ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.20
ಸ್ವಾಾತಂತ್ರ್ಯ ಪೂರ್ವ ನಿಜಾಮನ ಆಳ್ವಿಿಕೆಯಲ್ಲಿದ್ದ ಕಲ್ಯಾಾಣ ಕರ್ನಾಟಕ ಪ್ರದೇಶದಲ್ಲಿ ಉರ್ದು ಪ್ರಭಾವ ನಡುವೆಯೂ ಕನ್ನಡವನ್ನು ಕಟ್ಟಿಿ ಬೆಳೆಸಿದ ಶ್ರೇೇಯಸ್ಸು ಗಜಲ್ ಕವಿ ಶಾಂತರಸ ಹೆಂಬೆರಾಳು ಅವರಿಗೆ ಸಲ್ಲುತ್ತದೆ ಎಂದು ಕಥೆಗಾರ ಅಮರೇಶ ನುಗಡೋಣಿ ಅಭಿಪ್ರಾಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಾನಿಲಯದ ಕನ್ನಡ ಅಧ್ಯಯನ ಸಂಸ್ಥೆೆ ಮತ್ತು ಬೆಂಗಳೂರಿನ ಡಾ. ಬೆಸಗರಹಳ್ಳಿಿ ರಾಮಣ್ಣ ಪ್ರತಿಷ್ಠಾಾನದ ಸಂಯುಕ್ತಾಾಶ್ರಯದಲ್ಲಿ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ ಶಾಂತರಸರ ಸಾಹಿತ್ಯ ಲೋಕ ಕುರಿತು ಒಂದು ದಿನದ ಸಾಹಿತ್ಯ ಕಾರ್ಯಾಗಾರ ಉದ್ಘಾಾಟಿಸಿ ಅವರು ಮಾತನಾಡಿದರು.
ಕವಿ ಶಾಂತರಸ ಹೆಂಬೆರಳು ಅವರು ಬಡತನದಲ್ಲಿ ಹುಟ್ಟಿಿದರೂ ಜಂಗಮ ಸಮುದಾಯಕ್ಕೆೆ ಸೇರಿದ್ದರಿಂದ ಪರಂಪರಾಗತ ಜ್ಞಾನವುಳ್ಳವರಾಗಿದ್ದರು. ಕನ್ನಡದ ಲಿಪಿ ಇದ್ದರೂ ಮೋಡಿ ಬರವಣಿಗೆಯ ಆ ಕಾಲದಲ್ಲಿ ರಾಯಚೂರಿನಲ್ಲಿ ಸತ್ಯ ಸ್ನೇಹಿ ಪ್ರಕಾಶನ ತೆರೆದು ಅನೇಕ ಲೇಖಕರಿಗೆ ಪ್ರೋೋತ್ಸಾಾಹ ನೀಡಿದ್ದರು. ಉರ್ದುವಿನಿಂದ ಕನ್ನಡಕ್ಕೆೆ ಅನುವಾದ ಮಾಡುವ ಮೂಲಕ ಕನ್ನಡ ಪಸರನ್ನು ಹೆಚ್ಚಿಿಸುವ ಕೆಲಸ ಮಾಡಿದ್ದರು ಎಂದರು.
