ಸುದ್ದಿಮೂಲ ವಾರ್ತೆ
ಹೊಸಕೋಟೆ, ಅ. 2 : ಸ್ವಾತಂತ್ರ್ಯ ನಂತರದ ಭಾರತದಲ್ಲಿ ಸಾಕ್ಷರತೆ ಸಾಧಿಸುವ ಕನಸು ಕಂಡಿದ್ದ ಗಾಂಧೀಜಿ ಅವರ ಕನಸು ಇಂದುಶೇ. 85ರಷ್ಟು ನನಸಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ ನಗರದ ತಾಲೂಕು ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಆವರು, ಗಾಂಧಿಜಿ ಅವರ ಅಹಿಂಸಾ ಮಾರ್ಗವನ್ನು ಪ್ರಪಂಚದ ಹಲವಾರು ದೇಶಗಳು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡು ಮುನ್ನೆಡೆಯುತ್ತಿದೆ.
ಸ್ವಾತಂತ್ರ ನಂತರದ ದಿನಗಳಲ್ಲಿ ದೇಶದ ಎರಡನೆ ಪ್ರಧಾನಿಯಾಗಿ ಲಾಲ್ ಬಹದ್ದೂರು ಶಾಸ್ತ್ರೀ ಅವರು ಹಸಿರು ಕ್ರಾಂತಿಯ ಹರಿಕಾರರಾಗಿ ದೇಶವನ್ನು ಮುನ್ನೆಡೆಸುವ ಜವಾಬ್ದಾರಿಹೊತ್ತ ನಾಯಕ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಎಂ.ವಿಜಯ್ ಕುಮಾರ್ ಮಾತನಾಡಿ, ಗಾಂಧೀಜಿರವರು ತಮ್ಮ ಜೀವನದಲ್ಲಿ ಶಾಂತಿ ಅಹಿಂಸೆ ಹಾಗೂ ಸತ್ಯದ ಮಾರ್ಗ ಅನುಸರಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಗಾಂಧೀಜಿ ರವರು ಎಲ್ಲಾ ಜಾತಿ, ಧರ್ಮಗಳನ್ನು ಪ್ರೀತಿಸುತಿದ್ದು ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ದೇಶದ ಜನತೆಗೆ ಮಾದರಿ. ಇಂತಹ ಮಹಾನ್ ನಾಯಕರ ಆತ್ಮ ಚರಿತ್ರೆಯನ್ನು ಇಂದಿನ ಮಕ್ಕಳು ಓದುವ ಮೂಲಕ ಉತ್ತಮ ನಡವಳಿಕೆ, ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ. ಮುನಿಯಪ್ಪ, ನಗರಸಭೆ ಸದಸ್ಯ ಕೇಶವ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ಹರೀಶ್, ಹೊ.ರಾ ವೆಂಕಟೇಶ್, ನಾರಾಯಣಸ್ವಾಮಿ, ರಾಕೇಶ್, ಕೃಷ್ಣ ಮೂರ್ತಿ, ಲತಾ ರೆಡ್ಡಿ, ಹರೀಶ್ ಚಕ್ರವರ್ತಿ, ವಾಸುದೇವಯ್ಯ, ರವಿ ಮೊದಲಾದವರು ಹಾಜರಿದ್ದರು.