ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಏ.8: ತಾಲ್ಲೂಕಿನ ಚೀಮಂಗಲ,ಕನ್ನಮಂಗಲ ಮತ್ತು ಮಳಮಾಚನಹಳ್ಳಿ ಗ್ರಾಮದ 300ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತೊರೆದು ಬಿಜೆಪಿಯ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾದರು.
ಶಿಡ್ಲಘಟ್ಟದ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಸೀಕಲ್ ರಾಮಚಂದ್ರ ಗೌಡ, ಮಾಜಿ ಶಾಸಕ ಎಂ.ರಾಜಣ್ಣ ಮತ್ತು ಸೀಕಲ್ ಆನಂದ ಗೌಡರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಕನ್ನಮಂಗಲ ಕೇಶವ,ಕಲ್ಲೇಶ್, ರಾಮ, ಸತ್ಯ, ನಾರಾಯಣ ಸ್ವಾಮಿ, ಅರುಣ್, ನಾಗೇಶ್, ಪವನ್ ಮತ್ತು ಚೀಮಂಗಲ ಗ್ರಾಮದ ಮಹೇಶ್, ನಾಗರಾಜ್, ಸಂತೋಷ್ ಕುಮಾರ್, ಅರುಣ್, ನಾರಾಯಣಸ್ವಾಮಿ, ವೆಂಕಟೇಶಪ್ಪ ಮತ್ತು ಮಳಮಾಚನಹಳ್ಳಿ ಗ್ರಾಮದ ಮುಖಂಡರಾದ ರವಿ ಕುಮಾರ್ ಅವರು ಜೆಡಿಎಸ್ ಪಕ್ಷ ತೊರೆದು ಅವರ ಅಪಾರ ಕಾರ್ಯಕರ್ತರ ಜೊತೆ ಬಿಜೆಪಿಗೆ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಹರೀಕೆರೆ ಮುನಿರಾಜು, ಬಿಜೆಪಿ ಯುವಕರ ಪಕ್ಷ. ಯುವಪಡೆಯಿಂದ ಎಲ್ಲ ಕಡೆ ಶೇ 80 ಯುವಕರೇ ತುಂಬಿರುವ ಪಕ್ಷ. ಸಾಮಾನ್ಯ ಕಾರ್ಯಕರ್ತ ಕೂಡ ಉನ್ನತ ಹುದ್ದೆಗೇರಬಲ್ಲಂತಹ ಪಕ್ಷ. ಇಲ್ಲಿ ಎಲ್ಲರಿಗು ಸಮಾನ ಅವಕಾಶ ಇದೆ . ಗುಲಾಮಿ ಪದ್ಧತಿಯನ್ನು ಅನುಕರಿಸುವ ಪಕ್ಷವನ್ನು ಹೊಡೆದೋಡಿಸಿ, ನಮ್ಮ ಪರಂಪರೆಯನ್ನು ಸಾರುವ ಪಕ್ಷ ಅಧಿಕಾರಕ್ಕೆ ಬರಬೇಕು. ಚೀಮಂಗಲ ಬಿಜೆಪಿಯ ತವರೂರು ಅಂತ ಹೆಸರುವಾಸಿ ಆಗಿದೆ. ಅದನ್ನ ಇನ್ನು ಮುಂದೆಯೂ ಉಳಿಸಿಕೊಂಡು ಜೋಗುವ ಜವಾಬ್ದಾರಿ ನಮ್ಮ ಮೇಲಿದೆ. ವಿವೇಕಾನಂದರ ವಾಣಿಯಾದ ನೂರುಜನ ಯುವಕರನ್ನ ಕೊಡಿ, ಭಾರತಮಾತೆಯನ್ನು ಬಂಧ ಮುಕ್ತ ಮಾಡುತ್ತೇವೆ ಎಂದು. ಆ ಕಾಲ ಈಗ ಬಂದಿದೆ. ಸ್ವಾಭಿಮಾನಿಗಳಾಗಿ ಎಂದು ಎಲ್ಲರಿಗೂ ಕರೆ ನೀಡಿದರು.
ಮಾಜಿ ಶಾಸಕರಾದ ಎಂ ರಾಜಣ್ಣನವರು ಸ್ವಚ್ಛ ಭಾರತ್ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಅಯುಷ್ಮಾನ್ ಭಾರತ್ ಯೋಜನೆ ಮತ್ತು ಅವುಗಳ ಉಪಯೋಗವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಮಚಂದ್ರ ಗೌಡರವರು 1947ರಿಂದ ಒಂದೇ ಪಕ್ಷ ಅಧಿಕಾರ ನಡೆಸಿತ್ತು.ದೇಶದಲ್ಲಾದ ಅರಾಜಕಥೆಯಿಂದ ಬಿಜೆಪಿ ಗುಜರಾತ್ ನ ನರೇಂದ್ರ ಮೋದಿಯವರಂತಹ ನಾಯಕರನ್ನ ಆರಿಸಿ ಕಳುಹಿಸಿತು. ಅದರಿಂದ ದೇಶ ಪ್ರಗತಿಯತ್ತ ನಡೆಯುತ್ತಿದೆ. ಅದೇ ಕಾರಣಕ್ಕೆ ಮತ್ತೆ 5 ವರ್ಷ ಅವರೇ ಪ್ರಧಾನಿ ಆಗಿ ಆಯ್ಕೆ ಆಗಿದ್ದು. ಈ ಬಾರಿಯೂ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ನೀವೆಲ್ಲ ನಮ್ಮ ಪಕ್ಷಕ್ಕೆ ಮತ ಹಾಕಬೇಕೆಂದು ವಿನಂತಿಸಿದರು.