ಸುದ್ದಿಮೂಲ ವಾರ್ತೆ ಲಿಂಗಸಗೂರು, ಡಿ.22:
ಪತ್ರಕರ್ತರ ವೃತ್ತಿಿ ಎಂದರೆ ಸಮಾಜ ಸೇವೆ ಮಾಡುವುದಾಗಿದ್ದು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪತ್ರಕರ್ತರು ಪ್ರಾಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಪತ್ರಿಿಕಾ ವರದಿಗಾರಿಕೆ ಅರ್ಥಿಕ ಸಬಲತೆ ಹೊಂದುವ ಉದ್ಯೋೋಗವಲ್ಲ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಶಿವರಾಜ ಕೆಂಬಾವಿ ಅಧಿಕಾರ ಸ್ವೀಕರಿಸಿ ತಿಳಿಸಿದರು.
ರವಿವಾರ ಪತ್ರಿಿಕಾ ಭವನದಲ್ಲಿ ಪತ್ರಕರ್ತರ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿ ಎಲ್ಲರ ಸಹಕಾರ ಹಾಗೂ ಸಲಹೆ ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಪತ್ರಿಿಕಾ ಭವನವನ್ನು ಮಾದರಿ ಭವನವಾಗಿಸಿ ಅಭಿವೃದ್ಧಿಿ ಪಡಿಸುವೆ ಎಂದರು. ತಾಲೂಕು ನೂತನವಾಗಿ ಕಾರ್ಯದರ್ಶಿ ರವಿ ಹೊಸಮನಿ, ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ನಾಗರಾಜ ಗೋರೆಬಾಳ, ಗೌತಮ ಕುಮಾರ, ಶಿವರಾಜ ಸುಂಕದ, ಕಿಶೋರ್ ಮುತಾಲಿಕ ಇವರ ಹೆಸರಗಳನ್ನು ಘೋಷಿಸಿದರು.
ನಿಕಟ ಪೂರ್ವ ಅಧ್ಯಕ್ಷ ಗುರುರಾಜ ಗೌಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಅಮರಯ್ಯ ಘಂಟಿ ಇವರುಗಳು ನೂತನ ಅಧ್ಯಕ್ಷ ಶಿವರಾಜ ಕೆಂಬಾವಿ ಹಾಗೂ ಪ್ರಧಾನ ಕಾರ್ಯದರ್ಶಿ ಗಂಗಾಧರ ನಾಯಕ ಅಧಿಕಾರ ಹಸ್ತಾಾಂತರಿಸಿ ಮಾತನಾಡಿದರು.
ರಾಯಚೂರು ಜಿಲ್ಲಾಾ ಪತ್ರಕರ್ತರ ಸಂಘದ ಕಾರ್ಯದರ್ಶಿ ರಾಘವೇಂದ್ರ ಗುಮಾಸ್ತೆೆ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಜಿಲ್ಲಾಾ ಉಪಾಧ್ಯಕ್ಷ ಶರಣಯ್ಯ ಒಡೆಯರ, ಕಾರ್ಯಕಾರಣಿ ಸಮಿತಿ ಸದಸ್ಯ ಬಲಭೀಮರಾವ್ ಹಟ್ಟಿಿ ಪತ್ರಕರ್ತರಾದ ಶರಣಪ್ಪ ಆನೆಹೊಸೂರ, ಖಾಜಾಹುಸೇನ, ಎನ್.ಬಸವರಾಜ, ರಾಘವೇಂದ್ರ ಭಜಂತ್ರಿಿ ಮಾತನಾಡಿದರು. ಗುರುರಾಜ ಮುತಾಲಿಕ ಪ್ರಾಾಸ್ತಾಾವಿಕ ಮಾತನಾಡಿದರು. ಸಿದ್ದನಗೌಡ ಪಾಟೀಲ, ಹನುಮಂತ ನಾಯಕ, ಖಜಾಂಚಿ ನಾಗರಾಜ ಮಸ್ಕಿಿ, ಘನಮಠದಯ್ಯ, ಲಕ್ಷ್ಮಣ ಬಾರಿಕರ್, ಶಶಿಧರ ಕಂಚಿಮಠ, ಅಮರೇಶ ಕಲ್ಲೂರ, ಸುನಿಲ್, ಅರುಣ್, ರಾಜೇಶ ಮಾಣಿಕ, ಹನುಮಂತ ಕನ್ನಾಾಳ, ರವಿ ಕಬ್ಬೇರ ಹಾಗೂ ಇತರರು ಭಾಗವಹಿಸಿದರು. ಪ್ರ.ಕಾರ್ಯದರ್ಶಿ ಗಂಗಾಧರ ನಾಯಕ ಸ್ವಾಾಗತಿಸಿದರು. ಗವಿಸಿದ್ದಪ್ಪ ನಿರೂಪಿಸಿದರು. ರೈತ ಸಂಘ ಸೇರಿದಂತೆ ಹವು ಸಂಘ ಸಂಸ್ಥೆೆಯವರು ತಾಲೂಕು ಅಧ್ಯಕ್ಷ ಶಿವರಾಜ ಕೆಂಬಾವಿ ಅವರಿಗೆ ಸನ್ಮಾಾನಿಸಿದರು.
ಪತ್ರಕರ್ತರ ವೃತ್ತಿಯಲ್ಲಿ ಪ್ರಾಮಾಣಿಕತೆ ಮುಖ್ಯ : ಶಿವರಾಜ ಕೆಂಬಾವಿ

