ಸುದ್ದಿಮೂಲ ವಾರ್ತೆ ರಾಯಚೂರು , ಡಿ.05:
ಮಾರ್ಗಶಿರ ಹುಣ್ಣಿಿಮೆ ಅಂಗವಾಗಿ ನಗರದ ಇಸ್ಕಾಾನ್ ಮಂಡಳಿಯಿಂದ ಶ್ರೀ ಚೈತನ್ಯ ಮಹಾಪ್ರಭು ಮತ್ತು ನಿತ್ಯಾಾನಂದ ಪ್ರಭುಗಳ ಶೋಭಾ ಯಾತ್ರೆೆ ನಡೆಸಲಾಯಿತು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆೆಯಿಂದ ಹಮ್ಮಿಿಕೊಂಡಿದ್ದ ರಥಯಾತ್ರೆೆಯ ಶೋಭಾ ಯಾತ್ರೆೆಗೆ ಮಾಜಿ ಶಾಸಕ ಎ.ಪಾಪಾರೆಡ್ಡಿಿ ಚಾಲನೆ ನೀಡಿದರು.
ಎಪಿಎಂಸಿಯಿಂದ ಆರಂಭವಾದ ಶೋಭಾಯಾತ್ರೆೆ ಮಾವಿನ ಕೆರೆಯ ಶ್ರೀ ಮಾತಾ ಮಾರಮ್ಮ ದೇವಿ ದೇವಸ್ಥಾಾನದವರೆಗೆ ಭಕ್ತರು ಹಾಡುತ್ತಾಾ ಸಾಗಿದರು. ದೇವಸ್ಥಾಾನದ ಬಳಿ ಅನ್ನದಾನ, ಭಗವದ್ಗೀತೆ, ದೀಪಗಳ ವಿತರಿಸಲಾಯಿತು.
ಇಸ್ಕಾಾನ್ ವ್ಯವಸ್ಥಾಾಪಕ ಸಾರಥಿ ಶ್ಯಾಾಮದಾಸ ಮಾತನಾಡಿ, ಕಲಿಯುಗದಲ್ಲಿ ಭಗವಂತನ ಪವಿತ್ರ ನಾಮಗಳನ್ನು ಜಪಿಸುವ ಮಹತ್ವ್ನ ಬೋಧಿಸುವುದು ಶ್ರೀ ಚೈತನ್ಯರ ಧ್ಯೇಯವಾಗಿತ್ತು. ಈ ಪ್ರಸ್ತುತ ಯುಗದಲ್ಲಿ ಕ್ಷುಲ್ಲಕ ವಿಷಯಗಳಿಗೂ ಜಗಳಗಳು ನಡೆಯುತ್ತವೆ, ಆದ್ದರಿಂದ ಶಾಸಗಳು ಈ ಯುಗದ ಸಾಕ್ಷಾತ್ಕಾಾರಕ್ಕಾಾಗಿ ಸಾಮಾನ್ಯ ವೇದಿಕೆಯ ಶಿಾರಸ್ಸು ಮಾಡಿವೆ ಎಂದರು.
ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಗಂಜ್ ಅಸೋಸಿಯೇಶನ್ ಅಧ್ಯಕ್ಷ ನರಸರೆಡ್ಡಿಿ, ರಾಧಾ ಶ್ಯಾಾಮಚಂದ್ರ ಸೇರಿ ಭಕ್ತರು ಇದ್ದರು.
ರಾಯಚೂರು : ಇಸ್ಕಾನ್ ಮಂಡಳಿಯಿಂದ ಶೋಭಾಯಾತ್ರೆ