ಪ್ರಾಾಂತ್ಯಕ್ಕೆೆ ಅನ್ಯಾಾಯವಾದಾಗ, ಸಲ್ಲದ ವಿಚಾರವನ್ನು ನೇರವಾಗಿ ಪ್ರತಿಭಟಿಸುತ್ತಿಿದ್ದ ಬಂಡಾಯ ಗುಣ ಅವರಲ್ಲಿ ಕಾಣಬಹುದು. ಬಸವಣ್ಣನವರ ವಚನಗಳಿಂದ ಪ್ರಭಾವಿತರಾಗಿದ್ದ ಗಜಲ್ ಕವಿ ಶಾಂತರಸರು ಜಾತ್ಯತೀತ ಮನೋಭಾವನೆ ಉಳ್ಳವರಾಗಿದ್ದರು. ಸಾಹಿತ್ಯ ಲೋಕದ ಸಾಕ್ಷಿ ಪ್ರಜ್ಞೆಯಾಗಿರುವ ಶಾಂತರಸರು ದಕ್ಷಿಣದ ಬಹುತೇಕರಿಗೆ ಅಪರಿಚಿತರಾಗಿದ್ದಾರೆ. ಹೀಗಾಗಿ ಇವರನ್ನು ದಕ್ಷಿಣದ ಕಡೆ ನಾವು ಹೆಚ್ಚು ತೆಗೆದುಕೊಂಡು ಹೋಗಬೇಕಿದೆ ಎಂದು ಅಮರೇಶ ನುಗಡೋಣಿ ಅವರು ಅಭಿಪ್ರಾಾಯಪಟ್ಟರು.
ಗುವಿವಿ ಕನ್ನಡ ಅಧ್ಯಯನ ಸಂಸ್ಥೆೆಯ ನಿರ್ದೇಶಕ ಪ್ರೊೊ. ಎಚ್.ಟಿ. ಪೋತೆ ಮಾತನಾಡಿದರು. ಡಾ.ಬೆಸಗರಹಳ್ಳಿಿ ರಾಮಣ್ಣ ಪ್ರತಿಷ್ಠಾಾನದ ಅಧ್ಯಕ್ಷರಾಗಿರುವ ಹೆಚ್.ಆರ್. ಸುಜಾತಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಎಚ್. ಎಸ್. ಬಸವಪ್ರಭು, ಪ್ರತಿಷ್ಠಾಾನದ ಕಾರ್ಯದರ್ಶಿ ರಾಜೇಂದ್ರ ಪ್ರಸಾದ ಇದ್ದರು.
ಕಾರ್ಯಾಗಾರ ಅಂಗವಾಗಿ ನಡೆದ ಮೊದಲನೇ ಗೋಷ್ಠಿಿಯಲ್ಲಿ ಸಂಶೋಧನೆ ಮತ್ತು ಗ್ರಂಥ ಸಂಪಾದನೆ ಕುರಿತು ಹೊಸಪೇಟೆಯ ಸಂಶೋಧಕ ಕೆ. ರವೀಂದ್ರನಾಥ, ಗದ್ಯ ಸಾಹಿತ್ಯ ಕುರಿತು ವಿಮರ್ಶಕ ಶ್ರೀಶೈಲ್ ನಾಗರಾಳ ಪ್ರಬಂಧ ಮಂಡಿಸಿದರು. ಎರಡನೇ ಗೋಷ್ಠಿಿಯಲ್ಲಿ ಸಾಹಿತ್ಯದಲ್ಲಿ ಸೀಲೋಕ ಬಗ್ಗೆೆ ವಿಮರ್ಶಕಿ ಶೈಲಜಾ ಬಾಗೇವಾಡಿ, ಕಾವ್ಯಲೋಕದ ಕುರಿತು ರಾಯಚೂರಿನ ಕಥೆಗಾರ ಮಹಾಂತೇಶ ನವಲಕಲ್ ಹಾಗೂ ಅನುವಾದ ಸಾಹಿತ್ಯ ಕುರಿತು ಅನುವಾದಕ ಸೂರ್ಯಕಾಂತ ಸುಜ್ಯಾಾತ ಮಾತನಾಡಿದರು.
ಶಾಂತರಸರ ಸಾಹಿತ್ಯ ಲೋಕ ಕಾರ್ಯಾಗಾರ ಉರ್ದು ಪ್ರಭಾವದ ನಡುವೆ ಕನ್ನಡ ಕಟ್ಟಿಿದ ಗಜಲ್ ಕವಿ ಶಾಂತರಸರು-ಅಮರೇಶ ನುಗಡೋಣಿ

