ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.14
ಶರಣಬಸವೇಶ್ವರ ಸಂಸ್ಥಾಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಾಜಿ ಅವರು ಶಿಕ್ಷಣ ಮತ್ತು ಸಾಮಾಜಿಕ ಕಾರ್ಯ ಕ್ಷೇತ್ರಕ್ಕೆೆ ನೀಡಿದ ಕೊಡುಗೆ ಅಪಾರ ಎಂದು ಹಿರಿಯ ಕೃಷಿ ವಿಜ್ಞಾನಿ ಮತ್ತು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಾಲಯದ (ಯುಎಎಸ್) ಉಪಕುಲಪತಿ ಪ್ರೊೊ.ಪಿ.ಎಲ್. ಪಾಟೀಲ್ ಶ್ಲಾಾಘಿಸಿದರು.
ನಗರದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಾಜಿ ಅನುಭವ ಮಂಟಪದಲ್ಲಿ ನಡೆದ ಶರಣಬಸವ ವಿಶ್ವವಿದ್ಯಾಾಲಯದ 7ನೇ ಘಟಿಕೋತ್ಸವದಲ್ಲಿ ಮಾತನಾಡಿ, ಶರಣಬಸವ ವಿಶ್ವವಿದ್ಯಾಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಾಜಿ ಅವರು ತಮ್ಮ ಚಾಣಾಕ್ಷತೆ ಮತ್ತು ದೂರದೃಷ್ಟಿಿಯ ಚಿಂತನೆಯೊಂದಿಗೆ ಭವಿಷ್ಯದ ದೃಷ್ಟಿಿಕೋನ ಹಾಗೂ ಪ್ರಾಾಯೋಗಿಕ ನಿರ್ಧಾರಗಳ ಮೂಲಕ ಶರಣಬಸವ ವಿಶ್ವವಿದ್ಯಾಾಲಯವನ್ನು ಗಮ್ಯಸ್ಥಾಾನದತ್ತ ಮುನ್ನಡೆಸುತ್ತಿಿದ್ದಾರೆ ಎಂದರು.
ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ಪಡೆದ ಎಲ್ಲಾ ಪದವೀಧರರನ್ನು ಅಭಿನಂದಿಸಿದ ಡಾ.ಅವ್ವಾಾಜಿ, ತಮ್ಮ ವೃತ್ತಿಿಪರ ಮತ್ತು ಶೈಕ್ಷಣಿಕ ಜೀವನದಲ್ಲಿ ನಿಜವಾದ ಪ್ರಯಾಣವು ಈಗ ಪ್ರಾಾರಂಭವಾಗುತ್ತದೆ ಮತ್ತು ಎಲ್ಲರೂ ತಮ್ಮ ತಮ್ಮ ವೃತ್ತಿಿ ಮತ್ತು ಶೈಕ್ಷಣಿಕ ಜೀವನದಲ್ಲಿ ಅತ್ಯುತ್ತಮವಾದದ್ದನ್ನು ಸಾಧಿಸಲು ಶ್ರಮಿಸಬೇಕು ಹಾಗೂ ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ವಿದ್ಯಾಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಘಟಿಕೋತ್ಸವದಲ್ಲಿ ಶರಣಬಸವೇಶ್ವರ ಸಂಸ್ಥಾಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಹಾಗೂ ಶರಣಬಸವ ವಿಶ್ವವಿದ್ಯಾಾಲಯದ ಕುಲಾಧಿಪತಿ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಾಜಿ ಅವರು, ಪ್ರತಿಷ್ಠಿಿತ ಕೃಷಿ ಪಂಡಿತ ಪ್ರಶಸ್ತಿಿ ಪುರಸ್ಕೃತರು ಹಾಗೂ ಮುತ್ಯಾಾನ ಬಬಲಾದನ ಶ್ರೀ ಗುರು ಚೆನ್ನವೀರೇಶ್ವರ ವಿರಕ್ತಮಠದ ಪೀಠಾಧಿಪತಿ ಪೂಜ್ಯ ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು ಹಾಗೂ ಎಚ್ಕೆಇ ಸಂಸ್ಥೆೆಯ ಅಧ್ಯಕ್ಷ ಹಾಗೂ ಎಂಎಲ್ಸಿ ಶಶೀಲ ಜಿ. ನಮೋಶಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾಾನಿಸಿದರು. ಖಾಜಾ ಬಂದಾ ನವಾಜ್ ದರ್ಗಾದ ಸಜ್ಜದಾ ನಶೀನ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಅವರಿಗೆ ಗೈರು ಹಾಜರಿಯಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿಿ ಪ್ರದಾನ ಮಾಡಲಾಯಿತು.
