ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.೦6:ಕಾರ್ಯ ನಿರತ ಪತ್ರಕರ್ತರಿಗೆ ಇದೇ ಮೊಟ್ಟ ಮೊದಲ ಬಾರಿಗೆ ಅಂಚೆ ಮತದಾನ ಮಾಡಲು ಅವಕಾಶ ನೀಡಿರುವ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ)ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಅಭಿನಂದನೆ ಸಲ್ಲಿಸಿದರು.
ಚುನಾವಣೆ ದಿನ ಕಾರ್ಯನಿರತರಾಗಿರುವ ಪತ್ರಕರ್ತರು ಯಾರು? ಎನ್ನುವುದನ್ನು ಆಯಾ ಮಾಧ್ಯಮ ಸಂಸ್ಥೆಗಳು ಧೃಢೀಕರಣ ಮಾಡಿ ಆಯಾ ಜಿಲ್ಲೆಯ ಚುನಾವಣಾಧಿಕಾರಿ ಮೂಲಕ ಒಪ್ಪಿಗೆ ಪಡೆದವರಿಗೆ ಅಂಚೆ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುವುದು. ಅವರಿಗೆ ಚುನಾವಣೆಗೆ ಬ್ಯಾಲೆಟ್ ಪೇಪರ್ ಸಿಗಲಿದೆ. ಅವರು ಮತಚಲಾವಣೆ ಮಾಡಲು ಚುನಾವಣೆಗೆ (ಮೂರು ದಿನ ಮೊದಲು) ಮುನ್ನ ಅವಕಾಶ ಮಾಡಿಕೊಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಮೀನಾ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪತ್ರಕರ್ತರ (ಅಗತ್ಯವಿದ್ದವರು ಮಾತ್ರ) ಅಂಚೆ ಮತದಾನ ಬಗ್ಗೆ ಆಯಾ ಜಿಲ್ಲೆಗೆ ಮಾಹಿತಿ ಕಳುಹಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.
ಪತ್ರಕರ್ತರ ಪರವಾಗಿ ಕೆಯುಡಬ್ಲ್ಯೂಜೆ ಸಲ್ಲಿಸಿದ ಮನವಿ ಪರಿಗಣಿಸಿ ಅಂಚೆ ಮತದಾನಕ್ಕೆ ಅವಕಾಶ ಮಾಡಿರುವುದು ಶ್ಲಾಘನೀಯ . ಮುಂದೆ ಆನ್ ಲೈನ್ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಮುಖ್ಯ ಚುನಾವಣಾಧಿಕಾರಿ ಅವರಲ್ಲಿ ಮನವಿ ಮಾಡಿದರು. ಆನ್ ಲೈನ್ ಮತದಾನಕ್ಕೆ ಸದ್ಯ ಇದಕ್ಕೆ ಅವಕಾಶವಿಲ್ಲ. ಈ ಬಗ್ಗೆ ಮುಂದೆ ಪರಿಶೀಲನೆ ಮಾಡುವುದಾಗಿ ಅವರು ತಿಳಿಸಿದರು.
ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅರಹತೋಳಲು ಗ್ರಾಮದಲ್ಲಿ ಭಾರತೀಯ ಜನತ ಪಕ್ಷದ 43 ನೇ ಸಂಸ್ಥಾಪನೆ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಾರತ ಮಾತೆ, ಶ್ಯಾಮ ಪ್ರಸಾದ್ ಮುಖರ್ಜಿ ಯವರ ಹಾಗೂ ಪಂಡಿತ್ ದೀನ ದಯಾಳ್ ಉಪಾಧ್ಯಾಯ ರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ, ಭಾರತೀಯ ಜನತ ಪಕ್ಷ ಬೆಳೆದು ಬಂದ ರೀತಿ ಬಗ್ಗೆ ಮಾತನಾಡಿದರು.
ಪಕ್ಷದ ವಿವಿಧ ಹಂತದ ನಾಯಕರು, ಮುಖಂಡರು, ಪ್ರಮುಖರು, ಕಾರ್ಯಕರ್ತರುಗಳು ಚುನಾಯಿತ ಪ್ರತಿನಿಧಿಗಳು, ಉಪಸ್ಥಿತರಿದ್ದರು.