ ನನ್ನ ಕಡೆ ಇದೆ. ಇನ್ನೊಂದು ಚಾವಿಯು ಸಂಘದಲ್ಲಿದೆ. ಚಾವಿಯು ಇದ್ದರು ಕಳ್ಳತನವಾಗಿದ್ದು ಈಗ ಭಯವಾಗಿದೆ. ನಿವೃತ್ತ ಅಂಚಿನಲ್ಲಿದ್ದೇನೆ. ಈಗ ಕಾರ್ ಕಳೆದಿರುವುದು ಅದನ್ನು ಹುಡುಕಿಕೊಡಿ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಹುಡುಕಿ ಕೊಡಿ ಎಂದು ಮನವಿ ಮಾಡಿಕೊಂಡರು.
ಸರಕಾರವು ನೌಕರರು ಹಾಗು ಶಿಕ್ಷಕರ ಸಂಘದ ಬಗ್ಗೆ ಏನು ಮಾಡುತ್ತಿದೆ ಎಂಬ ಅನುಮಾನ ಬರುತ್ತಿದೆ.
ನಕಲಿ ದಾಖಲೆಗಳನ್ನು ಸೃಷ್ಢಿಸಿ ಬ್ಯಾಂಕ ಹಾಗು ಇತರ ಕಡೆ ನನ್ನ ಹೆಸರನ್ನು ಬದಲಾಯಿಸಿದ್ದಾರೆ. ಚಂದ್ರಶೇಖರ ನುಗ್ಗಲಿಯು ಸಂಘವನ್ನು ಕಪಿ ಮುಷ್ಠಿಯಲ್ಲಿದ್ದಾರೆ ಎಂದು ಆರೋಪಿಸಿದರು.
ಮನೆಯ ಮುಂದೆ ಇರುವ ಕಾರ್ ನ್ನು ತೆಗೆದುಕೊಂಡು ಹೋಗುವವರು ಮುಂದೆ ನನ್ನ ಅಪಘಾತ ಮಾಡಿ ಸಾಯಿಸಬಹುದು. ನನಗೆ ಜೀವಭಯವಿದೆ. ಕೊಪ್ಪಳ ಸೇರಿದಂತೆ ಕೆಲವರ ನನ್ನ ಪರವಿಲ್ಲ ಎಂದರು.
ಈ ಸಂದರ್ಭದಲ್ಲಿ ಶರಣಬಸನಗೌಡ ಹಲಗೇರಿ. ಕೊಟ್ರಪ್ಪ ಗಡಗಿ, ಮಂಜುನಾಥ ಅಸೂಟಿ ಹಾಗು ಬಸವರಾಜ ಕೊಮಲಾಪುರ ಇದ್ದರು