ಇದೆ ಮೊದಲ ಬಾರಿಗೆ ವಿಶ್ವವಿದ್ಯಾಾಲಯವು ಪುರುಷ ಮತ್ತು ಮಹಿಳಾ ಪದವೀಧರರಲ್ಲಿ ವಿಶ್ವವಿದ್ಯಾಾಲಯದ ಅತಿ ಹೆಚ್ಚು ಅಂಕಗಳನ್ನು ಪಡೆದವರಿಗೆ ಎರಡು ನಗದು ಪ್ರಶಸ್ತಿಿಗಳು ಮತ್ತು ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಾಜಿ ಅವರ ಹೆಸರಿನಲ್ಲಿ ಸ್ಥಾಾಪಿಸಲಾದ ಚಿನ್ನದ ಪದಕವನ್ನು ನೀಡಿತು. ಎಂ.ಎಸ್ಸಿಿ ಗಣಿತದಲ್ಲಿ 9.95 ಸಿಜಿಪಿಎ ಅಂಕಗಳೊಂದಿಗೆ ಪ್ರಥಮ ಸ್ಥಾಾನ ಪಡೆದ ವಿದ್ಯಾಾರ್ಥಿನಿ ಕು.ಸಿಮ್ರಾಾ ನಿಶಾತ್ ಹಾಗೂ ಬಿ.ಟೆಕ್ ಮೆಕ್ಯಾಾನಿಕಲ್ನಲ್ಲಿ 9.76 ಸಿಜಿಪಿಎ ಅಂಕಗಳೊಂದಿಗೆ ಪ್ರಥಮ ಸ್ಥಾಾನ ಪಡೆದ ವಿದ್ಯಾಾರ್ಥಿ ರಾಹುಲ್ ಇವರಿಬ್ಬರಿಗೆ ತಲಾ 21,000 ರೂ. ನಗದು ಬಹುಮಾನ, ಚಿನ್ನದ ಪದಕ ಮತ್ತು ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. ಆಯಾ ಕೋರ್ಸ್ಗಳಲ್ಲಿ ರ್ಯಾಾಂಕ್ ಪಡೆದ 199 ಪ್ರತಿಭಾನ್ವಿಿತ ವಿದ್ಯಾಾರ್ಥಿಗಳಿಗೆ ಮತ್ತು ಚಿನ್ನದ ಪದಕಗಳನ್ನು ಪಡೆದ 45 ವಿದ್ಯಾಾರ್ಥಿಗಳಿಗೆ, ಚಿನ್ನದ ಪದಕ ಹಾಗೂ ಪ್ರಮಾಣಪತ್ರ ನೀಡಲಾಯಿತು.
ಅದೇ ರೀತಿ 21 ಅಭ್ಯರ್ಥಿಗಳಿಗೆ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಯಿತು.
ಘಟಿಕೋತ್ಸವದಲ್ಲಿ ಪ್ರೊೊ.ಚಂದ್ರಶೇಖರ್ ಎಸ್. ನರಕೆ, ವಿವಿಯ ಬಿಒಜಿ ಸದಸ್ಯೆೆ ಡಾ.ಉಮಾ ದೇಶಮುಖ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಎಚ್ಕೆಇ ಸೊಸೈಟಿಯ ಉಪಾಧ್ಯಕ್ಷ ಶ್ರೀ ರಾಜಾ ಭೀಮಳ್ಳಿಿ, ಡಾ. ಅಲ್ಲಮಪ್ರಭು ದೇಶಮುಖ, ವಿವಿ ಉಪಕುಲಪತಿ ಪ್ರೊೊ. ಅನಿಲಕುಮಾರ ಬಿಡವೆ, ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್, ವಿವಿಯ ನಿರ್ದೇಶಕ ಡಾ. ವಿ. ಡಿ. ಮೈತ್ರಿಿ, ಕುಲಸಚಿವ ಮೌಲ್ಯಮಾಪನ ಡಾ. ಎಸ್. ಎಚ್. ಹೊನ್ನಳ್ಳಿಿ, ಡೀನ್ ಡಾ. ಲಕ್ಷ್ಮಿಿ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಡಾ. ಕಿರಣ್ ಮಾಕಾ, ಶೈಕ್ಷಣಿಕ ಮಂಡಳಿ ಸದಸ್ಯರು ಮತ್ತು ಎಲ್ಲಾ ಅಧ್ಯಾಾಪಕ ಡೀನರು ಉಪಸ್ಥಿಿತರಿದ್ದರು.
ಶರಣಬಸವ ವಿವಿ ಘಟಿಕೋತ್ಸವ, ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಶಿಕ್ಷಣ, ಸಾಮಾಜಿಕ ಕ್ಷೇತ್ರಕ್ಕೆ ಡಾ.ಅಪ್ಪಾಾಜಿ ಕೊಡುಗೆ ಅಪಾರ : ಪ್ರೊ.ಪಾಟೀಲ್

