ಸುದ್ದಿಮೂಲ ವಾರ್ತೆ ಮುದಗಲ್, ಡಿ.23:
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕೊರತೆ, ಕೊಠಡಿ, ಕುಡಿಯುವ ನೀರು, ಮೈದಾನ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳ ಸಮಸ್ಯೆೆಗಳನ್ನು ಬಗೆಹರಿಸಲು ಪ್ರಾಾಮಾಣಿಕವಾಗಿ ಶ್ರಮಿಸುವ ಜತೆಗೆ ಅಭಿವೃದ್ಧಿಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಾಪೂರು ಹೇಳಿದರು.
ಸಮೀಪದ ಆಮದಿಹಾಳ ಗ್ರಾಾಮದ ಸಹಿಪ್ರಾಾ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು 2025-2026 ನೇ ಸಾಲಿನ ಡಿ ಎಮ್ ಎ್ ಯೋಜನೆಯಡಿಯಲ್ಲಿ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ವ್ಯಾಾಪ್ತಿಿಯಲ್ಲಿ ಆಮದಿಹಾಳ ಗ್ರಾಾಮದ ಸಹಿಪ್ರಾಾ ಶಾಲಾ 1 ಕೊಠಡಿ ನಿರ್ಮಾಣ, ಬಯ್ಯಾಾಪೂರ ಗ್ರಾಾಮದ ಸಪ್ರೌೌ ಶಾಲಾ 1 ಕೊಠಡಿ ನಿರ್ಮಾಣ ಸಜ್ಜಲಗುಡ್ಡ ಗ್ರಾಾಮದ ಸಪ್ರೌೌ ಶಾಲಾ 1ಕೊಠಡಿ ನಿರ್ಮಾಣ, ಹಾಗೂ 2024-2025 ಸಾಲಿನಲ್ಲಿ ಸಜ್ಜಲಗುಡ್ಡ ಎರಡು ಹೈ ಮಾಸ್ಟ್ ದೀಪ ಅಳವಡಿಕೆ. ರಾಂಪೂರ ಗ್ರಾಾಮದ ಸಹಿಪ್ರಾಾ ಶಾಲಾ 1 ಕೊಠಡಿ ನಿರ್ಮಾಣ, ಹನುಮಗುಡ್ಡ ಗ್ರಾಾಮದ ಸಕಿಪ್ರಾಾ ಶಾಲಾ 1 ಕೊಠಡಿ ನಿರ್ಮಾಣ, ವ್ಯಾಾಕರನಾಳ ಗ್ರಾಾಮದ ಸಕಿಪ್ರಾಾ ಶಾಲಾ 1 ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿಿದೆ ಎಂದು ಹೇಳಿದರು.
ಲಿಂಗಸುಗೂರು ನಗರ ಯೋಜನ ಪ್ರಾಾಧಿಕಾರ ಅಧ್ಯಕ್ಷ ಬೂಪನಗೌಡ ಪಾಟೀಲ್ ಕರಡಕಲ್, ಡಿಜಿ ಗುರಿಕಾರ, ಗುಂಡಪ್ಪ ನಾಯಕ, ರಾಜು ಮಾಲಿ ಪಾಟೀಲ್, ಹನಮಂತಪ್ಪ ಕಂದಗಲ್ ಕ್ಷೇತ್ರಶಿಕ್ಷಣಾಧಿಕಾರಿ ಸುಜಾತಾ ಪಾಟೀಲ್ ಹುನೂರು , ಪುರಸಭೆ ಮಾಜಿ ಸದಸ್ಯ ಶ್ರೀಕಾಂತಗೌಡ, ಕೇಶವರೆಡ್ಡಿಿ ಯರದಿಹಾಳ, ರಾಘವೇಂದ್ರ ದೇಶಪಾಂಡೆ, ಜೋಷಪ್ ಇರ್ಲಾ, ಪ್ರಕಾಶ ಕುರಿ, ಜಗದೀಶ್ ಗೌಡ, ಗದ್ದೆಪ್ಪ ಚಲವಾದಿ, ಗ್ರಾಾಮ ಪಂಚಾಯತ್ ಅಧ್ಯಕ್ಷ ಜಗದೀಶ ಆಮದಿಹಾಳ ಹಾಗೂ ಲಕ್ಷ್ಮಿಿ ಉಪ್ಪಾಾರ್ ಹಾಗೂ ಮುಂತಾದವರು ಇದ್ದರು.
ಶಿಕ್ಷಣದ ಅಭಿವೃದ್ದಿಗೆ ಮೊದಲ ಆದ್ಯತೆ: ಶರಣಗೌಡ ಬಯ್ಯಾಪೂರು

