ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಮೇ 4: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರು ನಗರದ ವಾರ್ಡ್ ನಂ 1,2,3,4 ಮತ್ತು 5ರಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿ ಮನೆ ಮತ್ತು ವ್ಯಾಪಾರ ಮಳಿಗೆಗಳಿಗೆ ಭೇಟಿ ಕೊಟ್ಟು, ಪ್ರತಿಯೊಬ್ಬರನ್ನು ಮಾತನಾಡಿಸಿ ಬಿಜೆಪಿಗೆ ಮತ ನೀಡುವಂತೆ ವಿನಂತಿಸಿಕೊಂಡರು.
ಸೀಕಲ್ ರಾಮಚಂದ್ರಗೌಡರನ್ನು ಪ್ರತಿ ಮನೆ ಮನೆಯಲ್ಲೂ ಆರತಿ ಬೆಳಗಿ, ಹೂವಿನ ಹಾರ ಹಾಕಿ,ಹೂ ಮಳೆ ಗರೆದು ಸ್ವಾಗತಿಸಿದರು. ರಸ್ತೆಯ ಇಕ್ಕೆಲಗಳಲ್ಲೂ ಸಾವಿರಾರು ಕಾರ್ಯಕರ್ತರು ಬಿಜೆಪಿ ಪರವಾಗಿ ಮತ ಯಾಚನೆ ಮಾಡಿದರು. ಬಿಜೆಪಿ ಅಭಿವೃದ್ಧಿಯ ಕಾರ್ಯಗಳನ್ನು ತಿಳಿಸುವ ಮೂಲಕ ಚುನಾವಣಾ ಭರ್ಜರಿ ಮತಯಾಚನೆ.
ಸೀಕಲ್ ರಾಮಚಂದ್ರ ಗೌಡ ಅವರಿಗೆ ಮಾಜಿ ಶಾಸಕರಾದ ಎಂ. ರಾಜಣ್ಣ ಮತ್ತು ಡಾ.ಸತ್ಯನಾರಾಯಣ ಸಾಥ್ ನೀಡಿದರು.