ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.16:
ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಿಂಧನೂರು ತಾಲೂಕಾ ಘಟಕಕ್ಕೆೆ ನಡೆದ ಚುನಾವಣೆಯಲ್ಲಿ ಡಿ.ಹೆಚ್.ಕಂಬಳಿ ಬೆಂಬಲಿತ ಬಣದ ಅಧ್ಯಕ್ಷರಾಗಿ ಶರಣಪ್ಪ ಗೋನಾಳ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಮರೇಶ ಅಲಬನೂರು ಆಯ್ಕೆೆಯಾಗಿದ್ದಾಾರೆ.
ಮಂಗಳವಾರ ನಗರದ ಪತ್ರಿಿಕಾ ಭವನದಲ್ಲಿ ಜಿಲ್ಲಾಾಧ್ಯಕ್ಷ ಆರ್.ಗುರುನಾಥ ಅವರ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಿಯೆ ನಡೆಯಿತು. ಅಧ್ಯಕ್ಷ ಸ್ಥಾಾನಕ್ಕೆೆ ಹಾಗೂ 7 ಕಾರ್ಯಕಾರಿ ಮಂಡಳಿ ಸ್ಥಾಾನಕ್ಕೆೆ ಮಾತ್ರ ಮತದಾನ ನಡೆಯಿತು. ಅಧ್ಯಕ್ಷ ಸ್ಥಾಾನಕ್ಕೆೆ ಶರಣಪ್ಪ ಗೋನಾಳ ಹಾಗೂ ಮಹ್ಮದ್ ಮುಸ್ತಾ ಸ್ಪರ್ಧಿಸಿದ್ದರು. 24 ಜನ ಸದಸ್ಯ ಬಲದ ಸಂಘಕ್ಕೆೆ 23 ಜನ ಮತದಾನ ಚಲಾಯಿಸಿದರು. ಶರಣಪ್ಪ ಗೋನಾಳ 12 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಮಹ್ಮದ್ ಮುಸ್ತಾ 10 ಮತಗಳನ್ನು ಪಡೆದು ಸೋಲು ಕಂಡರು. ಅದರಲ್ಲಿ ಒಂದು ಮತ ತಿರಸ್ಕೃತಗೊಂಡಿತು.
ಇನ್ನೂ ಪ್ರಧಾನ ಕಾರ್ಯದರ್ಶಿಯಾಗಿ ಅಮರೇಶ ಅಲಬನೂರು, ಉಪಾಧ್ಯಕ್ಷರಾಗಿ ಯಮನಪ್ಪ ಪವಾರ್, ದುರುಗೇಶ, ಖಜಾಂಚಿಯಾಗಿ ಚಂದ್ರಶೇಖರ ಬೆನ್ನೂರು, ಕಾರ್ಯದರ್ಶಿಯಾಗಿ ರಾಘವೇಂದ್ರ ಅವಿರೋಧವಾಗಿ ಆಯ್ಕೆೆಯಾದರು. ಇನ್ನೂ ಕಾರ್ಯಕಾರಿ ಸಮಿತಿ 7 ಸ್ಥಾಾನಕ್ಕೆೆ 13 ಜನ ಸ್ಪರ್ಧಿಸಿದ್ದರು. ಡಿ.ಹೆಚ್.ಕಂಬಳಿ, ಪ್ರಹ್ಲಾಾದ್ ಗುಡಿ, ಚನ್ನಬಸವ, ವೀರೇಶ ಗಡ್ಡಿಿಮ್ಯಾಾಳ ತಲಾ 14 ಮತಗಳನ್ನು ಪಡೆದರು. ಎಂ.ಡಿ.ಮುಸ್ತಾ ತುರ್ವಿಹಾಳ 19, ನವಾಬ್ ಷರ್ೀ 15, ಬಿ.ಶಾಮಕುಮಾರ 12 ಮತಗಳನ್ನು ಪಡೆದು ಜಯಶಾಲಿಗಳಾದರು. ಶಿವರಾಜ ಕೆ(7), ಖಾಸೀಮ್ ಸಾಬ್(8), ವೀರೇಶ ಹೊಸಳ್ಳಿಿ(7), ಲಚಮಪ್ಪ(7), ಪಂಪಾಪತಿ ಹೂವಿನಬಾವಿ(7), ಕನಕರಾಯ ಆನೆಗುಂದಿ(8) ಸೋಲು ಕಂಡರು ಎಂದು ಜಿಲ್ಲಾಾಧ್ಯಕ್ಷ ಆರ್.ಗುರುನಾಥ ಘೋಷಣೆ ಮಾಡಿದರು.
ಜಿಲ್ಲಾಾ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಸ್ವಾಾಮಿ, ಉಪಾಧ್ಯಕ್ಷರಾದ ಅಶೋಕ ಬೆನ್ನೂರು, ಮಹಾನಂದ, ಖಜಾಂಚಿ ಮಲ್ಲಿಕಾರ್ಜುನ ಸ್ವಾಾಮಿ, ಕಾರ್ಯದರ್ಶಿ ಬಸವರಾಜ ಭೋಗಾವತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದ್ರಶೇಖರ ಯರದಿಹಾಳ, ಲಕ್ಷ್ಮಣ ಕಪಗಲ್, ಲಕ್ಷ್ಮೀಕಾಂತ ಜೈನ್ ಭಾಗವಹಿಸಿ ಚುನಾವಣಾ ಪ್ರಕ್ರಿಿಯೆ ನಡೆಸಿಕೊಟ್ಟರು.
ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಅಧ್ಯಕ್ಷರಾಗಿ ಶರಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಅಮರೇಶ ಅಲಬನೂರು ಆಯ್ಕೆ

