ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಮಾ.31: ತಾಲ್ಲೂಕಿನ ಕಸಬಾ ಹೋಬಳಿಯ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಗೆ ಬರುವ ಚಿಕ್ಕದಾಸೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಸುಗ್ಗಲಮ್ಮದೇವಿ ದೇವಾಲಯ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಸುಗ್ಗಲಮ್ಮ ದೇವಾಲಯ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಕುಂಭಮೇಳ, ವಿಮಾನ ಗೋಪುರ, ಕಳಸಾ ಗೋಪುರ, ಹೋಮ ಹವನಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಬಿ.ಎನ್ ರವಿಕುಮಾರ್ ರವರು ಚಿಕ್ಕದಾಸೇನ ಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಶ್ರೀ ಶ್ರೀ ಸುಗ್ಗಲಮ್ಮ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮಾತನಾಡಿದ ನರಸಿಂಹ ಗೌಡರ ನಮ್ಮಗ್ರಾಮದಲ್ಲಿ 31 3.2023 ರಂದು ಪ್ರತಿಷ್ಠಾಪನ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಈ ನಮ್ಮ ಗ್ರಾಮ ದೇವತೆ ಚಿಕ್ಕದಾಸೇನಹಳ್ಳಿ, ಬಸನಾಫಾರ್ತಿ ಮತ್ತು ಮಾರಪ್ಪನಹಳ್ಳಿ ಈ ಮೂರು ಹಳ್ಳಿಗಳಿಗೆ ಗ್ರಾಮ ದೇವತೆಯಾಗಿರುತ್ತದೆ. ದೇವಾಲಯವು ಸುಮಾರು 300 ವರ್ಷಗಳ ಹಳೆಯ ದೇವಸ್ಥಾನವಾಗಿದ್ದು ಆಗಿನ ಕಾಲದಲ್ಲಿ ಮಣ್ಣಿನ ಕಟ್ಟಡದಲ್ಲಿ ನಿರ್ಮಿಸಲಾಗಿದ ದೇವಾಲಯವಾಗಿತ್ತು ಈಗ ನೂತನವಾಗಿ ನಮ್ಮ ಊರಿನ ಗ್ರಾಮಸ್ಥರು ದಾನಿಗಳು ಎಲ್ಲರ ಸಹಾ ಒಟ್ಟಿಗೆ ಸೇರಿ ಈಗ ನೂತನ ವಿನ್ಯಾಸದಲ್ಲಿ ಕಲ್ಲಿನ ಕಟ್ಟಡದಲ್ಲಿ ಶ್ರೀ ಶ್ರೀ ಶ್ರೀ ಸುಗಲ್ಲಮ್ಮ ದೇವಾಲಯ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಚಿಕ್ಕದಾಸೇನಹಳ್ಳಿ ಗ್ರಾಮಸ್ಥರು ಗ್ರಾಮದ ಯುವಕರು ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಾದಿಗಳು ಹಾಜರಿದ್ದರು.