ಸುದ್ದಿಮೂಲ ವಾರ್ತೆ
ಸಿರುಗುಪ್ಪ,ಅ.4: ತಾಲೂಕಿನ ಕೊತ್ತಲಚಿಂತ ಗ್ರಾಮದಲ್ಲಿ ಶ್ರೀ ಹನುಮಂತಾವಧೂತರ ಅದ್ದೂರಿ ರಥೋತ್ಸವ ತಾಲೂಕಿನ ಸೀಮಾಂದ್ರದ ಗಡಿಭಾಗದ ಗ್ರಾಮವಾಗಿದ್ದು ಈತಾಲೂಕಿನಾದ್ಯಂತ ಮನೆ ಮಾತಾಗಿರುವ ಕೊತ್ತಲಚಿಂತೆ ಗ್ರಾಮದ ಶ್ರೀ ಹನುಮಂತಾವದೂತರು ಮಹಾನ್ ಪವಾಡ ಪುರುಷರಾಗಿದ್ದಾರೆ. ಮೂಗನಿಗೆ ಮಾತು ತರಿಸಿದ ಮಹನೀಯರಾಗಿದ್ದಾರೆ.
ಇದರಿಂದ ಇವರು ಬ್ರಹ್ಮೈಕ್ಯ ಶ್ರೀ ರಾಜಯೋಗಿ ಎಂದೆನಿಸಿಕೊಂಡಿದ್ದಾರೆ. ಇವರ ಭಕ್ತರು ಇಂದು 72ನೇ ವರ್ಷದ ಪುಣ್ಯರಾಧನೆ ಹಾಗೂ ಮಹಾ ರಥೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಒಟ್ಟು ನಾಲ್ಕು ದಿನಗಳ ಕಾಲ ನಡೆಯುವ ಆರಾಧನಾ ಮಹೋತ್ಸವದಲ್ಲಿ ಸಾವಿರಾರು ಜನ ಭಾಗವಹಿಸಿ ಅವಧೂತರಿಗೆ ಹಣ್ಣು ಕಾಯಿ ಕರ್ಪೂರ ನೀಡಿ ಪಾವನರಾದವರಂತೆ ಕಂಡು ಬಂದರು. ಕಳೆದ 71 ವರ್ಷಗಳ ಹಿಂದೆ ಮಾನವರಾಗಿ ಜನಿಸಿದ ಇವರು ಈ ಭೂಮಿಯಲ್ಲಿ ಬಾಳಿ ಅಮರರಾಗಿದ್ದಾರೆ.
ತಮ್ಮ ಆದರ್ಶಗಳಿಂದ ನಂದಾದೀಪ, ಘನಮಹಿಮ ಮತ್ತು ನಡೆದಾಡುವ ಹಾಗೂ ಮಾತನಾಡುವ ದೇವರಾಗಿದ್ದವರೆಂದು ಶ್ರೀ ಹನುಮಂತಯ್ಯನವರು ಪ್ರಖ್ಯಾತಿ ಪಡೆದರು. ಇವರ ಪವಾಡಗಳಿಂದ ಮತ್ತು ಕಲ್ಯಾಣ ಕಾರ್ಯಗಳಿಂದಲೇ ಇವರು ಅನೇಕ ಶಿಷ್ಯರನ್ನು ಹೊಂದಿ ಎಲ್ಲರಿಗೂ ಸರಳ ಮೋಕ್ಷದ ದಾರಿ ತೋರಿಸಿಕೊಟ್ಟ ಮಹಾನುಭಾವರಾಗಿದ್ದರು. ಇಲ್ಲಿ ಜಾತಿ ಮತ ಸಮಾಜದ ಬೇಧ ಬಾವವಿಲ್ಲದೆ ಎಲ್ಲ ವರ್ಗದವರು ಇಲ್ಲಿ ಭಾಗವಹಿಸಿ ಅವಧೂತರ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ.
ಮಂಗಳವಾರ ಆರಾಧನಾ ಮತ್ತು ಮಹೋತ್ಸವದ ಪ್ರಯುಕ್ತ ಅನೇಕ ಕಾರ್ಯಕ್ರಮಗಳು ಸತ್ಯನಾರಾಯಣ ಪೂಜೆ ಉತ್ಸವದ ಮೂರ್ತಿ ಮತ್ತು ಪಲ್ಲಕ್ಕಿ ಸೇವೆ ಅನ್ನಸಂತರ್ಪಣ ಕಾರ್ಯ ಮತ್ತು ವಿವಿಧ ಗ್ರಾಮೀಣ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.
ಜಘಮಗಿಸುವ ವಿದ್ಯುತ್ ದೀಪಗಳಿಂದ ಮಠವನ್ನು ಸಾಲಂಕೃತಗೊಳಿಸಲಾಗಿತ್ತು ಸುಮಂಗಲಿ ಮತ್ತು ಸುಹಾಸಿನಿರು ಕಳಸ ಕನ್ನಡಿಗರನ್ನು ಹಿಡಿದು ಮಠಕ್ಕೆ ಆಗಮಿಸಿ ಅವಧೂತರ ತೊಟ್ಟಿಲು ತೂಗಿ ಸೇವೆ ಸಲ್ಲಿಸಿದರು.
ಸಂಜೆ ಸಾಲಂಕೃತ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಾಣ ಬಿರುಸು ಛತ್ರಿ ಚಾಮರ ಮತ್ತು ವಾದ್ಯಗೋಷ್ಠಿಗಳೊಡನೆ ರಥವನ್ನು ಪಾಜಾಗಟ್ಟೆಯವರೆಗೂ ಎಳೆದು ಮತ್ತೆ ಮಠದ ಆವರಣಕ್ಕೆ ತರಲಾಯಿತು ಈ ವೇಳೆ ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು ತೆರಿಗೆ ಹೂಹಣ್ಣು ಸಮರ್ಪಿಸಿ ಭಕ್ತರು ಸಂಭ್ರಮ ಪಟ್ಟರು.
ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯ ಸದ್ಭಕ್ತ ಮಂಡಳಿಯವರು ಭಕ್ತರಿಗೆ ಎಲ್ಲ ಏರ್ಪಾಟುಗಳನ್ನು ಅಚ್ಚುಕಟ್ಟಾಗಿ ಮಾಡಿದ್ದರು.