ಸುದ್ದಿಮೂಲ ವಾರ್ತೆ ಕಲಬುರಗಿ, ಜ.26:
ಶರಣಬಸವೇಶ್ವರ ವಿದ್ಯಾಾವರ್ಧಕ ಸಂಘ ನಡೆಸುವ ಶಿಕ್ಷಣ ಸಂಸ್ಥೆೆಗಳು ಸಮಾಜದ ಎಲ್ಲಾ ವರ್ಗಗಳಿಗೆ ಸಮಾನತೆ, ವಿಶೇಷವಾಗಿ ಎಲ್ಲಾ ವಲಯಗಳಲ್ಲಿ ಮಹಿಳೆಯರ ಸಬಲೀಕರಣಕ್ಕೆೆ ಒತ್ತು ನೀಡಿದೆ. ಭಾರತೀಯ ಸಂವಿಧಾನದ ಆಶಯಗಳನ್ನು ಈಡೇರಿಸಿವೆ ಎಂದು ಶರಣಬಸವೇಶ್ವರ ವಿದ್ಯಾಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಾಲಯದ ಕುಲಾಧಿಪತಿ ಮಾತೋಶ್ರೀ ಪೂಜ್ಯ ಡಾ.ದಾಕ್ಷಾಯಿಣಿ ಅವ್ವಾಾಜಿ ಹೇಳಿದರು.
ನಗರದ ಶರಣಬಸವೇಶ್ವರ ಶಿಕ್ಷಣ ಸಂಸ್ಥೆೆಗಳ ವಿಶಾಲವಾದ ಮೈದಾನದಲ್ಲಿ 77ನೇ ಗಣರಾಜ್ಯೋೋತ್ಸವ ದಿನಾಚರಣೆಯ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಂಸ್ಥಾಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಾಜಿ ಅವರು ರೂಪಿಸಿದ ಸಂಘದ ಶೈಕ್ಷಣಿಕ ತತ್ವವು ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಧ್ವನಿಸಿದ ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಮಹಿಳೆಯರ ಸಬಲೀಕರಣದ ತತ್ವಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿ.ದೊಡ್ಡಪ್ಪ ಅಪ್ಪಾಾಜಿ, ಕು. ಶಿವಾನಿ ಎಸ್. ಅಪ್ಪ, ಕು. ಮಹೇಶ್ವರಿ ಎಸ್. ಅಪ್ಪ,ಬಸವರಾಜ ದೇಶಮುಖ ಸೇರಿದಂತೆ ಸಂಸ್ಥೆೆ ವಿದ್ಯಾಾರ್ಥಿಗಳು ಇದ್ದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಸಂವಿಧಾನದ ಆಶಯ ಈಡೇರಿಸಿದೆ : ಡಾ.ಅವ್ವಾಜಿ

