ಸುದ್ದಿಮೂಲ ವಾರ್ತೆ ರಾಯಚೂರು, ಡಿ.09:
ದೇವರ ಹೆಸರ ಮೇಲೆ ನಡೆಯುವ ಬಲಿ ನಿಲ್ಲಿಸಬೇಕು, ಭಕ್ತಿಿಯಿಂದ ದೇವರನ್ನು ಭಜಿಸಬೇಕು ಮೂಢನಂಬಿಕೆಯಿಂದ ಭಕ್ತರು ಹೊರ ಬರಬೇಕು ಎಂದು ಹಾಲುಮತ ಗುರುಪೀಠದ ಶ್ರೀ ರೇವಣ್ಣ ಸಿದ್ದೇಶ್ವರ ಶಾಂತಮಯ ಸ್ವಾಾಮೀಜಿ ಹೇಳಿದರು.
ಹೈದ್ರಾಾಬಾದ್ ನಗರದ ಜಿಯಾಗೂಡ ನಗರಸಭೆ ಕ್ರೀಡಾಂಗಣದಲ್ಲಿ ನಡೆದ ಭಕ್ತ ಕನಕದಾಸರ 538ನೇ ಜಯಂತಿ ಉತ್ಸವದ ಸಾನ್ನಿಿಧ್ಯ ವಹಿಸಿ ಮಾತನಾಡಿದರು. ಸಮಾಜದಲ್ಲಿ ತುಂಬಿರುವ ಮೂಢನಂಬಿಕೆ ಯಿಂದ ಭಕ್ತರು ಹೊರ ಬಂದು ಭಕ್ತಿಿಯಿಂದ ದೇವರ ಒಲಿಸಿಕೊಳ್ಳಬೇಕು. ಶ್ರೇಷ್ಠ ಗುರು ಭಕ್ತಿಿ ಭಾವದಿಂದ ಕೃಷ್ಣ ನನ್ನು ಒಲಿಸಿಕೊಂಡಿರುವುದು ಕನಕದಾಸರು ನೀಡಿರುವ ತತ್ವ ಸಂದೇಶ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಸೆ ಎಂಬುದು ಇರಬಾರದು ಬಂಗಾರದಂತ ಮಾತುಗಳ ನಿರಂತರವಾಗಿ ಕೇಳುತ್ತಿಿರಬೇಕು ಎಂದರು.
ಮಾತಿನಿಂದ ಜಗಳವಾಗಬಾರದು ಮಾತಿನಿಂದ ಎಲ್ಲರೂ ಒಂದೇ ಕಡೆ ಸೇರಿರಬೇಕು ಎಂಬ ಭಾವನೆ ಪ್ರತಿಯೊಬ್ಬರಲ್ಲಿ ನೆಲೆಸಬೇಕು ಅಂದಾಗ ಮಾತ್ರ ಮಾನವೀಯ ಮೌಲ್ಯಗಳು ಜೀವಂತವಾಗಿ ಇರಲು ಸಾಧ್ಯವಿದೆ ಎಂದು ನುಡಿದರು.
ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದ ನಗರದ ಟ್ರಾಾಫಿಕ್ ಡಿಸಿಪಿ ಕನ್ನಡಿಗರಾದ ರಾಹುಲ ಹೆಗಡೆ, ಕರ್ನಾಟಕದ ಮಹಾನ್ ಕವಿ, ಭಕ್ತ ಮತ್ತು ಸಮಾಜ ಸುಧಾರಕ ಶ್ರೀ ಕನಕ ದಾಸರು ಕಾವ್ಯ ಮತ್ತು ಕೀರ್ತನೆಗಳ ಮೂಲಕ ಜನರಿಗೆ ಸತ್ಯ, ನೀತಿ ಮತ್ತು ಮಾನ ವೀಯತೆಯ ಮಾರ್ಗ ತೋರಿಸಿದರು ಎಂದು ಕನಕದಾಸರ ಕೀರ್ತನೆಗಳ ಮೆಲಕು ಹಾಕಿದರು.
ಭಕ್ತಿಿ, ಶ್ರಮ ಮತ್ತು ನಂಬಿಕೆಯ ಶಕ್ತಿಿಯನ್ನು ನಮಗೆ ಬೋಧಿಸುತ್ತದೆ. ಕನಕ ದಾಸರು ಎಲ್ಲರನ್ನು ಸಮಾನವಾಗಿ ನೋಡುವ ಗುಣವನ್ನು ಸಾರಿದರು ಎಂದು ವಿವರಿಸಿದರು.
ಹೈದರಾಬಾದ ನಗರದಲ್ಲಿ ಕನಕದಾಸ ಜಯಂತಿ ಮಾಡಲು ಯಶಸ್ವಿಿಗೆ ಶ್ರಮಿಸಿದ ಕುರುಬ ಸಮಾಜದ ಹಿರಿಯರು ಅನುಭಾವಿಗ ಳಾದ ವೈಜಿನಾಥಪ್ಪ ಹಿರೋಡೆ ಹಾಗೂ ಜಗನ್ನಾಾಥ (ಟೇಲರ್)ಕುಂಟಬಿರ ಅವರಿಗೆ ಕನಕಶ್ರೀ ಪ್ರಶಸ್ತಿಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ತುಮಟುಂಟ ಅರುಣಕುಮಾರ, ಭಾಲ್ಕಿಿಯ ಬಾಲಾಜಿ ಜಬಾಡೆ, ನಾಗರಾಜ ಸೋರಾಳೆ, ದರಪಲ್ಲಿ ನರಸಿಂಹ, ಧರ್ಮೇಂದ್ರ ಪೂಜಾರಿ, ರಾಜಕುಮಾರ ಮನ್ನಳಿ, ಬಸವರಾಜ ಲಾರಾ, ಅಮರನಾಥ ಹಿರೋಡೆ, ಶಿವಾಜಿ ಕುಂಟಬಿರ, ಪ್ರಭು ಪೂಜಾರಿ ಉಪಸ್ಥಿಿತರಿದ್ದರು.
ಹೈದ್ರಾಬಾದಿನಲ್ಲಿ ಶ್ರೀ ಕನಕದಾಸರ ಜಯಂತಿ ಆಚರಣೆ ದೇವರ ಹೆಸರಿನ ಬಲಿ, ವೌಢ್ಯಾಚಾರ ನಿಲ್ಲಬೇಕು – ಶ್ರೀ ರೇವಣ್ಣ ಸಿದ್ದೇಶ್ವರ

