ಸುದ್ದಿಮೂಲವಾರ್ತೆ
ಕನಕಗಿರಿ,ಏ.೨- ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಆಡಳಿತ ವೈಫಲ್ಯ ಮತ್ತು ಸ್ಥಳೀಯ ಶಾಸಕರ ದುರಾಡಳಿತಕ್ಕೆ ಕನಕಗಿರಿ ವಿಧಾನ ಸಭಾ ಕ್ಷೇತ್ರದ ಜನರು ಮತ್ತು ಖುದ್ದು ಬಿಜೆಪಿಯಲ್ಲಿಯೇ ಅಪಸ್ವರ ಎದಿದ್ದು, ಈ ಪಕ್ಷದ ಅಪಾರ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗುತ್ತಿರುವುದರಿಂದ ಈ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭೀತಿ ಕಾಡುತ್ತಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಭಾನುವಾರ ತಾಲೂಕಿನ ಗೌರಿಪುರ ಮತ್ತು ಹುಲಿಹೈದರ್ ಗ್ರಾ.ಪಂ. ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ನಡೆಸಲಾದ ಕಾಂಗ್ರೆಸ್ ಮನ, ಮನೆ ತಲುಪೋಣ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಅನೇಕ ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕೆ ಸೇರ್ಪಡೆ ಮಾಡಿಕೊಂಡ ಸಂದರ್ಭದಲ್ಲಿ ಅವರು ಮಾತನಾಡಿದರು.
ಈಗಾಗಲೇ ಕ್ಷೇತ್ರದಾದ್ಯಂತ ಪ್ರತಿ ಹೋಬಳಿ ಮತ್ತು ಗ್ರಾಮ ಮಟ್ಟದ ಬಿಜೆಪಿ ಪಕ್ಷ ಅನೇಕ ಮುಖಂಡರು, ಅಪರ ಸಂಖ್ಯೆಯ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಲು ತಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಹಿಂದೆ ೧೦ ವರ್ಷಗಳ ಕಾಲ ನನ್ನೊಂದಿಗಿದ್ದು ಕಾರಣಾಂತರಗಳಿAದ ಬೇರೆ ಪಕ್ಷಕ್ಕೆ ಹೋದ ಅನೇಕರು ಪುನಃ ನನ್ನೊಂದಿಗರಲು ವಾಪಾಸ್ಸಾಗುತ್ತಿದ್ದಾರೆ. ಈ ಬೆಳವಣಿಗೆಯಿಂದ ಚುನಾವಣೆ ವೇಳೆಗೆ ಈ ಕ್ಷೇತ್ರದಲ್ಲಿ ಬಿಜೆಪಿ ಮನೆ ಖಾಲಿಯಾಗಲಿದೆ ಎಂದರು.
ಈಗಾಗಲೇ ಕ್ಷೇತ್ರದಾದ್ಯಂತ ಕಾಂಗ್ರೆಸ್ ಮನೆ, ಮನ ತಲುಪೋಣ ಕಾರ್ಯಕ್ರಮದೊಂದಿಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ಜನ, ರೈತ, ಕಾರ್ಮಿಕ, ಜನ ಸಾಮಾನ್ಯರ ವಿರುದ್ಧದ ನೀತಿಗಳು, ಯೋಜನೆಗಳ ಬಗ್ಗೆ ಮತ್ತು ಹಿಂದೆ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಅಧಿಕಾರವಧಿಯಲ್ಲಿನ ಸಧನೆಗಳು ಹಾಗೂ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾರಗೊಳಿಸುವ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗಿದೆ. ಜ್ಯೊತೆಗೆ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಲಾಗಿದೆ. ನಾವು ಹದ ಕಡೆಗಳಲ್ಲಿ ಕಿಕ್ಕಿರಿದು ಸೇರುವ ಜನಸಂಖ್ಯೆ ನೋಡಿದರೆ ಈ ಚುನಾವಣೆಯಲ್ಲಿ ನೂರರಷ್ಟು ಕಾಂಗ್ರೆಸ್ ಗೆಲ್ಲಿಸುವ ವಿಶ್ವಾಸ ಮೂಡಿದೆ ಎಂದರು.
ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಗಂಗಧರಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಜಿ.ಪಂ. ಮಾಜಿ ಸದಸ್ಯರಾದ ವೀರೇಶ ಸಮಗಂಡಿ, ಅಮರೇಶ ಗೋನಾಳ, ತಾ.ಪಂ. ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನಗೌಡ, ಬಸವಂತಗೌಡ ಪಾಟೀಲ್, ಮುಖಂಡರಾದ ಸಿದ್ಧಪ್ಪ ನೀರ್ಲೂಟಿ, ದೇವಪ್ಪ ತೋಳದ್, ಕನಕಗಿರಿ ಪಟ್ಟಣ ಪಂಚಾಯ್ತಿ ಅನೇಕ ಸದಸ್ಯರು, ಕಾರ್ಯಕರ್ತರಿದ್ದರು.