ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.23:
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ರಾತ್ರಿಿ ಶಿವಶರಣ ಹರಳಯ್ಯ ಎಂಬ ಸಾಮಾಜಿಕ ನಾಟಕವನ್ನು ಧಾತ್ರಿಿ ರಂಗಸಂಸ್ಥೆೆ ಕಲಾವಿದರು ಪ್ರದರ್ಶನ ಮಾಡಿದರು..
ನಾಟಕ ಕಾರ್ಯಕ್ರಮಕ್ಕೆೆ ಚಾಲನೆ ನೀಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಜಿ.ಮನೋಹರ ಮಾತನಾಡಿ, ನಿತ್ಯ ಮಾನಸಿಕ ಒತ್ತಡದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಮನರಂಜನೆಯ ಉದ್ದೇಶದಿಂದ ನಾಟಕ ಹಮ್ಮಿಿಕೊಳ್ಳಲಾಗಿದೆ. ಇದೇ ರೀತಿ ನಿರಂತರವಾಗಿ ಸರ್ಕಾರಿ ನೌಕರರ ಸಂಘ ಸಮಾಜಮುಖಿ ಕಾರ್ಯಕ್ರಮ ರೂಪಿಸುತ್ತದೆ ಎಂದರು.
ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ಶರ್ೀ ಮಾತನಾಡಿ, ರಂಗಭೂಮಿ ಕಲೆ ಉಳಿಸಿ ಬೆಳೆಸಬೇಕಾಗಿದೆ. ಶಿವಶರಣ ಹರಳಯ್ಯ ನಾಟಕ ನಮ್ಮೆೆಲ್ಲರ ಬದುಕಿಗೆ ಸ್ಪೂರ್ತಿ ನೀಡಿತು ಎಂದು ತಿಳಿಸಿದರು.
ಪ್ರೌೌಢಶಾಲೆ ಸಹಶಿಕ್ಷಕರ ಸಂಘದ ಅಧ್ಯಕ್ಷ ತೌಡೂರು ಗುರುಮೂರ್ತಿ ಮಾತನಾಡಿ, ವಚನಕಾರ ಹರಳಯ್ಯ ಕುರಿತು ಇತಿಹಾಸದಲ್ಲಿ ದಾಖಲಾಗಿದ್ದ ಕಥೆ ತೆರೆಯ ಮೇಲೆ ನೋಡಿ ಮೈ ಜುಮ್ಮೆೆನಿಸುತ್ತದೆ. ಅವರ ಶ್ರೇೇಷ್ಠ ಭಕ್ತಿಿ ಬಸವಣ್ಣನನ್ನು ಮೆಚ್ಚಿಿಸಿದ ಬಗೆ ಮಾದರಿಯಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಶಿವಶರಣ ಹರಳಯ್ಯ, ಬಿಜ್ಜಳ ಹಡಪದ ಅಪ್ಪಣ್ಣ ಪಾತ್ರಗಳಲ್ಲಿ ವಿಜಯ್ ಕುಮಾರ್ ಸಿರಿಗೇರಿ, ಶೀಲವಮಯ. ಕೊಂಡಿ ಮಂಚಣ್ಣ ಪಾತ್ರಧಾರಿ ವಾಸು ಕುಣಿಗಲ್, ಪಂಡಿತರಾಗಿ ಮಾದಿಹಳ್ಳಿಿ ಸುಮಂಗಲ, ಕಲ್ಯಾಾಣಮ್ಮಳಾಗಿ ರಾಯಚೂರು ಸುಮಿತ್ರಾಾ, ಬಸವೇಶ್ವರನಾಗಿ ಕುಣಿಗಲ್ ದರ್ಶನ್, ಶವಲಿಂಗಿಯಾಗಿ ಕಿರಣಕುಮಾರ, ಮಧುವರಸನ ಪಾತ್ರದಲ್ಲಿ ಆದಿಶೇಷ, ಅಲ್ಲಮ ಪ್ರಭುವಾಗಿ ಬಿ.ಜಿ.ಹನುಮಂತು, ನೀಲಾಂಬಿಕೆಯಾಗಿ ಬಳ್ಳಾಾರಿ ಶ್ರೀಲತಾ ಅವರು ಪಾತ್ರಗಳಿಗೆ ಜೀವತುಂಬಿ ಮನೋಜ್ಞ ವಾಗಿ ಅಭಿನಯಿಸಿದರು. ಬೆಳಕು ಮತ್ತು ಸಂಗೀತ ನಾಗರಾಜ ಸಿರಿಗೆರೆ ನಿರ್ವಹಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ್, ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಅಂಜಿನಪ್ಪ, ಕಾರ್ಯದರ್ಶಿ ಸೂರ್ಯನಾಯ್ಕ, ಗುರುನಾಥ, ಬಸವರಾಜ್, ಸಾವಿತ್ರಿಿ ಬಾಪುಲೆ ಸಂಘದ ಟಿ.ಎಚ್.ಎಂ.ಲತಾ, ಪಿ.ಸುಬ್ಬಣ್ಣ, ವೀರಪ್ಪ, ಎಲ್.ಎಚ್.ಗಿರೀಶ್, ಜಮಾಲುದ್ದೀನ್, ಕರಿಬಸಪ್ಪ, ಮಕಬುಲ್ ಬಾಷ ಇತರರಿದ್ದರು.
ನೌಕರರ ಭವನದಲ್ಲಿ ಶಿವಶರಣ ಹರಳಯ್ಯ ನಾಟಕ ಪ್ರದರ್ಶನ

